ಕರ್ನಾಟಕ

ಚುನಾವಣಾ ಪ್ರದೇಶಗಳಿಗೆ ಸುಳಿಯದಂತೆ ಅನಂತ್ ಕುಮಾರ್ ಹೆಗಡೆಗೆ ಬಿಜೆಪಿ ಸೂಚನೆ

Pinterest LinkedIn Tumblr


ಬೆಂಗಳೂರು: ನವೆಂಬರ್ 3 ರಂದು ನಡೆಯುವ ರಾಜ್ಯದ ಐದು ಉಪ ಚುನಾವಣೆಯಲ್ಲಿ ಕೇಂದ್ರ ಸಚಿವ ಅನಂತ್​​ಕುಮಾರ್ ಹೆಗಡೆ ಅವರನ್ನು ಬಿಜೆಪಿ ದೂರವಿಟ್ಟದೆ. ಯಾವುದೇ ಕ್ಷೇತ್ರಗಳಿಗೆ ಸುಳಿಯದಂತೆ ಹೈಕಮಾಂಡ್ ಸೂಚನೆ ನೀಡಿದೆ.

ಕಳೆದ ಚುನಾವಣೆಯಲ್ಲಿ ಪಕ್ಷಕ್ಕೆ ದೊಡ್ಡ ಡ್ಯಾಮೇಜ್ ಆಗಿತ್ತು. ಎಲ್ಲಾ ಕಡೆ ಭಾಷಣ ಮಾಡಿದ್ದರೆ ವಿವಾದ ಗ್ಯಾರೆಂಟಿ ಎನ್ನುವುದು ಬಿಜೆಪಿಗೆ ಪಕ್ಷಕ್ಕೆ ಗೊತ್ತಿದೆ. ಸಂವಿಧಾನವನ್ನೇ ಬದಲಿಸುತ್ತನೇ ಎನ್ನುವ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ ಅನುಭವಿಸಿದೆ. ಈ ಹಿಂದಿನ ಕಹಿ ಅನುಭವದಿಂದ ಬಿಜೆಪಿ ಎಚ್ಚೆತ್ತುಕೊಂಡಿದೆ ಎನ್ನಲಾಗಿದೆ.

ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಬಿಜೆಪಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಯಾವುದೇ ಕಾರಣಕ್ಕೂ ಹೆಗಡೆ ಕೈಯಲ್ಲಿ ಮೈಕ್ ಕೊಡಬೇಡಿ ಚುನಾವಣಾ ಪ್ರಚಾರಕ್ಕೆ ಬಿಟ್ಟು ಕೊಳ್ಳಬೇಡಿ ಪ್ರಧಾನಿ ಸೂಚನೆ ನೀಡಿದ್ದಾರೆ.

ಹಿಂದೆಯೂ ಸಿದ್ದರಾಮಯ್ಯ ಅವರ ಕಾಂಗ್ರೆಸ್​​ ಸರ್ಕಾರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದರು. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ್ದ ಅವರು, “ಸಿದ್ದರಾಮಯ್ಯ ವೋಟಿನ ಆಸೆಗೆ ಏನಬೇಕಾದ್ರು ಮಾಡುತ್ತಾರೆ. ವೋಟಿಗಾಗಿ ಯಾರು ಬೇಕೋ ಅವರ ಬೂಟ್‌ ಸಹ ನೆಕ್ಕುವ ಸ್ಥಿತಿಗೆ ತಲುಪಿದ್ದಾರೆ” ಎಂದು ಟೀಕಿಸಿ ವಿವಾದ ಸೃಷ್ಟಿಸಿದ್ದರು.

ಇನ್ನು ‘ಸಂವಿಧಾನ ಬದಲಾವಣೆ ಮಾಡಲು ಅಧಿಕಾರಕ್ಕೆ ಬಂದಿದ್ದೇವೆ’ ಎಂಬ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿಕೆಗೂ ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಬಳಿಕ ಹೆಗಡೆ ಹೇಳಿಕೆ ಬಗ್ಗೆ ಕ್ಷಮೆ ಯಾಚನೆ ಮಾಡಿದ್ದರು. ರಾಹುಲ್ ನೇತೃತ್ವದಲ್ಲಿ ಸಂಸದ ಅನಂತ್ ವಿರುದ್ಧ ಪ್ರತಿಭಟನೆ ನಡೆಸಲಾಗಿತ್ತು. ಇದಕ್ಕೆ ಮಣಿದ ಕೇಂದ್ರ ಕೌಶಾಲ್ಯಾಭಿವೃದ್ಧಿ ಸಚಿವ ಅವರು, ‘ತಮ್ಮ ಹೇಳಿಕೆಯಿಂದ ನೋವಾಗಿದ್ದರೆ ಕ್ಷಮೆ ಯಾಚಿಸುವೆ’ ಎಂದು ಹೇಳಿದರು.

Comments are closed.