ಕರ್ನಾಟಕ

ಕಾಂಗ್ರೆಸ್ ಟಿಕೆಟ್ ಇಲ್ಲ, ದೋಸ್ತಿಗೆ ನಡುಕ ತಂದ ಸುಮಲತಾ ಮೊದಲ ಹೆಜ್ಜೆ

Pinterest LinkedIn Tumblr


ಮಂಡ್ಯ: ಮಂಡ್ಯದ ಲೋಕಸಭಾ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಅಖಾಡಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದೆ.

ಪಕ್ಷೇತರ ಸ್ಪರ್ಧೆಗೆ ಹಠತೊಟ್ಟಿರುವ ಸುಮಲತಾ ನಾಳೆ[ಫೆ. 28] ಮಂಡ್ಯದಲ್ಲಿ ಕ್ಷೇತ್ರ ಪರ್ಯಟನೆ ಮಾಡಲಿದ್ದಾರೆ. ದೇವಾಲಯಗಳಿಗೆ ಭೇಟಿ ನೀಡಲಿದ್ದು ರಾಜಕೀಯ ಗಣ್ಯರನ್ನು ಮಾತನಾಡಿಸಿ ಅಭಿಪ್ರಾಯ ಕಲೆ ಹಾಕಲಿದ್ದಾರೆ.

ಬೆಳಿಗ್ಗೆ ಮುತ್ತೇಗೆರೆ ಗ್ರಾಮದ ಮನೆ ದೇವರು ಮಾಯಮ್ಮ ದೇವಾಲಯಕ್ಕೆ ಭೇಟಿ ಪೂಜೆ ಸಲ್ಲಿಸಲಿದ್ದಾರೆ. ಮಂಡ್ಯ ಜಿಲ್ಲೆಯ ಹಿರಿಯ ರಾಜಕೀಯ ನಾಯಕರಾದ ಮಾದೇಗೌಡ, ಎಂ.ಎಸ್.ಆತ್ಮಾನಂದ, ಎಚ್.ಡಿ.ಚೌಡಯ್ಯ ಮನೆಗಳಿಗೆ ಭೇಟಿ, ಮಾರ್ಗದರ್ಶನ, ಆಶೀರ್ವಾದ ಪಡೆಯಲಿರುವ ಸುಮಲತಾ ಬಳಿಕ ದೊಡ್ಡರಸಿನಕೆರೆಯಲ್ಲಿ ಅಂಬಿ ಪುತ್ತಳಿ ಅನಾವರಣ ಮಾಡಲಿದ್ದಾರೆ.

Comments are closed.