ಕರ್ನಾಟಕ

ಸ್ಪೀಕರ್​​ ರಮೇಶ್​​ ಕುಮಾರ್​​ ವಿರುದ್ಧ 50 ಕೋಟಿ ಲಂಚ ಆರೋಪ: ಸದನದಲ್ಲಿ  ಹತ್ತಾರು ಶಾಸಕರ ಪ್ರತಿಕ್ರಿಯೆ!

Pinterest LinkedIn Tumblr


ಬೆಂಗಳೂರು: ಆಪರೇಷನ್​​ ಕಮಲಕ್ಕೆ ಸಂಬಂಧಿಸಿಂದತೇ ಸಿಎಂ ಎಚ್​​​.ಡಿ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿದ್ದ ಆಡಿಯೋದಲ್ಲಿ ಸ್ಪೀಕರ್​​ ರಮೇಶ್​​ ಕುಮಾರ್​​ ವಿರುದ್ಧ 50 ಕೋಟಿ ಹಣ ಪಡೆದಿರುವ ಆರೋಪ ಕೇಳಿ ಬಂದಿತ್ತು. ಇಂದು ಸದನದಲ್ಲಿ ಈ ಆಡಿಯೋ ಬಗ್ಗೆ ಚರ್ಚೆ ನಡೆಯುತ್ತಿದ್ದು, ತಮ್ಮ ವಿರುದ್ಧ ಕೇಳಿ ಬಂದ ಆರೋಪಕ್ಕೆ ಸ್ಪೀಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾನು ಬಾಡಿಗೆ ಮನೆಯಲ್ಲಿ ಜೀವಿಸುತ್ತಿದ್ದೇನೆ. ಅಷ್ಟು ಪ್ರಮಾಣ ಹಣವನ್ನು ಎಲ್ಲಿ ಇಟ್ಟುಕೊಳ್ಳಲಿ ಎಂದು ಪ್ರಶ್ನಿಸುವ ಮುಖೇನ ಗದ್ಗದಿತರಾಗಿ ರಮೇಶ್ ಕುಮಾರ್​​ ಕಣ್ಣೀರಿಟ್ಟಿದ್ದಾರೆ.

ನಾನು 50 ಕೋಟಿ ಲಂಚ ಪಡೆದಿದ್ದೇನೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ನನ್ನ ಬಗ್ಗೆ ಮಾಧ್ಯಮಗಳಲ್ಲಿ ಇಷ್ಟು ಹಣ ಪಡೆದಿದ್ದರು ಎಂಬತೇ ಸುದ್ದಿ ಬಿತ್ತಲಾಗುತ್ತಿದೆ. ಈ ವಿಚಾರದಿಂದ ಮನಸ್ಸಿಗೆ ತುಂಬಾ ನೋವಾಗಿದೆ. ಬಾಡಿಗೆ ಮನೆಯಲ್ಲಿದ್ದೇನೆ. ಸರಳವಾಗಿ ಜೀವಿಸುತ್ತಿದ್ದೇವೆ. 50 ಕೋಟಿ ಹಣ ಯಾರು ಕೊಟ್ಟಿದ್ದಾರೆ? ಎಲ್ಲಿ ಮತ್ತು ಹೇಗೆ ಕೊಟ್ಟಿದ್ದಾರೆ? ನನಗ್ಯಾಕೇ ಈ ರೀತಿ ಅನ್ಯಾಯ ಆಗಿದೆ ಎಂದು ಭಾವುಕರಾದರು.

ಯಾರೋ ನನಗೆ ಸಂಬಂಧಿಸದ ವ್ಯಕ್ತಿ ಆರೋಪ ಎಸಗಿದ್ದರೇ ಯೋಚನೆ ಮಾಡುತ್ತಿರಲಿಲ್ಲ. ಈ ಸದನದಲ್ಲಿಯೇ ಪ್ರಮುಖ ಸ್ಥಾನದಲ್ಲಿರುವ ವ್ಯಕ್ತೊಯೊಬ್ಬರು ನನ್ನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಅವಿರೋಧ ಆಯ್ಕೆಯಾದ ನಾನು ಇಂತಹ ಆರೋಪ ಹೊತ್ತು ಹೇಗೆ ಕೆಲಸ ಮಾಡಲು ಸಾಧ್ಯ? ಹೀಗಾಗಿ ರಾಜೀನಾಮೆ ನೀಡುತ್ತೇನೆ. ನನ್ನ ಮೇಲೆ ಆರೋಪ ಎಸಗಿದ ಶಾಸಕರು ಸದನದಿಂದ ಹೊರಹೇಗಬೇಕು; ಇಲ್ಲವಾದಲ್ಲಿ ನಾನು ರಾಜೀನಾಮೆ ನೀಡಬೇಕು ಎಂದು ಖಡಕ್ಕಾಗಿಯೇ ಹೇಳಿದ್ದಾರೆ.

ಶಾಸಕರ ಪ್ರತಿಕ್ರಿಯೆ ಹೇಗಿತ್ತು?

ಸದನದಲ್ಲಿ ನಿಮ್ಮ ಮೇಲೆ ಯಾರು ಆರೋಪ ಮಾಡಿಲ್ಲ. ಹೀಗಾಗಿ ಇದನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳುವ ಆಗಿಲ್ಲ. ನೀವು ಭಾವುಕರಾಗಬೇಡಿ; ಸದನದಲ್ಲಿ ಯಾರಾದರೂ ಈ ರೀತಿ ಆರೋಪ ಎಸಗಿದ್ದರೇ ವಿರೋಧ ಮಾಡುತ್ತಿದ್ದೆವು. ನಿಮ್ಮ ಮೇಲೆ ನನಗೆ ನಂಬಿಕೆಯಿದೆ. ಹೀಗಾಗಿ ರಾಜೀನಾಮೆ ನೀಡುವ ಮಾತು ಹೇಳಬೇಡಿ.
— – ಮಾಧುಸ್ವಾಮಿ, ಬಿಜೆಪಿ ಶಾಸಕ

ನಮ್ಮ ಮೇಲೆ ಈ ರೀತಿ ಆರೋಪ ಮಾಡೋದು ಸರಿಯಲ್ಲ. ಈ ಆರೋಪ ಯಾರು ಮಾಡಿದ್ದಾರೆ? ಎಲ್ಲಿ ಮಾತನಾಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಯಾವುದೋ ಆಧಾರದ ಮೇರೆ ಈ ವಿಚಾರವನ್ನು ತೀಕ್ಷ್ಣವಾಗಿ ಚರ್ಚಿಸುವುದು ತಪ್ಪಾಗುತ್ತದೆ. ನಮಗೆ ಒಂದು ಆಡಿಯೋ ಲಭ್ಯವಾಗಿದೆ. ನೀವು ಅನುಮತಿ ನೀಡಿದರೇ, ಅದನ್ನು ಹಾಜರು ಮಾಡುತ್ತೇನೆ. ಇದರ ಬಗ್ಗೆ ಪೊಲೀಸ್​​ ತನಿಖೆ ನಡೆಯಲಿ.
— – ಸಚಿವ ಕೃಷ್ಣೇಬೈರೇಗೌಡ

ನಿಮ್ಮ ಮೇಲಿನ ಆರೋಪಕ್ಕೆ ಪೂರಕ ಸಾಕ್ಷ್ಯಗಳನ್ನು ಒದಗಿಸಬೇಕು. ಇದಕ್ಕಾಗಿ ಧ್ವನಿಸುರುಳಿ ಆಧಾರದಲ್ಲಿ ತನಿಖೆ ನಡೆಯಲಿ. ನಿಮ್ಮ ಸರ್ಕಾರ ತನಿಖೆ ನಡೆಸಿದ್ದಲ್ಲಿ ನ್ಯಾಯ ಸಿಗುವುದಿಲ್ಲ. ನಮಗೂ ಅನುಮಾನ ಶುರುವಾಗುತ್ತದೇ. ಹೀಗಾಗಿ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು.
— – ಗೋವಿಂದ ಕಾರಜೋಳ, ಬಿಜೆಪಿ ಶಾಸಕ

ತಪ್ಪಿತಸ್ಥರು ಯಾರೇ ಆದರೂ ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ. ನೀವು ನಿಷ್ಕಳಂಕ ರಾಜಕಾರಣಿ. ನಿಮ್ಮ ಮೇಲೆ ಯಾವ ಆಪಾದನೆ ಬಂದರೂ ನಾವು ನಂಬಲ್ಲ. ಹಾಗೆಯೇ ಈ ಸದನದ ಎಲ್ಲಾ ಶಾಸಕರಿಗೂ ನಿಮ್ಮ ಮೇಲೆ ಕೇಳಿ ಬಂದಿರುವ ಆರೋಪದಲ್ಲಿ ಸತ್ಯವಿಲ್ಲ ಎಂದು ಗೊತ್ತಿದೆ.
— – ದಿನೇಶ್​​ ಗುಂಡೂರಾವ್​​, ಕೆಪಿಸಿಸಿ ಅಧ್ಯಕ್ಷ

ನಿಮ್ಮ ಬಗ್ಗೆ ನಮ್ಮೆಲ್ಲರಿಗೂ ವಿಶ್ವಾಸವಿದೆ. ನಾಯಿ ಬೊಗಳಿದರೆ ದೇವಲೋಕ ಹಾಳಾಗಲ್ಲ. ಹೀಗಾಗಿ ಸಮಗ್ರ ತನಿಖೆ ನಡೆಸಿ ಆರೋಪಿಯನ್ನು ಜೈಲಿಗೆ ಹಾಕಿಸಿ.
— – ಸಚಿವ ಸಾ.ರಾ ಮಹೇಶ್

ರಾಜಕಾರಣವನ್ನು ಲಘುವಾಗಿ ನೋಡುವಂತಾಗಿದೆ. ಜನ ನಮ್ಮ ಬಗ್ಗೆ ಲಘುವಾಗಿ ಮಾತಾಡುತ್ತಿದ್ದಾರೆ. ಆಡಿಯೋ ಸತ್ಯಾಸತ್ಯತೆ ಜನತೆಗೆ ಗೊತ್ತಾಗಬೇಕು. ಬಹಳ ವರ್ಷಗಳಿಂದ ರಾಜಕಾರಣದಲ್ಲಿದ್ದೇನೆ. ನಾನು ಯಾರ ಹೆಸರನ್ನೂ ಪ್ರಸ್ತಾಪ ಮಾಡಿಲ್ಲ. ನಾವೆಲ್ಲರೂ ಸಾರ್ವಜನಿಕ ಜೀವನದಲ್ಲಿದ್ದೇವೆ. ನಿಮ್ಮ ಮೇಲಿನ ಕಾರ್ಮೋಡ ಕ್ಲಿಯರ್ ಆಗಬೇಕು. ನನ್ನ ಅಭಿಪ್ರಾಯವಷ್ಟೇ ಹೇಳಿದ್ದೇನೆ. ಕೂಡಲೇ ಎಸ್ಐಟಿ ತನಿಖೆಗೆ ಒಪ್ಪಿಸಿ.
— – ಮಾಜಿ ಸಿಎಂ ಸಿದ್ದರಾಮಯ್ಯ

ಪ್ರಕರಣದ ಸುದೀರ್ಘ ತನಿಖೆಗೆ ನಾನು ಆದೇಶಿಸುತ್ತೇನೆ. ಸತ್ಯಾಸತ್ಯತೆ ಹೊರ ತರಲು ಎಸ್ಐಟಿ ತನಿಖೆಗೆ ಸೂಚಿಸುತ್ತೇನೆ. ನಿಮ್ಮ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ. ಯಾರೇ ಆರೋಪ ಮಾಡಿದ್ದರು, ಅದಕ್ಕೆ ತಕ್ಕ ಶಿಕ್ಷೆಯಾಗಬೇಕು.
— – ಸಿಎಂ ಎಚ್​​.ಡಿ ಕುಮಾರಸ್ವಾಮಿ

ಜನರು ನಮ್ಮನ್ನು ಕಳ್ಳ ಕಳ್ಳ ಅಂತಾರೆ. ಮಾಧ್ಯಮಗಳಲ್ಲಿ ಕೀಳು ಮಟ್ಟದಲ್ಲಿ ತೋರಿಸ್ತಾರೆ. ಈಗ ಶಾಸಕರ ಬಗ್ಗೆ ಕೀಳು ಭಾವನೆಯಿದೆ. ಈ ಬಗ್ಗೆ ನೀವು ಚಾರಿತ್ರಿಕ ತೀರ್ಪು ಕೊಡಬೇಕು. ಆಡಿಯೋ ಬಗ್ಗೆ ಸಮಗ್ರ ತನಿಖೆಯಾಗಲಿ.
— – ಡಿ.ಕೆ ಶಿವಕುಮಾರ್
​​

ಕೊಲೆ ಮಾಡಿದವನೂ ಹೇಗೆ ಅಪರಾಧಿಯೋ, ಹಾಗೆಯೇ ಕೊಲೆಗೆ ಪ್ರೇರಣೆ ನೀಡಿದವನೂ ಅಪರಾಧಿಯೇ. ಸ್ಪೀಕರ್ ಬಗ್ಗೆ ಇಂಥ ಮಾತನ್ನು ರೆಕಾರ್ಡ್ ಮಾಡಿಸಿದ್ದಾರೆ. ಆಡಿಯೋ ಮಾಡಿದವರು ಮತ್ತು ಮಾತನಾಡಿದವರು ಇಬ್ಬರ ಬಗ್ಗೆ ತನಿಖೆಯಾಗಬೇಕು. ಈ ಆಡಿಯೋ ಬಗ್ಗೆ ಸಂಪೂರ್ಣ ತನಿಖೆಯಾಗಲಿ. ನಾವು ನಿಮ್ಮೊಂದಿಗಿದ್ದೇವೆ.
— – ಶಾಸಕ ಕೆ.ಜಿ.ಬೋಪಯ್ಯ

ನಿಮ್ಮ ತನಿಖೆಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಯಾವುದೇ ನಿರ್ಧಾರ ತೆಗೆದುಕೊಂಡರು ತೊತೆಗಿರುತ್ತೇವೆ. ಧ್ವನಿಸುರುಳಿ ಅಸಲಿ ಹೌದೋ, ಅಲ್ಲವೋ? ಇದು ಕೇವಲ ಸ್ಪೀಕರ್ ವೈಯಕ್ತಿಕ ನೋವಲ್ಲ. ನಮ್ಮೆಲ್ಲರ ನೋವಾಗಿದೆ. ಆಪರೇಷನ್ ಆಡಿಯೋ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು.
— – ಕೆ.ಎಸ್​​​ ಈಶ್ವರಪ್ಪ, ಬಿಜೆಪಿ ಶಾಸಕ

Comments are closed.