ಕರ್ನಾಟಕ

ಬಿಗ್‍ಬಾಸ್ ಸ್ಪರ್ಧಿಗಳ ರಹಸ್ಯ ಕುರಿತು ಮಾತನಾಡಿದ ಮುರಳಿ

Pinterest LinkedIn Tumblr


ಬೆಂಗಳೂರು: ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್‍ಬಾಸ್. ಈ ವಾರ ಮನೆಯಿಂದ ಹೊರ ಬಂದಿರುವ ಅಡುಗೆ ಮನೆ ಖ್ಯಾತಿಯ ಮುರಳಿ ಸಂದರ್ಶನವೊಂದರಲ್ಲಿ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ತಮ್ಮ ಅನುಭವ ಹಂಚಿಕೊಂಡ ಮುರಳಿ, ಇನ್ನೆರೆಡು ವಾರ ಬಿಗ್ ಬಾಸ್ ಮನೆಯಲ್ಲಿರಬೇಕಿತ್ತು. ಜನರು ನನ್ನನ್ನು ಹೊರಗೆ ಕರೆದ್ರು ಹಾಗಾಗಿ ಹೊರ ಬಂದಿದ್ದೇನೆ. ಬಿಗ್‍ಬಾಸ್‍ನಿಂದ ಹೊರ ಬಂದರೂ ಅಲ್ಲಿಯ ಗುಂಗು ಇನ್ನು ಕಡಿಮೆಯಾಗಿಲ್ಲ. ಪತ್ನಿ ಪದೇ ಪದೇ ಇದು ನಮ್ಮನೆ ಅಂತ ಹೇಳುತ್ತಿರುತ್ತಾರೆ. ಬಿಗ್‍ಬಾಸ್ ಮನೆಯ ವಾಸ ತುಂಬಾನೇ ಖುಷಿ ಕೊಡ್ತು ಅಂತಾ ತಿಳಿಸಿದರು.

ಈ ವೇಳೆ ಮಾತನಾಡುತ್ತಾ ಮನೆಗೆ ಪ್ರವೇಶ ನೀಡಿದ್ದು, ಹೊರ ಬಂದಿದ್ದು, ಸುದೀಪ್ ಜೊತೆ ಮಾತನಾಡಿದ್ದು ಎಲ್ಲವನ್ನು ತಿಳಿಸಿದರು. ತಮ್ಮ ಜೊತೆಯಲ್ಲಿದ್ದ ಕೆಲವು ಸ್ಪರ್ಧಿಗಳ ಬಗ್ಗೆಯೂ ಮಾತನಾಡಿದ್ರು.

1. ಆ್ಯಂಡಿ: ಒಳ್ಳೆಯ ಹುಡುಗ, ಸ್ವಲ್ಪ ಕೆಟ್ಟ ಬುದ್ದಿ. ಅವರ ತಂದೆ ಆರ್ಮಿಯಲ್ಲಿದ್ದಂತಹ ವ್ಯಕ್ತಿ ಮತ್ತು ತುಂಬಾ ಒಳ್ಳೆಯವರು. ಆದ್ರೆ ಈ ರೀತಿ ಚೇಷ್ಟೆಗಳನ್ನು ಮಾಡುವುದರಿಂದ ಕುಟುಂಬಸ್ಥರಿಗೆ ತುಂಬಾ ನೋವಾಗುತ್ತದೆ. ಜೀವನದಲ್ಲಿ ತುಂಬಾ ಸೋತಿದ್ದೇನೆ. ಹೇಗಾದರೂ ಮಾಡಿ ಗೆಲ್ಲಬೇಕೆಂಬ ಹಠ ತೊಟ್ಟ ಹುಡುಗ.

2. ಧನರಾಜ್: ಮದುವೆಯಾಗಿ ಆರು ವರ್ಷ ಆಗಿದ್ರೂ, ಇನ್ನು ಬದುಕೇ ಕಟ್ಟಿಕೊಂಡಿಲ್ಲ. ಜೀವನೋಪಾಯಕ್ಕೆ ಕೆಲಸ ಮಾಡಿಕೊಂಡಿದ್ರೂ ಇದೂವರೆಗೂ ಒಂದು ಬ್ರೇಕ್ ಸಿಕ್ಕಿಲ್ಲ. ಇಷ್ಟು ಸಂಪಾದನೆ ಮಾಡಿದ್ರೆ ನನ್ನ ಜೀವನ ಚೆನ್ನಾಗಿರುತ್ತೆ ಅಂತ ಪದೇ ಪದೇ ಹೇಳುತ್ತಾನೆ. ಇಂತಹವರಿಗೆಲ್ಲ ಮನೆಯಿಂದ ಹೊರಬಂದ ಮೇಲೆ ಒಂದು ಬ್ರೇಕ್ ಸಿಗಬೇಕಿದೆ.

3. ಕವಿತಾ ಗೌಡ: ಏನಾದರೂ ಮಾಡಿ, ಯಾರು ಏನು ಅಂದುಕೊಂಡರು ಪರವಾಗಿಲ್ಲ ಈ ಆಟ ಗೆಲ್ಲಬೇಕೆಂದು ನಿರ್ಧರಿಸಿ ಮನೆಗೆ ಬಂದ ಹುಡುಗಿ.

4. ರಾಕೇಶ್: ರಾಕೇಶ್ ಗುಡ್ ನೆಸ್ ಮತ್ತು ಗುಡ್ ಮಿಲ್ಕ್ ಅಂತಾ ಹೇಳಿಕೊಂಡು ಆಟವಾಡುತ್ತಿದ್ದಾನೆ. ಒಂದು ರೀತಿ ಸಮಯಸಾಧಕ, ತಮ್ಮ ಮುಖಕ್ಕೆ ತಾನೇ ಬಣ್ಣ ಬಳೆದುಕೊಳ್ಳುತ್ತಿದ್ದಾನೆ. ಮನೆಯಲ್ಲಿ ಮುಖಕ್ಕೆ ಬಣ್ಣ ಬಳೆದುಕೊಂಡು ತನಗೆ ಬೇಕಾದಂತೆ ಎಲ್ಲರನ್ನು ಬಳಸಿಕೊಂಡು ಆಟ ಆಡುತ್ತಿದ್ದಾನೆ. ಮನೆಯಿಂದ ಹೊರಬಂದ ಮೇಲೆ ರಾಕೇಶ್ ತುಂಬಾ ಕಷ್ಟ ಆಗಲಿದೆ.

5. ನವೀನ್ ಸಜ್ಜು: ತುಂಬಾನೇ ಸರಳವಾದ ವ್ಯಕ್ತಿ. ಲೆಕ್ಕ ಹಾಕಿ ಆಟವಾಡುವಂತಹ ವ್ಯಕ್ತಿ ನವೀನ್ ಅಲ್ಲ. ಯಾರಾದ್ರೂ ತಪ್ಪು ಮಾಡಿದ್ರೆ ಹೇಳೋಕೆ ಹೋಗ್ತಾನೆ. ಅವರು ಕೇಳಿಲ್ಲ ಅಂದ್ರೆ ನಮಗ್ಯಾಕೆ ಗುರುಗಳೇ ಅಂತಾ ಬಂದು ಬಿಡುತ್ತಾನೆ.

6. ರಶ್ಮಿ: ಅವಳು ತುಂಬಾ ಒಳ್ಳೆಯ ಹುಡುಗಿ. ಮನೆಯಲ್ಲಿ ನನಗೂ ಮತ್ತು ರಶ್ಮಿಗೆ ಹೊಂದಾಣಿಕೆ ಆಗುತ್ತಿತ್ತು. ಇಬ್ಬರು ಕೆಲಸ ಮಾಡಿದ್ದು, ಫೀಲ್ಡ್ ಹೇಗಿದೆ ಎಂಬುದನ್ನು ಅರ್ಥ ಮಾಡಿಕೊಂಡ ಹುಡುಗಿ. ನೇರವಾದ ವ್ಯಕ್ತಿತ್ವ, ಆದ್ರೆ ಮಾತಿನಲ್ಲಿ ಸ್ವಲ್ಪ ಖಾರ ಜಾಸ್ತಿ. ಆ ಖಾರ ಬಿಗ್‍ಬಾಸ್ ಮನೆಯಲ್ಲಿ ಬೇಕಾಗಿರಲಿಲ್ಲ. ನಾನು ಹೇಳಿದ ನಂತರ 5ನೇ ವಾರದಿಂದ ಆ ಖಾರ ಕಡಿಮೆ ಆಗುತ್ತಾ ಬಂತು. ಎಲ್ಲದನ್ನು ಮೊದಲು ನಾನೇ ಹೇಳಬೇಕು. ಬೇಡವಾದ ವಿಚಾರದಲ್ಲಿಯೂ ಮೂಗು ತೂರಿಸೋದನ್ನು ಬಿಟ್ಟರೆ ಒಳ್ಳೆಯ ಹುಡುಗಿ.

7. ಶಶಿ: ಇವಾಗ ಇಂಡಸ್ಟ್ರಿಗೆ ಬಂದಿದ್ದಾನೆ. ಒಳ್ಳೆ ಹುಡುಗ ಅಂತ ಹೇಳಬೇಕು ಅನ್ನೋಷ್ಟರಲ್ಲಿ ಗೋಡೆಗೆ ಕೈ ಹೊಡೆದುಕೊಳ್ಳುತ್ತಾನೆ. ಎಂಎಸ್ಸಿ ಮಾಡಿ ಬಿಗ್ ಬಾಸ್ ಮನೆಗೆ ಬಂದು ನಾಟಕ ಮಾಡುತ್ತಿದ್ದಾನೆ. ಇನ್ನು ಸಮಯ ಇದೆ, ಎಲ್ಲರ ವ್ಯಕ್ತಿತ್ವ ಗೊತ್ತಾಗುತ್ತದೆ.

8. ಜಯಶ್ರೀ: ತಾನು ಹಿರಿಯ ಕಲಾವಿದೆ ಎಂಬ ಭ್ರಮೆಯಲ್ಲಿದ್ದಾರೆ. ಗ್ರೂಪ್ ನಲ್ಲಿದ್ರೆ ನನ್ನ ಸೇವ್ ಮಾಡ್ತಾರೆ ಭ್ರಮೆಯಿತ್ತು. ಕೊನೆಗೆ ಗುಂಪಿನಲ್ಲಿದ್ದವರೇ ನಾಮಿನೇಟ್ ಮಾಡಿದರು. ಏನಾದರು ಸಲಹೆ ನೀಡಿದ್ರೆ ತೆಗೆದುಕೊಳ್ಳುವ ಮನಸ್ಥಿತಿ ಇಲ್ಲ. ಜೀವನದಲ್ಲಿ ಎಲ್ಲ ಕಷ್ಟಗಳನ್ನು ನೋಡಿದ್ದೇನೆ ಎಂಬ ಮಾತುಗಳು. ಗ್ರೂಪ್ ಬಿಟ್ಟು ಹೊರಗಡೆ ಬರಲಿಲ್ಲ.

9. ಅಕ್ಷತಾ: ತುಂಬಾನೇ ನಾಟಕದ ಸ್ವಭಾವದ ಹುಡುಗಿ ಅಲ್ಲಲ್ಲ ಹೆಂಗಸು. ಹುಡುಗಿ ಅಂದ್ರೆ ತಪ್ಪಾಗುತ್ತದೆ. ಜೀವನ ಮತ್ತು ನಾಟಕ ಎರಡೂ ಬೇರೆ ಎಂಬುವುದು ಆಕೆಗೆ ಗೊತ್ತಿಲ್ಲ. ಜೀವನ ನಾವು ರೂಪಿಸಿಕೊಂಡ ಹಾಗೆ ಇರುತ್ತದೆಯೇ ಹೊರತು ಬೇರೆಯವರು ಹೇಳಿದಂತೆ ಇರಬಾರದು.

Comments are closed.