ಕರ್ನಾಟಕ

ಮೈಸೂರಿನಲ್ಲೊಂದು #MeToo: ಚೀಟಿ ಹಣ ಕೇಳಿದರೆ ಪ್ರವಾಸಕ್ಕೆ ಕರೆದ ಚಿಟ್ ಫಂಡ್ ಮಾಲೀಕ

Pinterest LinkedIn Tumblr

2
ಮೈಸೂರು: ದೇಶಾದ್ಯಾಂತ ಭಾರಿ ಚರ್ಚೆಗೆ ಗ್ರಾಸವಾಗಿ ಸ್ಯಾಂಡಲ್‌ವುಡ್‌ನಲ್ಲಿ ಬಿರುಗಾಳಿಯನ್ನೆ ಎಬ್ಬಿಸಿರುವ #MeToo ಪ್ರಕರಣ ಈಗ ಸಾಮಾಜಿಕ ಜನ ಜೀವನದಲ್ಲಿಯೂ ಕೇಳಿಬಂದಿದೆ. ತನ್ನ ಹಣ ನೀಡುಂತೆ ಕೇಳಿದ್ದಕ್ಕೆ ಪ್ರವಾಸಕ್ಕೆ ಕರೆದ ವ್ಯಕ್ತಿ ವಿರುದ್ದ ಮಹಿಳೆ ಈಗ #MeToo ಆರೋಪ ಮಾಡಿದ್ದು, ನೊಂದ ಮಹಿಳೆ ಇದೀಗ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾಳೆ.

ಏನಿದು ಪ್ರಕರಣ ?

ನಗರದಲ್ಲಿ ಒಂದು ವಿಚಿತ್ರ ಮೀ ಟೂ ಪ್ರಕರಣ ಬೆಳಕಿಗೆ ಬಂದಿದ್ದು, ಭಾರಿ ಸದ್ದು ಮಾಡುತ್ತಿದೆ. ಚೀಟಿ ಹಣದ ವ್ಯವಹಾರ ನಡೆಸುತ್ತಿದ್ದ ಇಬ್ಬರ ನಡುವೆ ಈಗ ಈ ಮೀ ಟೂ ಪ್ರಕರಣ ಬೆಳಕಿಗೆ ಬಂದಿದೆ. ಚೀಟಿ ಹಣ ಕೇಳಿದ ಮಹಿಳೆಗೆ ನನ್ನ ಜೊತೆ ಫಾರಿನ್‌ಗೆ ಬಾ ಎಂದ ಚಿಟ್‌ಫಂಡ್ ಸಂಸ್ಥೆ ಮಾಲೀಕನ ಮೇಲೆ ಇದೀಗ ಎಫ್‌ಐಆರ್‌ ದಾಖಲಾಗಿದೆ.

ಚೀಟ್ ಫಂಡ್ಸ್ ಸಂಸ್ಥೆಯ ವಿರುದ್ದ ಆರೋಪ

ಮೈಸೂರಿನ ನಿವಾಸಿಯಾದ ಮಧುಶ್ರೀ ಎಂಬ ಮಹಿಳೆಯಿಂದ ಮೋಹನ್ ಕುಮಾರ್ ಎಂಬುವರ ಮೇಲೆ ದೂರು ದಾಖಲಿಸಿದ್ದಾರೆ. ನಗರದ ನಜರ್‌ಬಾದ್‌ನಲ್ಲಿ ಸೀಬಿ ನರಸಿಂಹಸ್ವಾಮಿ ಚೀಟ್ ಫಂಡ್ಸ್ ನಡೆಸುತ್ತಿರುವ ಮೋಹನ್ ಕುಮಾರ್ ಎಂಬಾತನ ಬಳಿ ಮಧುಶ್ರೀ 10 ಲಕ್ಷದ ಲಾಟರಿ ಚೀಟಿ ಹಾಕಿ 7500 ತಿಂಗಳ ಕಂತು ಕಟ್ಟುತ್ತಿದ್ದರು. ಈ ತಿಂಗಳ ಚೀಟಿಯಲ್ಲಿ ಮಧುಶ್ರೀ ಹೆಸರಿಗೆ ಲಾಟರಿ ಚೀಟಿ ಸಿಕ್ಕಿತ್ತು ಒಪ್ಪಂದದಂತೆ 10 ಲಕ್ಷಕ್ಕೆ ಶೇ.30 ಕಮಿಷನ್ ಪಡೆದು 7 ಲಕ್ಷ ಹಣವನ್ನ ಮಧುಶ್ರೀಗೆ ಕೊಡಬೇಕಿತ್ತು.

ಆದರೆ 5 ಲಕ್ಷ ಹಣ ನೀಡಿ 2 ಲಕ್ಷ ಬಾಕಿ ಉಳಿಸಿಕೊಂಡಿದ್ದ ಮೋಹನ್‌ಕುಮಾರ್, ಬಾಕಿ 2 ಲಕ್ಷ ಹಣ ಕೇಳಿದ್ದಕ್ಕೆ ನನ್ನ ಜೊತೆ ಫಾರಿನ್‌ಗೆ ಬಾ. ಇಲ್ಲ ಹಣ ಸಿಗುವುದಿಲ್ಲ ಎಂದು ಅಸಭ್ಯವಾಗಿ ದೂರವಾಣಿ ಮೂಲಕ ಆಫರ್ ನೀಡಿದ್ದ ಎಂದು ಆಡಿಯೋ ಸಮೇತ ಪೊಲೀಸರಿಗೆ ದೂರು ನೀಡಿದ್ದಾರೆ.

ಮಾಲೀಕನ ವಿರುದ್ದ ಎಫ್‌ಐಆರ್ ದಾಖಲು

ಇನ್ನು ಮೋಹನ್‌ಕುಮಾರ್‌ರಿಂದ ಮಾನಸಿಕ ಕಿರುಕುಳಕ್ಕೊಳಗಾಗಿರುವ ಮಹಿಳೆಗೆ ಸಂಘ ಸಂಸ್ಥೆಗಳು ಸಾಥ್‌ ನೀಡಿವೆ. ಸ್ಥಳಿಯ ಹೋರಾಟಗಾರ್ತಿ ಭಾನುಮೋಹನ್‌ ಮಧುಶ್ರೀ ಜೊತೆ ನಿಂತಿದ್ದು, ನಜರ್‌ಬಾದ್ ಪೊಲೀಸ್ ಠಾಣೆಗೆ ದೂರು ಎಫ್‌ಐಆರ್‌ ದಾಖಲು ಮಾಡಿದ್ದು, ಹೆಣ್ಣಿನ ಮೇಲೆ ಆಗುತ್ತಿರುವ ದೌರ್ಜನ್ಯ ತಡೆಗಟ್ಟಬೇಕು ಎಂದು ಆಗ್ರಹಿಸಿದ್ದಾರೆ.

ಈ ಬಗ್ಗೆ ಆರೋಪಿ ಮೋಹನ್‌ಕುಮಾರ್‌ಗೆ ಪೊಲೀಸರು ಕರೆ ಮಾಡಿದರೆ ದೂರವಾಣಿಗೆ ಸ್ಪಂದಿಸುತ್ತಿಲ್ಲ. ಸದ್ಯಕ್ಕೆ ಮಹಿಳೆ ದೂರಿನ ಅನ್ವಯ ಎಫ್‌ಐಆರ್‌ ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿಗಾಗಿ ಬಲೆ ಬಿಸಿದ್ದು, ಮೀ ಟೂ ಘಾಟನ್ನ ಹೆಚ್ಚಿಸಿದ್ದಾರೆ.

Comments are closed.