ಕರ್ನಾಟಕ

ಅತ್ಯಾಚಾರ…ಅಶ್ಲೀಲ ವಿಡಿಯೋ ತೆಗೆದು ವಿವಾಹವಾಗಲಿರುವ ಹುಡುಗನಿಗೆ ತೋರಿಸುವುದಾಗಿ ಬೆದರಿಕೆ: ಯುವತಿಯಿಂದ ನಟನ ವಿರುದ್ಧ ರೇಪ್ ದೂರು !

Pinterest LinkedIn Tumblr

ಬೆಂಗಳೂರು: ಯುವತಿಯೊರ್ವಳು ಸ್ಯಾಂಡಲ್ವುಡ್ ನಟ ಹಾಗೂ ಡ್ಯಾನ್ಸ್ ಮಾಸ್ಟರ್ ಓರ್ವನ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದ್ದಾರೆ.

ಗೂಳಿಹಟ್ಟಿ ಚಿತ್ರದಲ್ಲಿ ಸಹ ನಟನಾಗಿ ಅಭಿನಯಿಸಿದ್ದ ಕರಣ್ ಮಹಾದೇವ್ ಅಲಿಯಾಸ್ ಮಂಜುನಾಥ್ ವಿರುದ್ಧ ಯುವತಿ ಅತ್ಯಾಚಾರದ ದೂರು ದಾಖಲಿಸಿದ್ದು ಡ್ಯಾನ್ಸ್ ಕಲಿಸುತ್ತೇನೆ ಎಂದು ಸ್ನೇಹ ಬೆಳೆಸಿ ಬಳಿಕ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.

ಯುವತಿಗೆ ಮದುವೆ ನಿಶ್ಚಯವಾಗಿದ್ದರೂ ಸುಮ್ಮನಾಗದೇ ನೀನು ಯಾರನ್ನೇ ಮದುವೆಯಾದರೂ ನಾನು ಕರೆದಾಗಲೆಲ್ಲಾ ಬರಬೇಕು ಎಂದು ಹೇಳಿದ್ದಾನಂತೆ. ಅಲ್ಲದೆ ತನ್ನ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ ಬ್ಲಾಕ್ ಮೇಲ್ ಮಾಡಿ ನನ್ನನ್ನು ಬಲವಂತವಾಗಿ ಅತ್ಯಾಚಾರಿಸುತ್ತಿದ್ದ ಎಂದು ಜ್ಞಾನಭಾರತಿ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಾಳೆ.

ಒಂದು ಬಾರಿ ನಾನು ಗರ್ಭೀಣಿಯಾದಾಗ ಮನೆ ಬಳಿ ಇರುವ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಾವಿಬ್ಬರು ಗಂಡ-ಹೆಂಡತಿ ನಮಗೆ ಇಷ್ಟುಬೇಗ ಮಗು ಬೇಡ ಎಂದು ಗರ್ಭಪಾತ ಮಾಡಿಸಿದ. ಬಳಿಕ ನಾನು ಆತನ ಮನೆಗೆ ಹೋಗುವುದನ್ನು ನಿಲ್ಲಿಸಿದ್ದೆ. ಇದರಿಂದ ಕುಪಿತಗೊಂಡ ಆತ ನನ್ನ ಅಶ್ಲೀಲ ವಿಡಿಯೋವನ್ನು ನನ್ನನ್ನು ವಿವಾಹವಾಗಲಿರುವ ಹುಡುಗನಿಗೆ ತೋರಿಸುವುದಾಗಿ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ಯುವತಿ ಉಲ್ಲೇಖಿಸಿದ್ದಾಳೆ.

Comments are closed.