ಕರ್ನಾಟಕ

ಯುದ್ಧ ಘೋಷಣೆ ಮಾಡಿ ಎಂದು ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆದ ಯುವಕ

Pinterest LinkedIn Tumblr


ಧಾರವಾಡ,: ಜಮ್ಮು ಕಾಶ್ಮೀರದ ಪುಲ್ವಾಮ್ ದಲ್ಲಿ ನಡೆದ ಭಯೋತ್ಪಾದಕರ ದಾಳಿಗೆ ಹುತಾತ್ಮರಾದ ಯೋಧರಿಗಾಗಿ ನಾವು ನಮ್ಮ ರಕ್ತ ಹರಿಸಲು ಕೂಡ ಸಿದ್ದ ಎಂದು ಕುಂದಗೋಳದ ಯುವಕನೊಬ್ಬ ಪ್ರಧಾನಮಂತ್ರಿಗೆ ಪತ್ರ ಬರೆದಿದ್ದಾರೆ.

‘ಮೂದಿಜೀಯವರೇ ಅವಶ್ಯಕತೆ ಬಿದ್ದರೆ ನಮ್ಮ ರಕ್ತ ಹರಿಸಲು ನಾವು ಸಿದ್ದ. ಯೋಧರ ಪ್ರಾರ್ಥೀವ ಶರೀರ ಕಂಡು ನಮ್ಮ ರಕ್ತ ಕುದಿಯುತ್ತಿದೇ. ಪಾಪಿ ಪಾಕಿಸ್ತಾನದ ರುಂಡ ಚಂಡಾಡಿ ಪ್ರತೀಕಾರ ತೀರಿಸಿಕೊಳ್ಳುವರಿಗೂ ನಮಗೆ ಸಮಾಧಾನವಿಲ್ಲಾ. ಕೂಡಲೇ ಯುದ್ಧ ಘೋಷಣೆ ಮಾಡಿ’ ಎಂದು ರಕ್ತದಲ್ಲಿಯೇ ಪತ್ರ ಬರೆದು ತನ್ನ ದೇಶಾಭೀಮಾನ ಮೆರೆದಿದ್ದಾನೆ.

ತನ್ನ ರಕ್ತದಲ್ಲಿ ಪತ್ರ ಬರೆದು ಪ್ರಧಾನ ಮಂತ್ರಿಗಳ ಕಚೇರಿಗೆ ರವಾನೆ ಮಾಡಿದ್ದಾನೆ. ಅಂದ ಹಾಗೆ ಈ ಪತ್ರ ಬರೆದ ಯುವಕನ ಹೆಸರು ಗಿರೀಶಗೌಡ ಎನ್ ಮುದೀಗೌಡರ. ಕುಂದಗೋಳ ತಾಲೂಕಿನ ಯಲಿವಾಳ ಗ್ರಾಮದ ಯುವ ಹೋರಾಟಗಾರ.

ತನ್ನ ಸಾಮಾಜಿಕ ಕಾಳಜಿ, ಹೋರಾಟದಿಂದಲೇ ಜಿಲ್ಲೆಯ ಮನೆ ಮಾತಾಗಿರುವ ಗಿರೀಶಗೌಡರ ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Comments are closed.