ಕರ್ನಾಟಕ

ಕೊನೆಗಾಲದಲ್ಲಿ ಬಂಗಾರಪ್ಪ ಸೋಲು ಕಾಣುವಂತೆ ಮಾಡಿದ್ದು ನ್ಯಾಯನಾ; ಕುಮಾರಸ್ವಾಮಿ

Pinterest LinkedIn Tumblr


ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಕೊನೆಯ ಸೋಲು ಕಾಣುವಂತೆ ಮಾಡಿದ್ರಲ್ಲ ಅದು ನ್ಯಾಯನಾ ಎಂದು ಪ್ರಶ್ನೆ ಮಾಡಿದ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ, ಈ ಬಾರಿ ಆ ಬಂಗಾರಪ್ಪನವರ ಪುತ್ರನನ್ನು ಗೆಲ್ಲಿಸುವ ಮೂಲಕ ಬಂಗಾರಪ್ಪನವರ ಆತ್ಮಕ್ಕೆ ಶಾಂತಿ ಕೋರಬೇಕು. ಆ ಮೂಲಕ ಬಂಗಾರಪ್ಪನವರ ಗೆಲುವು ನೋಡಬೇಕ ಎಂದು ಕರೆ ಕೊಟ್ಟರು.

ಲೋಕಸಭೆ ಉಪಚುನಾವಣೆ ನಿಮಿತ್ತ ಪಕ್ಷದ ಅಭ್ಯರ್ಥಿ ಮಧು ಬಂಗಾರಪ್ಪ ಪರವಾಗಿ ಪ್ರಚಾರ ಮಾಡಲು ಶಿರಾಳಕೊಪ್ಪಕ್ಕೆ ಬಂದಿಳಿದ ಸಿ.ಎಂ. ಕುಮಾರಸ್ವಾಮಿ, ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಭಾವನಾತ್ಮಕವಾಗಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದರು.

ಮಧುವನ್ನು ಆಯ್ಕೆ ಮಾಡಿ ಕಳಿಸಿಕೊಡಿ. ನನ್ನ ಮೇಲೆ ನಂಬಿಕೆ ಇಟ್ಟು ಸಮಯ ಕೊಡಿ. ಎಲ್ಲ ಯೋಜನೆಗಳನ್ನು ಜಾರಿಗೆ ತರ್ತೇನೆ. ಬಂಗಾರಪ್ಪ ನಮ್ಮೆಲ್ಲರ ಹೃದಯದಲ್ಲಿದ್ದಾರೆ. ಮಧು ಬಂಗಾರಪ್ಪನವರನ್ನು ಬಂಗಾರಪ್ಪ ನನ್ನ ಜೊತೆ ಮಾಡಿ ಹೋಗಿದ್ದಾರೆ. ಸೊರಬದಲ್ಲಿ ಮಧು ಸೋತಿದ್ದಾರೆ. ಆದರೆ ಒಂದು ಬಾರಿ ಪರೀಕ್ಷೆ ಮಾಡಿ

ಜನಸಾಮಾನ್ಯರ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ನಾನು ಶ್ರೀಮಂತರ ಮುಖ್ಯ ಮಂತ್ರಿ ಅಲ್ಲ, ಬಡವರ ಮುಖ್ಯ ಮಂತ್ರಿ. ದೆಹಲಿಯಲ್ಲಿ ಇರುವ ಸರ್ಕಾರ, ಜನರ ಹಾದಿ ತಪ್ಪಿಸುತ್ತಿದೆ. ಮೋದಿ ಹೆಸರಿಗೆ ವರ್ಚಸ್ಸು ಕಡಿಮೆಯಾಗ್ತಿದೆ. ಹೀಗಾಗಿ ಇಲ್ಲಿನ ಬಿಜೆಪಿ ನಾಯಕರು ಮೋದಿ ಹೆಸರು ಎತ್ತೋದಿಲ್ಲ. ದೆಹಲಿಯಲ್ಲಿ ಮತ್ತೊಂದು ಉತ್ತಮ ಜನಪರ ಸರ್ಕಾರ ತರಲು ಇದು ಮುನ್ಸೂಚನೆ ಎಂದರು.

ಕಳೆದ ಚುನಾವಣೆಯಲ್ಲಿ ಇದೇ ಮೈದಾನಕ್ಕೆ ಬಂದಿದ್ದೆ. ದಯವಿಟ್ಟು ಶಿರಾಳಕೊಪ್ಪದ ಜನತೆಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ, ಮಧು ಬಂಗಾರಪ್ಪ ನನ್ನ ಸಹೋದರ ಸಮಾನ. ಜಿಲ್ಲೆಯಲ್ಲಿ ಬಗರ್ ಹುಕುಂ, ನೀರಾವರಿ ಸಮಸ್ಯೆಗೆ ಪಾದಯಾತ್ರೆ ಮುಖಾಂತರ ಹೋರಾಟ ಮಾಡಿದ್ದರು. ಈ ಬಾರಿ ಆಯ್ಕೆ ಮಾಡಿದರೆ ನಿಮ್ನ ಕುಟುಂಬದ ಅಣ್ಣ, ತಮ್ಮನಂತೆ ಕ್ರಿಯಾಶೀಲವಾಗಿ ಕೆಲಸ ಮಾಡ್ತಾರೆ. ಏತ ನೀರಾವರಿ ಯೋಜನೆಯನ್ನು ಈ ಭಾಗಕ್ಕೆ ತರಲು ನಮ್ಮ ಸರ್ಕಾರ ಚಿಂತನೆ ಮಾಡಿದೆ. ಮೈತ್ರಿ ಸರ್ಕಾರದ ಕರ್ತವ್ಯ ಮತ್ತು ಬದ್ದತೆ ಇದು ಎಂದು ಸಿಎಂ ಹೇಳಿದರು.

ರಾಜ್ಯದಲ್ಲಿ ಜನತೆ ಯಾರಿಗೂ ಬಹುಮತವನ್ನು ನೀಡಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆ ಮಾಡಬೇಕಾಯ್ತು. ಬಿಜೆಪಿ ನಾಯಕರು ಮೈತ್ರಿ ಸರ್ಕಾರ ಅಭದ್ರಗೊಳಿಸಲು ಹೊರಟಿದ್ದಾರೆ. ಶಾಸಕರನ್ನು ಮಾರಾಟ ಮಾಡತಕ್ಕ ಹೀನ ಕೃತ್ಯಕ್ಕೆ ಕೈ ಹಾಕಿದ್ದಾರೆ. ಸರ್ಕಾರ ಬೀಳುತ್ತೆ, ನಾವು ಅಧಿಕಾರಿಕ್ಕೆ ಬರ್ತೀವಿ ಅಂತ ಅವರು ಹೇಳೋದು ಅಷ್ಟು ಸುಲಭವಲ್ಲ. ಅವರ ಕಸರತ್ತಿಗೆ ಯಶಸ್ಸು ಸಿಗೋದಿಲ್ಲ. ನೀವು ಮಧು ಬಂಗಾರಪ್ಪ ಗೆಲ್ಲಿಸಿದರೆ ಸರ್ಕಾರವನ್ನು ಅಭದ್ರಗೊಳಿಸುತ್ತಿರುವ ವ್ಯಕ್ತಿಗಳಿಗೆ ಪಾಠ ಆಗುತ್ತದೆ ಎಂದರು.

ನನ್ನ ಆರೋಗ್ಯದ ವಿಚಾರದಲ್ಲಿ ಕೆ.ಎಸ್. ಈಶ್ವರಪ್ಪ ಏನು ಸಲಹೆ ನೀಡಿದ್ದಾರೆ ಅದನ್ನು ಸ್ವಾಗತಿಸುತ್ತೆನೆ. ಇಸ್ರೇಲ್ ದೇಶಕ್ಕೆ ಹೋಗಿದ್ದ ವೇಳೆ ಆದಂತಹ ಅನುಭವವನ್ನು ಹಂಚಿಕೊಂಡಿದ್ದೆನೆ ಅಷ್ಟೇ. ನನಗಾದ ನೋವನ್ನು ಜನರ ಬಳಿ ತೋಡಿಕೊಂಡಿದ್ದೆನೆ. ಆ ಸಂದರ್ಭದಲ್ಲಿ ಇದ್ದ ಬಸವರಾಜ್ ಹೊರಟ್ಟಿ ಹಾಗೂ ಇತರರಿಗೆ ಮಾತ್ರ, ನನಗೆ ಏನಾಗಿತ್ತು ಎಂದು ಗೊತ್ತು. ಶಾಸಕಾಂಗ ಪಕ್ಷದ ನಾಯಕರಾಗಿದ್ದ ವೇಳೆ, ಯಡಿಯೂರಪ್ಪ ಸದನದಲ್ಲಿ ಯಾವ ರೀತಿಯ ಭಾಷೆ ಬಳಸಿದ್ದರು ಎಂಬುದನ್ನು ಬಿಜೆಪಿಯವರು ನೆನಪಿಸಿಕೊಳ್ಳಲಿ. ಲಕ್ಷ್ಮೀ ಹೆಬ್ಬಾಳ್ಕರ್, ಶೋಭಾ ಕರಂದ್ಲಾಜೆಗೆ ಏಕವಚನ ಬಳಸುತ್ತಿದ್ದಾರೆ ಎಂಬ ಬಿಜೆಪಿ ಮುಖಂಡ ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದರು.

ನಾನು ಎಲ್ಲಿ ರೈತರ ಸಾಲ ಮನ್ನಾ ಮಾಡುವುದಿಲ್ಲ ಎಂದು ಹೇಳಿದ್ದೇನೆ. ಸಾಲ ಮನ್ನಾ ಸಂಬಂಧ ಈಗಾಗಲೇ, ಸಂಬಂದಪಟ್ಟ ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳುತ್ತಿದ್ದೆನೆ ಎಂದು ಪುನರುಚ್ಚರಿಸಿದ ಸಿಎಂ, ಈ ದೇಶದಲ್ಲಿ ಯಾರಾದ್ರೂ ನನ್ನಷ್ಟು ದೊಡ್ಡ ಮೊತ್ತದ ಸಾಲ ಮನ್ನಾ ಮಾಡಿದ್ದಾರಾ? ಸಿದ್ದರಾಮಯ್ಯ ಸರ್ಕಾರ ಕೂಡ ಸಾಲಮನ್ನಾ ಮಾಡಿದ್ದ ಹಣವನ್ನು ನಾನು ಜೋಡಿಸಿದೆ. ಸಿದ್ದರಾಮಯ್ಯ ಮಾಡಿದ ಸಾಲದ ಘೋಷಣೆ 8000 ಕೋಟಿ ನಾನು ಹೊಂದಿಸಿದ್ದೇನೆ ಎಂದರು.

Comments are closed.