ಕರ್ನಾಟಕ

ಬೆಂಗಳೂರು: ಕದ್ದ ಮೊಬೈಲನ್ನು ಹಿಂದಿರುಗಿಸಬೇಕಾದರೆ ‘ನಿನ್ನ ನಗ್ನ ಫೋಟೋ ಕಳುಹಿಸು’ ಎಂದು ಮಹಿಳೆಯ ಮುಂದೆ ಬೇಡಿಕೆ ಇಟ್ಟ ಕಳ್ಳ ! ಮುಂದೆ ಏನಾಯಿತು..?

Pinterest LinkedIn Tumblr

ಬೆಂಗಳೂರು: ಮಹಿಳೆಯೊಬ್ಬರ ಮೊಬೈಲ್ ಕಳವು ಮಾಡಿದ ಖದೀಮನೊಬ್ಬ ಮೊಬೈಲ್ ಹಿಂತಿರುಗಿಸಬೇಕಾದರೆ ಆಕೆಯ ನಗ್ನ ಚಿತ್ರಗಳನ್ನು ತನಗೆ ಕಳಿಸುವಂತೆ ಕೇಳಿರುವ ವಿಕೃತ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸ್ಟಾರ್ ಹೋಟೆಲ್ ನಲ್ಲಿ ತನ್ನ ಮೊಬೈಲ್ ನಾಪತ್ತೆಯಾದ ಬಳಿಕ ಮೊಬೈಲ್ ಕದ್ದ ಕಳ್ಳನಿಂದ ಮಹಿಳೆ ಸಂದೇಶ ಪಡೆದಿದ್ದಾರೆ. ಅದರಂತೆ “ಆಕೆಯ ನಗ್ನ ಚಿತ್ರಗಳನ್ನು ತನಗೆ ಕಳಿಸಿದರೆ” ಮಾತ್ರ ಅವಳ ಮೊಬೈಲ್ ಹಿಂದಿರುಗಿಸುವುದಾಗಿ ಆತ ಬೇಡಿಕೆ ಇಟ್ಟಿದ್ದಾರೆ. ಅಲ್ಲದೆ ಆಕೆಯ ಮನೆಯವರಿಗೆ ಸಹ ಆ ದುಷ್ಕರ್ಮಿಯು ಸಂದೇಶ ಕಳಿಸಿದ್ದು ಅಂತಿಮವಾಗಿ ಮಹಿಳೆ ಈ ಸಂಬಂಧ ಪೋಲೀಸರ ಮೊರೆ ಹೋಗಿದ್ದಾರೆ.

ಬೆಂಗಳೂರಿನ ಹೂಡಿಯಲ್ಲಿ ವಾಸವಿದ್ದ 22 ವರ್ಷದ ಮಹಿಳೆ ಕಳೆದ ಶುಕ್ರವಾರ ಹೋಟೆಲ್ ಗೆ ತೆರಳಿದ್ದಾಗ ಆಕೆಯ ಸ್ಮಾರ್ಟ್ ಫೋನ್ ಕಳುವಾಗಿದೆ. ಈ ಕುರಿತಂತೆ ಆಕೆ ಪೋಲೀಸರಿಗೆ ದೂರು ಸಲ್ಲಿಸುವುದಕ್ಕೆ ಮುನ್ನವೇ ಆ ಖದೀಮ ಮಹಿಳೆ ಫೋನ್ ನಲ್ಲಿದ್ದ ಆಕೆಯ ಸ್ನೇಹಿತರು, ಸಂಬಂಧಿಗಳ ಸಂಖ್ಯೆಗಳಿಗೆ ಅಶ್ಲೀಲ ಸಂದೇಶ ರವಾನಿಸಲು ಪ್ರಾರಂಭಿಸಿದ್ದಾನೆ.

“ಆಕೆ ಕುಟುಂಬದವರು ಹಾಗೂ ಮಿತ್ರರು ಆಕೆಯನ್ನು ಇನ್ನೊಂದು ಮೊಬೈಲ್ ಸಂಖ್ಯೆ ಮೂಲಕ ಸಂಪರ್ಕಿಸಿ ಈ ಸಂದೇಶಗಳ ಕುರಿತಂತೆ ವಿವರಿಸಿದ್ದಾರೆ. ಆಗ ಮಹಿಳೆ ತನ್ನ ಕಳೆದು ಹೋದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಅದಿನ್ನೂ ಕಾರ್ಯ ನಿರ್ವಹಿಸುತ್ತಿರುವುದು ತಿಳಿದು ಆಘಾತವಾಗಿದೆ.

“ಆಕೆ ಕರೆ ಮಾಡಿದಾಗ ಆ ದುಷ್ಕರ್ಮಿ ಅವರೊಡನೆ ಸಹ ಅಸಭ್ಯವಾಗಿ ಮಾತನಾಡಿದ್ದಲ್ಲದೆ ಮಹಿಳೆ ತನ್ನ ನಗ್ನ ಚಿತ್ರಗಳನ್ನು ಕಳಿಸಿದರಷ್ಟೇ ಆಕೆಯ ಮೊಬೈಲ್ ಹಿಂತಿರುಗಿಸುತ್ತೇನೆ ಎಂದು ಆಕೆಯ ಮೇಲೆ ಒತ್ತಡ ಹೇರಿದಾನೆ” ಪೋಲೀಸರು ಹೇಳಿದರು.

ಇದಾದ ನಂತರ ಮಹಿಳೆ ಮಹದೇವಪುರ ಪೋಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ನೀಡಿದ್ದಾರೆ. “ನಾವು ಈ ಕುರಿತಂತೆ ಆರೋಪಿಯ ಪತ್ತೆ ಕಾರ್ಯ ಕೈಗೊಂಡಿದ್ದೇವೆ. ಮಹಿಳೆಗೆ ತಿಳಿದಿರುವವರೇ ಈ ಕೆಲಸ ಮಾಡಿದ್ದಾರೆಯೆ ಎನ್ನುವ ಕುರಿತಂತೆಯೂ ನಾವು ತನಿಖೆ ಕೈಗೊಂಡಿದ್ದೇವೆ” ಪೋಲೀಸರು ಮಾಹಿತಿ ನೀಡಿದರು.

Comments are closed.