ಕರ್ನಾಟಕ

ಸುಬ್ರಹ್ಮಣ್ಯ ಸುತ್ತಮುತ್ತಾ ಗುಡುಗು ಮಿಂಚು ಸಹಿತ ಭಾರಿ ಮಳೆ: ಸಿಡಿಲಿಗೆ ಓರ್ವ ಬಲಿ

Pinterest LinkedIn Tumblr


ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಹಾಗೂ ಸುತ್ತಮುತ್ತಲ ಪರಿಸರದಲ್ಲಿ ಗುರುವಾರ ಸಂಜೆ ಗುಡುಗು ಮಿಂಚು ಸಹಿತ ಭಾರಿ ಮಳೆ ಸುರಿದಿದ್ದು, ಸಿಡಿಲು ಬಡಿದು ಓರ್ವ ಯುವಕ ಮೃತ ಪಟ್ಟಿದ್ದಾನೆ.

ಸುಬ್ರಹ್ಮಣ್ಯದ ಖಾಸಗಿ ವಸತಿ ಗೃಹಕ್ಕೆ ಸಿಡಿಲು ಬಡಿದ ಪರಿಣಾಮ ಕಾರ್ಮಿಕ ಪ್ರವೀಣ್(20) ಎನ್ನುವ ಯುವಕ ಸಾವನ್ನಪ್ಪಿದ್ದಾನೆ.ಪ್ರವೀಣ್‌ ಹರಿಹರ ಪಳ್ಳತ್ತಡ್ಕ ನಿವಾಸಿ ಎಂದು ತಿಳಿದು ಬಂದಿದೆ.

ದಿಢೀರ್‌ ಸುರಿದ ಮಳೆಗೆ ಕೆಎಸ್ಎಸ್ ಕಾಲೇಜಿನಲ್ಲಿ ನಡೆಯುತ್ತಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ ಜಿಲ್ಲಾ ಮಟ್ಟದ ಪುರುಷರ ಕಬಡ್ಡಿ ಪಂದ್ಯಾಟಕ್ಕೆ ಅಡಚಣೆ ಉಂಟಾಯಿತು.

ಪಂದ್ಯಾಟ ನಡೆಯುವ ಅಂಗಣದ ಸುತ್ತ ಹಾಕಲಾಗಿದ್ದ ಶಾಮಿಯಾನ.ವೇದಿಕೆಗಳು ಗಾಳಿಗೆ ಹಾರಿ ಹೋಗಿವೆ.

Comments are closed.