ಕರ್ನಾಟಕ

ರೊಮ್ಯಾನ್ಸ್ ಮಾಡಲು ಕಬ್ಬನ್ ಪಾರ್ಕ್ ಹೋಗುವ ಮುಂಚೆ ಈ ವರದಿ ಓದಿ….ಪ್ರೇಮಿಗಳೇ ಎಚ್ಚರ..!

Pinterest LinkedIn Tumblr

ಬೆಂಗಳೂರು: ಕಬ್ಬನ್ ಪಾರ್ಕ್ ಗೆ ಹೋದರೆ ಸಾಕು ಪ್ರೇಮಿಗಳು ಪಕ್ಕ-ಪಕ್ಕ ಕುಳಿತುಕೊಂಡು ರೊಮ್ಯಾನ್ಸ್ ಮಾಡುತ್ತಿರುವ ದೃಶ್ಯಗಳು ಕಾಣಸಿಗುತ್ತವೆ. ಕಬ್ಬನ್ ಪಾರ್ಕ್ ಗೆ ಹೋಗುವ ಪ್ರೇಮಿಗಳು ಇನ್ನು ಮುಂದೆ ಹುಷಾರಾಗಿರಬೇಕು.

ಖಾಲಿ ಜಾಗ ಸಿಕ್ಕರೆ ಸಾಕು ಪ್ರೇಮಿಗಳು ಪ್ರೇಮ ಸಲ್ಲಾಪದಲ್ಲಿ ತೊಡಗಿಕೊಳ್ಳುತ್ತಾರೆ. ಈಗ ಅದಕ್ಕೆಲ್ಲಾ ತೋಟಗಾರಿಕೆ ಇಲಾಖೆ ಬ್ರೇಕ್ ಹಾಕಲು ಮುಂದಾಗಿದೆ. ಕಬ್ಬನ್ ಪಾರ್ಕ್ ನಲ್ಲಿ ಭದ್ರತೆ ಮತ್ತು ಅನೈತಿಕ ಚಟುವಟಿಕೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಇವುಗಳಿಗೆ ಬ್ರೇಕ್ ಹಾಕಲು ತೋಟಗಾರಿಕಾ ಇಲಾಖೆ 120 ಸಿಸಿಟಿವಿ ಅಳವಡಿಕೆಗೆ ಮುಂದಾಗಿದೆ.

ಬೆಂಗಳೂರು ಕೇಂದ್ರ ಲೋಕಸಭಾ ಸದಸ್ಯ, ಸಂಸದ ಪಿ.ಸಿ ಮೋಹನ್ ಅವರು 1 ಕೋಟಿ ರೂಪಾಯಿ ಅನುದಾನದಲ್ಲಿ ಸಿಸಿಟಿವಿ ಅಳವಡಿಕೆ ಮಾಡಿಸುತ್ತಿದ್ದಾರೆ. ಪ್ರಥಮ ಹಂತದಲ್ಲಿ 60 ಲಕ್ಷ ರೂಪಾಯಿ ಅನುದಾನದಲ್ಲಿ ಕಾಮಗಾರಿ ಶುರು ಮಾಡಲಾಗುತ್ತಿದೆ. ಅಷ್ಟೇ ಅಲ್ಲದೇ ಸಿಸಿಟಿವಿ ಸೇರಿದಂತೆ ಶೌಚಾಲಯ ನಿರ್ಮಾಣ ಕಾಮಗಾರಿಗಳಿಗೂ ಚಾಲನೆ ನೀಡಲಿದ್ದಾರೆ. ಸದ್ಯದಲ್ಲೇ ಸಿಸಿಟಿವಿ ಅಳವಡಿಕೆ ಕಾರ್ಯ ಶುರು ಮಾಡಲಾಗುತ್ತದೆ.

Comments are closed.