ಕರ್ನಾಟಕ

ಮೋದಿಯಂತೆ ರಾಜ್ಯದಿಂದಲೇ ‘ಲೋಕ’ ಪ್ರಚಾರ ಆರಂಭಿಸಲಿರುವ ರಾಹುಲ್

Pinterest LinkedIn Tumblr


ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದಿಂದ ರಾಜ್ಯದಿಂದಲೇ ಲೋಕಸಬಾ ಚುನಾವಣೆ ಪ್ರಚಾರ ಆರಂಭಿಸಿದ್ದರು. ಇದೀಗ ರಾಹುಲ್ ಗಾಂಧಿ ಸಹ ರಾಜ್ಯದಿಂದಲೇ ಚುನಾವಣಾ ರಣಕಹಳೆ ಮೊಳಗಿಸಲಿದ್ದಾರೆ.

ಮೋದಿ ಹುಬ್ಬಳ್ಳಿಯಿಂದ ಚಾಲನೆ ಕೊಟ್ಟಿದ್ರೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇದೇ ಮಾರ್ಚ್ 9 ರಂದು ಹಾವೇರಿಯಲ್ಲಿ ಲೋಕಸಭಾ ಚುನಾವಣೆ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​​, ‘ಬಿಜೆಪಿ ಶಕ್ತಿ ಕೇಂದ್ರ ಎಂಬ ಕಾರಣಕ್ಕೆ ಹಾವೇರಿ ಭಾಗದಲ್ಲಿ ಬೃಹತ್ ಸಾರ್ವಜನಿಕ ಸಮಾವೇಶ ಮೂಲಕ ರಾಹುಲ್​ ಗಾಂಧಿ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ.

ಹಾವೇರಿಯಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ ನಂತರವೇ ಇತರ ರಾಜ್ಯಗಳಲ್ಲಿ ರಾಹುಲ್​ ಗಾಂಧಿ ಪ್ರಚಾರ ನಡೆಸಲಿದ್ದಾರೆ’ ಎಂದು ಹೇಳಿದರು.

ಈಗಾಗಲೇ ರಾಜ್ಯ ನಾಯಕರಿಗೆ ಒಪ್ಪಿಗೆ ನೀಡಿರುವ ರಾಹುಲ್, ಸಮಾವೇಶಕ್ಕೆ ಬೇಕಾದ ಸಿದ್ಧತೆಯನ್ನು ಈಗಿನಿಂದಲೇ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಲಕ್ಷಾಂತರ ಜನ ಆ ಸಮಾವೇಶಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದರು.

ಅಲ್ಲದೇ, ರಾಯಚೂರಿನಲ್ಲಿ ನಾಳೆ ಸಮಾವೇಶ ನಡೆಸುತ್ತಿದ್ದೇವೆ. ನಂತರ ವಿಜಯಪುರದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ ಎಂದು ಹೇಳಿದರು.

Comments are closed.