ಕರ್ನಾಟಕ

ಸಮ್ಮಿಶ್ರ ಸರ್ಕಾರದ ಸಚಿವ-ಶಾಸಕರ ನಡುವೆ ಚಕಮಕಿ!

Pinterest LinkedIn Tumblr


ಹಾಸನ: ಮೈತ್ರಿ ಪಕ್ಷದ ಶಾಸಕ, ಸಚಿವರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಕಳೆದ ಹತ್ತು ವರ್ಷದಿಂದ ಹಾಸನ ಜಿಲ್ಲೆಗೆ ಏನೂ ಕೆಲಸ ಆಗಿರಲಿಲ್ಲ ಎಂದು ಸಚಿವ ರೇವಣ್ಣ ಸಭೆಯಲ್ಲಿ ಹೇಳಿದ ನಂತರ ಬೆಂಕಿ ಹೊತ್ತಿಕೊಂಡಿತು.

ಸಚಿವರ ಮಾತಿನಿಂದ ಕೆರಳಿದ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಗೋಪಾಲಸ್ವಾಮಿ, ಈ‌ ಹಿಂದೆ ನಮ್ಮ ಸಿದ್ದರಾಮಯ್ಯ ಸರ್ಕಾರದಲ್ಲಿಯೂ ಕೆಲಸವಾಗಿದೆ ನೀವು ಹಾಗೆ ಹೇಳಬೇಡಿ ಎಂದು ಗರಂ ಆದರು. ಏನು ಕೆಲಸ ಆಗಿದೆ ಹೇಳಿ ಎಂದು ಏರು ದ್ವನಿಯಲ್ಲೇ ಕೇಳಿದ ಸಚಿವ ರೇವಣ್ಣ‌ ಕೇಳಿದರು. ಹಾಸನದಲ್ಲಿ ಬೇಕಾದಷ್ಟು ಕೆಲಸ ಆಗಿದೆ ಎಂದು ಶಾಸಕರು ಮತ್ತೆ ಉತ್ತರಿಸಿದರು.

ಬರೀ ಇಂಜಿನಿಯರಿಂಗ್ ಕಾಲೇಜು ರೋಡ್ ರಿಪೇರಿ ಮಾಡಲೂ ನಿಮ್ಮಿಂದ ಆಗಿಲ್ಲ ಎಂದು ರೇವಣ್ಣ‌ ಆಕ್ರೋಶ ವ್ಯಕ್ತಪಡಿಸಿ ನಿಮ್ಮ ಅವಧಿಯಲ್ಲಿ ಕಾಲೇಜು ಮುಚ್ಚೋ ಹಾಗಾಗಿದೆ ಎಂದು ಕಿಡಿಕಾರಿದರು. ನಮ್ಮ ಸರ್ಕಾರದ ಅವಧಿಯಲ್ಲಿಯೂ ಕೆಲಸ ಆಗಿದೆ ನೀವ್ಯಾಕೆ ಆಗಿಲ್ಲಾ ಅಂತೀರಾ ಎಂದುಪರಿಷತ್ ಸದಸ್ಯ ಗೋಪಾಲಸ್ವಾಮಿ ವಾಗ್ವಾದಕ್ಕೆ ಇಳಿದರು.

ಸಿದ್ದರಾಮಯ್ಯ ಸರ್ಕಾರದ ವೇಳೆ ಕೆರೆ ತುಂಬಿಸೋ ಯೋಜನೆ ಸೇರಿದಂತೆ ಹಲವು ಯೋಜನೆ ಜಾರಿಯಾಗಿದೆ. ರೇವಣ್ಣರಿಗೆ ಇನ್ನೂ ಹೆಚ್ಚಿನ ಕೆಲಸ ಆಗಬೇಕಿತ್ತು ಅನ್ನೊ ಆಸೆ ಇದೆ ಅನ್ಸುತ್ತೆ ಎಂದು ಜಗಳಕ್ಕೆ ಕೊನೆ ಹಾಡುವ ಕೆಲಸವನ್ನು ಸಚಿವ ಕೃಷ್ಟೆಭೈರೇಗೌಡ ಮಾಡಿದರು. ಜತೆಗೆ ರೀ ಪ್ರೀತಂ… ನೀನು ಜಗಳ ಹಚ್ಚಿ ತಮಾಷೆ ನೋಡ್ತೀಯಪ್ಪಾ ಎಂದು ಬಿಜೆಪಿ ಶಾಸಕನ ಕಾಳೆಯಲು ಸಚಿವ ಕೃಷ್ಣ ಭೈರೇಗೌಡ ಮರೆಯಲಿಲ್ಲ.

ಇನ್ನು ಬರ ನಿರ್ವಹಣೆ ಹಣ ಹಂಚಿಕೆ ವಿಚಾರದಲ್ಲಿ ಸಚಿವ ರೇವಣ್ಣ‌, ಶಾಸಕ ಶಿವಲಿಂಗೇಗೌಡ ನಡುವೆ ಜಗಳ್ ಬಂದಿ ನಡೆಯಿತು. ನಮ್ಮ ತಾಲ್ಲೂಕಿನ ಕುಡಿಯುವ ನೀರಿನ ಯೋಜನೆಗಾಗಿ ಒಂದು ಕೋಟಿ ಕೊಡಿ ಎಂದ ಶಾಸಕರು ಕೇಳಿದರು. ರೀ… ಶಿವಲಿಂಗಣ್ಣನ ಕ್ಷೇತ್ರಕ್ಕೆ ಅಲ್ಪ ಸ್ವಲ್ಪ ನೀರಾದ್ರು ಬರ್ತಿದೆ ಕೆಲವು ಕಡೆ ಅದೂ ಇಲ್ಲಾ ಎಂದು ಸಚಿವ ರೇವಣ್ಣ ಉತ್ತರಿಸಿದರು.

ಇದಕ್ಕೆ ಆಕ್ಷೇಪಿಸಿ ಮತ್ತೆ ಮಾತಿಗಿಳಿದ ಶಾಸಕ ಶಿವಲಿಂಗೇಗೌಡ, ಯಾರಣ್ಣ ನಿಂಗೆ ಹೇಳಿದ್ದೂ ನಮ್ಮ ಕ್ಷೇತ್ರಕ್ಕೆ ಒಂದೇ ಒಂದು ಹನಿ ನೀರು ಬರ್ತಿಲ್ಲ ಅಂಥ, ಬೇರೆ ಅದೆಲ್ಲಿಗೆ ಕೊಡ್ತಿದ್ದಾರೆ ತೋರ್ಸಿ ಎಂದು ಗರಂ ಆದರು.

ಸಚಿವ ಕೃಷ್ಣಭೈರೇಗೌಡ ಮಧ್ಯ ಪ್ರವೇಶಮಾಡಲೂ ಬಿಡದೆ ಸಿಟ್ಟಿನಿಂದ ಮಾತನಾಡಿದ ಶಾಸಕ ಶಿವಲಿಂಗೇಗೌಡ, ಈ ವಿಚಾರ ಮೊದಲು ಇತ್ಯರ್ಥ ಮಾಡಿ ಸರ್ ಎಂದು ಕಿಡಿ ಕಾರಿದರು. ರೀ ಇಂಜಿನಿಯರ್ ಹೇಳ್ರಿ ಬೇಲೂರಿನಿಂದ ಒಂದೇ ಒಂದು ಹನಿ ನೀರು ಕೊಡ್ತಿದ್ದೀರಾ ಎಂದು ಅಧಿಕಾರಿಗಳ ವಿರುದ್ದವೂ ಆಕ್ರೋಶ ಸಹ ವ್ಯಕ್ತಪಡಿಸಿದರು. ನಿಮಗ್ಯಾರೊ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಶಿವಲಿಂಗೇಗೌಡ ಅಸಮಾಧಾನ ಹೊರ ಹಾಲಲಿದರು. ಇದಾದ ಮೇಲೆ ಶಿವಲಿಂಗೇಗೌಡರಿಗೆ ಒಂದು ಕೋಟಿ ನೀಡಿ ಎಂದು ಸಚಿವ ಕೃಷ್ಣೆಗೌಡ ಹೇಳಿದರು.

Comments are closed.