ಕರ್ನಾಟಕ

ಮೋದಿ ಸರ್ಕಾರ ಬದಲಾವಣೆಗಾಗಿ ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶ: ಕೆ.ಸಿ.ವೇಣುಗೋಪಾಲ್

Pinterest LinkedIn Tumblr


ಬೆಂಗಳೂರು: ಮೋದಿ ಸರ್ಕಾರ ಬದಲಾಯಿಸಲು ಪ್ರಿಯಾಂಕಾ ಗಾಂಧಿ ರಾಜಕೀಯಕ್ಕೆ ಬಂದಿದ್ದಾರೆ. ಇದರಿಂದ ಬಿಜೆಪಿಗೆ‌ ಭಯ ಆಗುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಹೇಳಿದ್ದಾರೆ.

ಪ್ರಿಯಾಂಕಾ ಗಾಂಧಿ ತೆರೆಯ ಹಿಂದೆ ಪಕ್ಷದ ಪರವಾಗಿ ಬಹಳ ವರ್ಷಗಳಿಂದ ಪ್ರಚಾರ ಮಾಡುತ್ತಿದ್ದರು. ಈಗ ಅವರು ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಆಗಿದ್ದು, ಇಡೀ ದೇಶಕ್ಕೆ ಶಕ್ತಿ ಬಂದಂತಾಗಿದೆ. ಕಳೆದ ಹಲವು ತಿಂಗಳಿಂದ ರಾಹುಲ್ ಗಾಂಧಿ ಸೈನಿಕನಂತೆ ಪಕ್ಷಕ್ಕಾಗಿ ದುಡಿಯುತ್ತಿದ್ದು, ರಾಹುಲ್ ಗಾಧಿ ಕೈಗಳಿಗೆ ಇನ್ನಷ್ಟು ಒತ್ತು ನೀಡಲಾಗುವುದು ಎಂದರು.

ಬಿಜೆಪಿಯವರು ಯಾವ ಕುಟುಂಬದ ಬಗ್ಗೆ ಮಾತಾಡುತ್ತಿದ್ದಾರೆ ಎಂದು ಪರಿಜ್ಞಾನ ಇರಲಿ. ದೇಶಕ್ಕಾಗಿ ತ್ಯಾಗ ಮಾಡಿದೆ. ನಮಗೆಲ್ಲ ಆ ಕುಟುಂಬದ ಬಗ್ಗೆ ಹೆಮ್ಮೆಯಿದೆ. ಹಾಗಾದ್ರೆ ಬಿಜೆಪಿ ನಮ್ಮ ದೇಶಕ್ಕೆ ಏನು ಕೊಡುಗೆ ಕೊಟ್ಟಿದೆ ಎಂದು ಮೊದಲು ತಿಳಿಸಲಿ ಎಂದು ಬಿಜೆಪಿಯವರಿಗೆ ವೇಣುಗೋಪಾಲ್ ಪ್ರಶ್ನೆ ಮಾಡಿದರು.

ಪ್ರಿಯಾಂಕಾ ಗಾಂಧಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಿದ ದಿನವೇ ಕೆ ಸಿ ವೇಣುಗೋಪಾಲ್ ಅವರಿಗೆ ರಾಜ್ಯದ ಉಸ್ತುವಾರಿ ಜೊತೆಗೆ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷ ನೇಮಕ ಮಾಡಿದೆ.

1980ರ ಅವಧಿಯಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಉತ್ತರ ಪ್ರದೇಶದಲ್ಲಿ ಪಕ್ಷದ ಬಲ ವರ್ಧನೆಗೆ ಪ್ರಿಯಾಂಕಾ ಅವರಿಗೆ ಪ್ರಧಾನ ಪಾತ್ರ ನೀಡಬೇಕೆಂಬ ಬೇಡಿಕೆ ಬಲವಾಗಿತ್ತು. ಈ ಬೇಡಿಕೆಯನ್ನು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ನೆರವೇರಿಸಿದ್ದಾರಾದರೂ ಪ್ರಿಯಾಂಕಾ ಅವರು ಮೊದಲ ಹೆಜ್ಜೆಯಲ್ಲೇ ಕಠಿಣ ಸವಾಲು ಎದುರಿಸಬೇಕಾಗಿದೆ ಎನ್ನಲಾಗಿದೆ.

Comments are closed.