ಕರ್ನಾಟಕ

ಅನೈತಿಕ ಸಂಬಂಧ ಹಿನ್ನೆಲೆ; ಪತಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪತ್ನಿ!

Pinterest LinkedIn Tumblr

ಮೈಸೂರು:ಆರು ಮಕ್ಕಳಿದ್ದರು ಪತಿಯ ಅನೈತಿಕ ಸಂಬಂಧದಿಂದ ಬೇಸತ್ತ ಮಹಿಳೆಯೊಬ್ಬಳು ತನ್ನ ಗಂಡನ ಮೇಲೆ ತಾನೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸಾಯಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಉದಯಗಿರಿಯ ಸತ್ಯಾನಗರದಲ್ಲಿ ವಾಸವಿದ್ದ ಮಹಜರ್ ಪಾಷಾ(45) ಎಂಬಾತ ಸಾವನ್ನಪ್ಪಿದ್ದಾನೆ. ಈತನ ಪತ್ನಿ ಮಮ್ತಾಜ್ (44 ಸ್ವತಃ ಆತನಿಗೆ ಬೆಂಕಿ ಹಚ್ಚಿ ಸಾಯಿಸಲು ಯತ್ನಿಸಿದ್ದಾಳೆ. ಸಧ್ಯ ಪಾಷಾ ಮೈಸೂರು ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ.

23 ವರ್ಷಗಳ ಹಿಂದೆ ಮ್ತಾಜ್ ಹಾಗೂ ಮಹಜರ್ ಪಾಷಾ ವಿವಾಹವಾಗಿದ್ದು ಇವರಿಗೆ ಆರು ಮಂದಿ ಮಕ್ಕಳಿದ್ದಾರೆ. ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಪಾಷಾ ಇನ್ನೊಬ್ಬ ಮಹಿಳೆಯೊಡನೆ ಅನೈತಿಕ ಸಂಬಂಧ ಹೊಂದಿದ್ದನೆಂದು ಹೇಳಲಾಗಿದೆ. ಈ ಸಂಬಂಧ ಪತಿ-ಪತ್ನಿಯರ ನಡುವೆ ಪ್ರತಿನಿತ್ಯ ಜಗಳ ನಡೆಯುತ್ತಿತ್ತು.

ಆದರೆ ಮಂಗಳವಾರ ರಾತ್ರಿ ಎಲ್ಲ ಊಟ ಮಾಡಿ ಮಲಗಿದ ತರುವಾಯ ಮಮ್ತಾಜ್ ಪತಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ. ಆಗ ನೋವು, ಉರಿ ತಾಳಳಾರದೆ ಪಾಷಾ ಜೋರಾಗಿ ಅರಚಾಡಿದ್ದಾನೆ. ಇದನ್ನು ಕೇಳಿದ ನೆರೆಹೊರೆಯ ಮನೆಯ ಜನ ಆಗಮಿಸಿ ಬೆಂಕಿ ನಂದಿಸಿ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು.

ಘಟನೆ ಸಂಬಂಧ ಮೈಸೂರು ಉದಯಗಿರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿ ಮಮ್ತಾಜ್ ಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Comments are closed.