ಕರ್ನಾಟಕ

ರಾಜ್ಯ ಬಜೆಟ್: 4 ಹೊಸ ತಾಲೂಕುಗಳು: ಯಾವ ಜಿಲ್ಲೆಯಲ್ಲಿ ಗೊತ್ತಾ?

Pinterest LinkedIn Tumblr


ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ 2019-20ರ ಆಯವ್ಯಯ ಮಂಡಿಸಿ, ನಾಲ್ಕು ಹೊಸ ತಾಲೂಕುಗಳನ್ನು ರಚಿಸುವುದಾಗಿ ಘೋಷಿಸಿದ್ದಾರೆ.

ರಾಮನಗರದ ಹಾರೋಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆಯ ಜೇಳೂರು, ಬಾಗಲಕೋಟೆಯ ತೇರದಾಳ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಳಸವನ್ನು ಹೊಸ ತಾಲೂಕುಗಳನ್ನಾಗಿ ರಚಿಸುವುದಾಗಿ ಘೋಷಿಸಿದ್ದಾರೆ.

ಇದುವರೆಗೆ ರಾಮನಗರ ಜಿಲ್ಲೆಯಲ್ಲಿ ರಾಮನಗರ, ಮಾಗಡಿ, ಕನಕಪುರ ಹಾಗೂ ಚನ್ನಪಟ್ಟಣ ತಾಲೂಕುಗಳಿದ್ದವು. ಚಿಕ್ಕಬಳ್ಳಾಪುರದಲ್ಲಿ ಚಿಕ್ಕಾಬಳ್ಳಾಪುರ, ಬಾಗೇಪಲ್ಲಿ, ಚಿಂತಾಮಣಿ, ಗೌರಿಬಿದನೂರು, ಗುಡಿಬಂಡೆ ಹಾಗೂ ಶಿಡ್ಲಘಟ್ಟ ತಾಲೂಕುಗಳಿದ್ದವು.

ಬಾಗಲಕೋಟೆ ಜಿಲ್ಲೆಯಲ್ಲಿ ಬಾಗಲಕೋಟೆ, ಜಮಖಂಡಿ, ಮುದೋಳ, ಬಾದಾಮಿ, ಬೀಳಗಿ, ಹುನಗುಂದ, ಇಳಕಲ್, ರಬಕವಿ ಬನಹಟ್ಟಿ, ಗುಳೇದಗುಡ್ಡ ತಾಲೂಕಿಗಳಿದ್ದವು. ಚಿಕ್ಕಮಗಳೂರಿನಲ್ಲಿ ಚಿಕ್ಕಮಗಳೂರು, ಕಡೂರು, ಕೊಪ್ಪ, ಮೂಡಿಗೆರೆ, ನರಸಿಂಹರಾಜಪುರ, ಶೃಂಗೇರಿ, ತರೀಕೆರೆ, ಅಜ್ಜಂಪುರ ತಾಲೂಕುಗಳಿದ್ದವು.

ಕರ್ನಾಟಕದಲ್ಲಿ ಒಟ್ಟು 227 ತಾಲೂಕುಗಳಿದ್ದು, ಈ ನಾಲ್ಕು ಸೇರಿದರೆ 231 ತಾಲೂಕುಗಳಾಗಿವೆ.

Comments are closed.