ಕರ್ನಾಟಕ

ಆನಂದ್ ಸಿಂಗ್​ ಮೇಲೆ ಹಲ್ಲೆ ನಡೆಸಿಲ್ಲವೆಂದ ಗಣೇಶ್; ಆದರೆ ಇದು ಯಾರ ಫೋಟೋ ಹೇಳಿ?

Pinterest LinkedIn Tumblr


ಬೆಂಗಳೂರು: ಬಿಡದಿಯ ಈಗಲ್ಟನ್ ರೆಸಾರ್ಟ್​ನಲ್ಲಿ ಮೊನ್ನೆ(ಜ. 19) ರಾತ್ರಿ ನಡೆದ ಗಲಾಟೆಯಲ್ಲಿ ಆನಂದ್ ಸಿಂಗ್ ಅವರಿಗೆ ಗಂಭೀರ ಗಾಯವಾಗಿರುವುದು ಈಗ ಜಗಜ್ಜಾಹೀರಾಗಿದೆ. ಆದರೆ, ಅಷ್ಟು ಸೀರಿಯಸ್ಸಾಗಿ ಗಲಾಟೆ ಮತ್ತು ಹಲ್ಲೆಯಾಗಿದ್ದರೂ ಕಾಂಗ್ರೆಸ್ ನಾಯಕರು ಏನೂ ಆಗೇ ಇಲ್ಲ ಎಂಬಂತೆ ವರ್ತಿಸಿದ್ದರು. ಆನಂದ್ ಸಿಂಗ್ ಮದುವೆಗೆ ಹೋಗಿದ್ದಾರೆ ಅಷ್ಟೇ ಎಂದು ಡಿಕೆ ಶಿವಕುಮಾರ್ ಪ್ರತಿಕ್ರಿಯೆ ಕೊಟ್ಟಿದ್ದರು. ಸಿಂಗ್ ಹೊಟ್ಟೆ ನೋವಿನಿಂದ ಆಸ್ಪತ್ರೆ ಸೇರಿದ್ದಾರೆ. ಆಸ್ಪತ್ರೆಯಲ್ಲಿ ಆರಾಮವಾಗಿದ್ದಾರೆ. ಗೊರಕೆ ಹೊಡೆಯುತ್ತಾ ನಿದ್ದೆ ಮಾಡುತ್ತಿದ್ದಾರೆ ಎಂದು ಡಿಕೆ ಸುರೇಶ್ ಹೇಳಿಕೆ ಕೊಟ್ಟಿದ್ದರು. ರೆಸಾರ್ಟ್​ನಲ್ಲಿ ಸಣ್ಣಪುಟ್ಟ ಗಲಾಟೆ ಆಗಿದೆ. ಕೆಳಕ್ಕೆ ಬಿದ್ದು ಪೆಟ್ಟಾಗಿದೆ ಅಷ್ಟೇ ಎಂದು ಸಿದ್ದರಾಮಯ್ಯ ಮೊದಲಾದ ಹಿರಿಯ ಕಾಂಗ್ರೆಸ್ಸಿಗರು ಥೇಪೆ ಹಚ್ಚುವ ಕೆಲಸ ಮಾಡಿದ್ದರು.

ಆನಂದ್ ಸಿಂಗ್ ವಾಸ್ತವವಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ನಿನ್ನೆ ಸಂಜೆ ಬಂದ ವೈದ್ಯಕೀಯ ಪರೀಕ್ಷೆಯಲ್ಲೇ ಆನಂದ್ ಸಿಂಗ್ ಮೇಲೆ ಹಲ್ಲೆಯಾಗಿರುವುದು ದೃಢಪಟ್ಟಿದೆ. ಇವತ್ತು ಆನಂದ್ ಸಿಂಗ್ ಗಾಯಗೊಂಡಿರುವ ಫೋಟೋ ಲೀಕ್ ಆಗಿದೆ. ಆನಂದ್ ಸಿಂಗ್ ಮುಖದ ಚಹರೆಯೇ ವ್ಯತ್ಯಾಸವಾಗುವಂತೆ ಚಚ್ಚಲಾಗಿದೆ. ಶಾಸಕರೊಬ್ಬರು ಮತ್ತೊಬ್ಬ ಶಾಸಕರಿಗೆ ಈ ಪರಿ ಅಮಾನವೀಯವಾಗಿ ಥಳಿಸುತ್ತಾರೆಂದರೆ ಜನಸಾಮಾನ್ಯರನ್ನು ಇವರು ಏನೆಲ್ಲಾ ಮಾಡಬಹುದು? ಇಷ್ಟು ದೊಡ್ಡ ಮಟ್ಟದಲ್ಲಿ ಹಿಂಸಾಚಾರ ನಡೆದಿದ್ದರೂ ಏನೂ ನಡೆದೇ ಇಲ್ಲ ಎನ್ನುವ ಹಿರಿಯ ರಾಜಕಾರಣಿಗಳು ಜನಸಾಮಾನ್ಯರಿಗೆ ಅನ್ಯಾಯವಾದಾಗ ಸಂವೇದನಾಶೀಲರಾಗಿ ನಡೆದುಕೊಳ್ಳುತ್ತಾರಾ? ಎಂಬ ಪ್ರಶ್ನೆಗಳು, ಅನುಮಾನಗಳು ಕಾಡುತ್ತವೆ.

Comments are closed.