ಕರ್ನಾಟಕ

ಮದುವೆಯಾದ ಮೇಲೆಯೂ ಇನ್ನೊಬ್ಬನೊಂದಿಗೆ ಪ್ರೇಮಸಂಬಂಧ; ಅಡ್ಡಿಯಾದ ಗಂಡನನ್ನು ಪ್ರಿಯಕರನ ಜತೆ ಸೇರಿ ಸುಪಾರಿ ಕೊಟ್ಟು ಕೊಂದಳು ಪತ್ನಿ

Pinterest LinkedIn Tumblr

ಬೆಂಗಳೂರು: ಬಾಡಿಗೆಗಿದ್ದ ಮನೆ ಮಾಲೀಕನ ಮಗನೊಡನೆ ಪ್ರೇಮಸಂಬಂಧ ಹೊಂದಿದ್ದ ಮಹಿಳೆಯೊಬ್ಬಳು ತನ್ನ ಪತಿಯ ಹತ್ಯೆಗಾಗಿ ಸುಪಾರಿ ನೀಡಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಈ ಸಂಬಂಧ ಬೆಂಗಳೂರಿನ ಹುಳಿಮಾವು ವ್ಯಾಪ್ತಿ ಅರೆಕೆರೆ ನಿವಾಸಿ ನಾಗರಾಜ ಎನ್ನುವವರ ಹತ್ಯೆಗೆ ಆತನ ಪತ್ನಿ ಮಮತಾ ಸುಪಾರಿ ನೀಡಿದ್ದಳು

ಮನೆಯಲ್ಲಿ ತಾನು ಇಲ್ಲದ ವೇಳೆ ಮನೆ ಮಾಲೀಕನ ಪುತ್ರ ಪ್ರಶಾಂತ್ ನೊಡನೆ ಸರಾಸ ಸಲ್ಲಾಪ ನಡೆಸುತ್ತಿದ್ದ ಮಮತಾ ವಿಚಾರ ನಾಗರಾಜ್ ಗಮನಕ್ಕೆ ಬಂದು ಪ್ರಶ್ನಿಸಿದ್ದಾನೆ. ಆಗ ಪತಿ ತಮ್ಮಿಬ್ಬರ ಪ್ರೀತಿಗೆ ಅಡ್ಡಿಯಾಗಬಹುದೆಂದು ಪ್ರಶಾಂತ್ ಗೆ ತಿಳಿಸಿದ್ದಾಳೆ. ಆಗ ಪ್ರಶಾಂತ್ ಹಾಗೂ ಮಮತಾ ಚರ್ಚಿಸಿ ಮಮತಾ ಗಂಡ ನಾಗರಾಜ್ ನನ್ನು ಕೊಲ್ಲಲು 1.5 ಲಕ್ಷ ಲಕ್ಷ ರು. ಸುಪಾರಿ ನೀಡಿದ್ದಾಳೆ.

ಸುಪಾರಿ ಪಡೆದಿದ್ದ ಹಂತಕರು ಡಿಸೆಂಬರ್ 14ರಂದು ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದ ನಾಗರಾಜ್ ಮೇಲೆ ದಾಳಿ ನಡೆಸಿಸಿ ಹಣ, ಒಡವೆ, ಮೊಬೈಲ್ ಗಳನ್ನು ದೋಚಿದ್ದಾರೆ. ಈ ಕುರಿತಂತೆ ನಾಗರಾಜ್ ಪೋಲೀಸರಿಗೆ ದೂರು ಸಲ್ಲಿಸಿದ್ದು ಆ ಸಮಯ ಮಮತಾ ತನಗೇನೂ ಅರಿವಿಲ್ಲದಂತಿದ್ದಳು.

ದಾಳಿ ನಡೆಸಿದ್ದ ಸುಪಾರಿ ಹಂತಕರನ್ನು ವಶಕ್ಕೆ ಪಡೆದ ಪೋಲೀಸರು ತೀವ್ರ ವಿಚಾರಣೆ ನಡೆಸಿದಾಗ ಮಮತಾಳ ಇನ್ನೊಂದು ಮುಖ ಬೆಳಕು ಕಂಡಿದೆ.ಈ ಬಗ್ಗೆ ತಿಳಿದ ನಾಗರಾಜ್ ಆಘಾತಗೊಂಡಿದ್ದಾರೆ.

ಸದ್ಯ ಪೋಲೀಸರು ಆರೋಪಿಗಳಾದ ಮಮತಾ (28), ಪ್ರಶಾಂತ್ (20), ಅನಿಲ್ ಬಿಸ್ವಾಸ್ (21), ಜಾಕಿರ್ ಪಾಷ (20) ಮತ್ತು ಹರೀಶ್‍ಕುಮಾರ್ (20) ಬಂಧಿಸಿದ್ದಾರೆ. ಅವರು ಸುಲಿಗೆ ಮಾಡಿದ್ದ ಚಿನ್ನದ ಸರ, ಮೊಬೈಲ್, ಒಡವೆಗಳು, ಕೃತ್ಯಕ್ಕೆ ಬಳಸಿದ್ದ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

Comments are closed.