ಕರ್ನಾಟಕ

ಸಿದ್ದರಾಮಯ್ಯ ಹುಚ್ಚ, ಮೈಮೇಲೆ ಜ್ಞಾನ ಇಲ್ಲದಂತೆ ಮಾತಾಡ್ತಾರೆ’; ಈಶ್ವರಪ್ಪ

Pinterest LinkedIn Tumblr


ದಾವಣಗೆರೆ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಂತರ ಕಾಂಗ್ರೆಸ್ ಪಕ್ಷ ದಿಕ್ಕೆಟ್ಟು ಹೋಗಿದೆ. ಕಾಂಗ್ರೆಸ್ ತನ್ನ ಶಾಸಕರನ್ನು ಹಿಡಿತದಲ್ಲಿಟ್ಟುಕೊಂಡಿಲ್ಲ. ರೆಸಾರ್ಟ್​ನಲ್ಲಿ ಹಂತಕ್ಕೆ ಹೋಗಿದ್ದಾರೆ. ನಾವು ಯಾವುದೇ ಆಪರೇಷನ್ ಕಮಲ ಮಾಡುವುದಿಲ್ಲ. ಅವರಿಗೆ ಅವರೇ ಆಪರೇಷನ್ ಮಾಡಿಕೊಳ್ಳುತ್ತಿದ್ದಾರೆ ಎಂದು ದಾವಣಗೆರೆಯಲ್ಲಿ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಗುಂಪು ಮಾಡಿಕೊಂಡಿದ್ದಾರೆ. ವಿರೋಧ ಪಕ್ಷವಾಗಿ ನಮ್ಮ ಕೆಲಸ ನಾವು ಮಾಡುತ್ತಿದ್ದು ನಮ್ಮ ಶಾಸಕರು ನಮ್ಮ ಜೊತೆ ಇದ್ದಾರೆ. ಸಿದ್ದರಾಮಯ್ಯ ದೊಡ್ಡ ಹುಚ್ಚ. ಅವರು ಮೈ ಮೇಲೆ ಜ್ಞಾನ ಇಲ್ಲದಂತೆ ಮಾತಾಡ್ತಾರೆ. ಶಾಂತಿವನದ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಇನ್ನು ಚುನಾವಣೆಗೆ ನಿಲ್ಲುವುದಿಲ್ಲ ಎಂದಿದ್ದ ಸಿದ್ದರಾಮಯ್ಯ ಹೊರಗೆ ಬಂದ ನಂತರ ನಾನೇ ಸಿಎಂ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಶಾಂತಿ ಸುವ್ಯವಸ್ಥೆ ಕಾಪಾಡಲು ಕಾಂಗ್ರೇಸ್ ವಿಫಲವಾಗಿದೆ. ಆನಂದ್​ ಸಿಂಗ್​ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಕಂಪ್ಲಿ ಗಣೇಶ್ ಅವರನ್ನು ಬಂಧಿಸುವಲ್ಲಿ ಕಾಂಗ್ರೆಸ್​ ವಿಫಲವಾಗಿದೆ. ಕಾಂಗ್ರೆಸ್​ಗೆ ತಾಕತ್ತಿದ್ದರೆ ಶಾಸಕರನ್ನು ಹಿಡಿತದಲ್ಲಿಟ್ಟುಕೊಳ್ಳಲಿ, ಇಲ್ಲವಾದರೆ ರಾಜಿನಾಮೆ ನೀಡಲಿ. ನಮಗೆ ಅವಕಾಶ ಸಿಕ್ಕರೆ ನಾವು ಸರ್ಕಾರ ರಚನೆ ಮಾಡುತ್ತೇವೆ. ನಾವು ಹಣ ಕೊಟ್ಟು ಆಮಿಷವೊಡ್ಡಿದ್ದೇವೆ ಎಂದು ಒಬ್ಬ ಶಾಸಕರ ಹೆಸರು ಬಹಿರಂಗ ಪಡಿಸಲಿ. ನಮ್ಮ ಪಕ್ಷದ ಸುಭಾಷ್ ಗುತ್ತೇದಾರ್ ಗೆ ಹಣ, ಸಚಿವ ಸ್ಥಾನ ನೀಡುತ್ತೇವೆ ಎಂದು ಕುಮಾರಸ್ವಾಮಿ ಅವರೇ ಹೇಳಿದ್ದಾರೆ ಅವರು ಹೇಳಿದ್ದಾರೆ. ತಮ್ಮೊಳಗಿನ ಆಂತರಿಕ ಗೊಂದಲದಿಂದ ಸಿಎಂ ಯಾವ ಭಾಷೆ ಬೇಕಾದರೂ ಮಾತನಾಡುತ್ತಾರೆ. ಒಳ್ಳೆ ಆಡಳಿತ ಕೊಡಲು ಸಾಧ್ಯವಾಗದಿದ್ದರೆ ಮನೆಗೆ ಹೋಗಲಿ. ಅವರ ಸರ್ಕಾರ ಬಿದ್ದರೆ ನಾವು ಅಧಿಕಾರಕ್ಕೆ ಬರುತ್ತೇವೆ. ಕಾಂಗ್ರೆಸ್​ನವರು ಒಬ್ಬರಿಗೊಬ್ಬರು ಕೊಲೆ ಮಾಡಿಕೊಳ್ಳುತ್ತಿರುವಾಗ ನಾವು ಸುಮ್ಮನಿರಬೇಕಾ? ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.

Comments are closed.