ಕರ್ನಾಟಕ

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ, ಹಾಸನದಲ್ಲಿ ಸಂಭ್ರಮಾಚರಣೆ

Pinterest LinkedIn Tumblr


ಹಾಸನ: ದಕ್ಷ ಐಎಎಸ್ ಅಧಿಕಾರಿ ಎಂದೇ ಜನಜನಿತರಾಗಿರುವ ​ರೋಹಿಣಿ ಸಿಂಧೂರಿ ಅವರನ್ನು ಹಾಸನದಿಂದ ವರ್ಗಾವಣೆ ಮಾಡಿದಕ್ಕೆ ಸಂಭ್ರಮಾಚರಣೆ ಮಾಡಲಾಗಿದೆ.

ರೋಹಿಣಿ ಸಿಂಧೂರಿ ವರ್ಗಾವಣೆಯಾಗಿದ್ದಕ್ಕೆ‌ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (RPI) ಕಾರ್ಯಕರ್ತರು ಹಾಸನ ಜಿಲ್ಲಾಧಿಕಾರಿ ‌ಕಛೇರಿ ಎದುರು ಸಂಭ್ರಮಾಚರಣೆ ಮಾಡಿದರು.ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಮುಖಂಡ ಸತೀಶ್ ನೇತೃತ್ವದಲ್ಲಿ ಜನರಿಗೆ ಸಿಹಿ ಹಂಚಿ ಸಂಭ್ರಮಾಚರಣೆ ನಡೆಯಿತು.

ರೋಹಿಣಿ ಸಿಂಧೂರಿ ಎಂಥಹ ಐಎಎಸ್ ಅಧಿಕಾರಿ ಅಂತ ಇಡೀ ಕರ್ನಾಟಕಕ್ಕೆ ಗೊತ್ತಿದೆ. ಹಾಸನ ಜಿಲ್ಲಾಧಿಕಾರಿಗೆ ದಕ್ಷ ಹಾಗೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದು, ವರ್ಗಾವಣೆ ಆಗಿದಕ್ಕೆ ಬೇಸರ ವ್ಯಕ್ತಪರಿಸಿದ್ದಾರೆ. ಹೀಗಿರುವಾಗ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರು ಸಂಭ್ರಮಿಸಿದ್ದು ಏಕೆ ಎನ್ನುವುದು ಮಾತ್ರ ತಿಳಿದಿಲ್ಲ.

2017 ಜುಲೈ 14 ರಿಂದ ಹಾಸನ ಜಿಲ್ಲಾಧಿಕಾರಿಯಾಗಿ ಪ್ರಮಾಣಿಕತೆಯಿಂದ ಕಾರ್ಯನಿರ್ವಹಿಸಿದ್ದ ರೋಹಿಣಿ ಸಿಂಧೂರಿ ಅವರನ್ನು ಬೆಂಗಳೂರಿನ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದಶಿಯಾನ್ನಾಗಿ ನೇಮಿಸಿ ಇಂದು [ಶುಕ್ರವಾರ] ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಇನ್ನು ರೋಹಿಣಿ ಸ್ಥಾನಕ್ಕೆ ಅಲ್ಪ ಸಂಖ್ಯಾತ ನಿರ್ದೇಶನಾಲಯದ ನಿರ್ದೇಶಕರಾಗಿದ್ದ ಅಕ್ರಂ ಪಾಷಾ ಅವರನ್ನು ನೇಮಿಸಿದ್ದು, ಅದರಂತೆ ಇಂದು ಅವರು ಹಾಸನ ಜಿಲ್ಲಾಧಿಕಾರಿಗಿ ಅಧಿಕಾರ ಸ್ವೀಕರಿಸಿದರು.

Comments are closed.