ಕರ್ನಾಟಕ

ಸಿದ್ಧಗಂಗಾ ಶ್ರೀಗಳ ನಿಧನದ ಹಿನ್ನೆಲೆ; ನಾಳೆ ಸರಕಾರಿ ರಜೆ ಘೋಷಣೆ, ರಾಜ್ಯದಲ್ಲಿ ಮೂರು ದಿನ ಶೋಕಾಚರಣೆ

Pinterest LinkedIn Tumblr

ಬೆಂಗಳೂರು: ನಡೆದಾಡುವ ದೇವರೆಂದೇ ಗೌರವಕ್ಕೆ ಪಾತ್ರರಾಗಿದ್ದ ಶತಾಯುಷಿ, ಸಿದ್ಧಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರು ಶಿವಸಾಯುಜ್ಯ ಸೇರಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮೂರು ದಿನಗಳ ಶೋಕಾಚರಣೆ ಘೋಷಿಸಿದ್ದು, ತುಮಕೂರಿನಲ್ಲಿ ಇಂದು ಅಪರಾಹ್ನ ಹಾಗೂ ನಾಳೆ ರಾಜ್ಯದ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ.

ಸಿದ್ಧಗಂಗಾ ಶ್ರೀಗಳ ದೇಹಾಂತ್ಯದ ಘೋಷಣೆ ಮಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅವರ ಗೌರವಾರ್ಥ ಶೋಕಾಚರಣೆ ಹಾಗೂ ರಜೆ ಘೋಷಣೆ ನಿರ್ಧಾರ ಪ್ರಕಟಿಸಿದರು.

ತುಮಕೂರಿನಲ್ಲಿ ಸೋಮವಾರ ಮಧ್ಯಾಹ್ನದಿಂದಲೇ ರಜೆ ಘೋಷಣೆಯಾಗಿದೆ. ನಾಳೆ ರಾಜ್ಯಾದ್ಯಂತ ಸರಕಾರಿ ರಜೆ ಘೋಷಿಸಲಾಗಿದೆ. ಶ್ರೀಗಳ ಅಂತಿಮ ದರ್ಶನಕ್ಕೆ ಆಗಮಿಸುವ ಹಳ್ಳಿ ಗಾಡಿನ ಜನರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು. ನಾಳೆ ಮಧ್ಯಾಹ್ನ 3 ಗಂಟೆಯವರೆಗೆ ಶ್ರೀಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

Comments are closed.