ಕರ್ನಾಟಕ

ಸಮ್ಮಿಶ್ರ ಸರ್ಕಾರ ರಕ್ಷಿಸಿಸಲು 5 ಸಚಿವರ ರಾಜೀನಾಮೆ?

Pinterest LinkedIn Tumblr


ಬೆಂಗಳೂರು: ದೋಸ್ತಿ ಸರ್ಕಾರ ಉಳಿಸಲು ಅಂತಿಮ ಹಂತದ ಕಸರತ್ತು ನಡೆಯುತ್ತಿದೆ. ಒಂದು ಕಡೆ ಬಂಡಾಯ ಶಾಸಕರನ್ನು ಕಾಂಗ್ರೆಸ್ ಅನರ್ಹ ಮಾಡುವ ಮಟ್ಟಕ್ಕೆ ತೀರ್ಮಾನ ತೆಗೆದುಕೊಂಡಿದ್ದರೂ ಇನ್ನೊಂದು ಕಡೆ ಸುರಕ್ಷಾ ತಂತ್ರ ಎಂಬ ಕಾರಣಕ್ಕೆ 5 ಜನ ಸಚಿವರನ್ನು ರಾಜೀನಾಮೆ ಪಡೆದುಕೊಳ್ಳಲು ಕಾಂಗ್ರೆಸ್ ಮುಂದಾಗಿದೆ.

ಹಿಂದಿನ ಸರಕಾರದಲ್ಲಿಯೂ ಸಚಿವರಾಗಿದ್ದ ಯು.ಟಿ ಖಾದರ್, ಕೃಷ್ಣ ಭೈರೇಗೌಡ, ಕೆ.ಜೆ ಜಾರ್ಜ್ ವಿಧಾನ ಪರಿಷತ್‌ ಸದಸ್ಯೆಯಾಗಿ ಸಚಿವೆಯಾಗಿರುವ ಜಯಮಾಲಾ, ಭ್ರಷ್ಟಾಚಾರದ ಆರೋಪ ಕೇಳಿ ಬಂದಿದ್ದ ಪುಟ್ಟರಂಗಶೆಟ್ಟಿ ಅವರ ರಾಜೀನಾಮೆ ಪಡೆದುಕೊಳ್ಳಲಾಗುತ್ತಿದೆ ಎಂಬ ಮಾತು ಕೇಳಿ ಬಂದಿದೆ.

ಕಮಲ-ದಳ ದೋಸ್ತಿಗೂ ವೇದಿಕೆ ಸಿದ್ಧ

ಬಿಜೆಪಿಯ ಆಪರೇಶನ್‌ಗೆ ಪ್ರತಿಯಾಗಿ ಕಾಂಗ್ರೆಸ್‌ನ ಪ್ರಭಾವಿ ಸಚಿವರೊಬ್ಬರು ಅಖಾಡಕ್ಕೆ ಇಳಿದು ರಿವರ್ಸ್ ಆಪರೇಶನ್‌ಗೆ ಮುಂದಾಗಿದ್ದಾರೆ. ಕಮಲ ಪಾಳಯದಿಂದಲೇ ಜನರನಬ್ನು ಕರೆತಂದು ಅವರಿಗೆ ವಿವಿಧ ಜವಾಬ್ದಾರಿ ವಹಿಸುಕೊಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

Comments are closed.