ಕರ್ನಾಟಕ

ಒಂದೇ ದಿನ ಮೈಸೂರು ರಾಜಮನೆತನದಲ್ಲಿ ಎರಡು ಸಾವು: ಸಾಂಪ್ರದಾಯಿಕ ದಸರಾಗೆ ತಡೆ

Pinterest LinkedIn Tumblr


ಬೆಂಗಳೂರು: ಒಂದೇ ದಿನ ಮೈಸೂರು ರಾಜಮನೆತನದಲ್ಲಿ ಎರಡು ಸಾವಾಗಿವೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಸಹೋದರಿ ವಿಶಾಲಾಕ್ಷಿದೇವಿ ನಿಧನವಾಗಿದ್ಧಾರೆ. ಬೆಂಗಳೂರಿನ ನಿವಾಸಿಯಾಗಿರುವ ವಿಶಾಲಾಕ್ಷಿದೇವಿ ಅವರು ಕಳೆದ ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆರೋಗ್ಯದಲ್ಲಿ ಏರುಪೇರು ಉಂಟಾಗಿ ಪರಿಸ್ಥಿತಿ ಗಂಭೀರವಾಗಿತ್ತು. ಆದೀರಗ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ಧಾರೆ ಎನ್ನಲಾಗಿದೆ.

ಕಳೆದ ಒಂದು ವಾರದಿಂದ ಮೈಸೂರು ವಿಶಾಲಾಕ್ಷಿದೇವಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಹೀಗಾಗಿ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ವಿಶಾಲಾಕ್ಷಿದೇವಿ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ಇದು ಎರಡನೇ ಸಾವಾಗಿದ್ದು, ರಾಜವಂಶಸ್ಥರಿಗೆ ಅತೀವ ನೋವು ತಂದಿದೆ.

ಇಂದು ಬೆಳಿಗ್ಗೆಯಷ್ಟೇ ರಾಜವಂಶಸ್ಥೆ ಪ್ರಮೋದಾದೇವಿ ಅವರ ತಾಯಿ ಪುಟ್ಟಚಿನ್ನಮ್ಮಣ್ಣಿ ಅವರ ಸಾವನ್ನಪ್ಪಿದ್ದರು. ಹೀಗಾಗಿ ಇಂದು ಮೈಸೂರು ಅರಮನೆಯಲ್ಲಿ ನಡೆಯಬೇಕಿದ್ದ ಧಾರ್ಮಿಕ ಕಾರ್ಯಗಳನ್ನ ಮುಂದೂಡಲಾಗಿತ್ತು. ಈ ಬೆನ್ನಲ್ಲೇ ಮತ್ತೊಂದು ಸಾವಿನ ಸುದ್ದಿ ಕೇಳಿ ಬಂದಿದ್ದು, ಮೈಸೂರು ದಸರಾ ಇತಿಹಾಸದಲ್ಲೇ ನಡೆದ ಕೆಟ್ಟ ಘಟನೆ ಇದಾಗಿದೆ.

ಮೈಸೂರು ರಾಜವಂಶಸ್ಥರಿಗೆ ಇಂದು ಶೋಕದ ದಿನ. ಒಂದೇ ದಿನ ಎರಡು ಸಾವು ಸಂಭವಿಸಿ ಕುಟುಂಬಸ್ಥರಲ್ಲಿ ಭೀಕರ ನೋವನ್ನುಂಟು ಮಾಡಿದೆ. ಬೆಳಿಗ್ಗೆ ರಾಜಮಾತೆ ಅವರ ತಾಯಿ, ಸಂಜೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಸಹೋದರಿ ವಿಶಾಲಾಕ್ಷಿದೇವಿ ನಿಧನರಾಗಿದ್ದಾರೆ. ಹೀಗಾಗಿ ಕುಂಟುಬಸ್ಥರ ಆಕ್ರಂದನ ಮತ್ತಷ್ಟು ಮುಗಿಲುಮುಟ್ಟಿದೆ.

ವಿಶಾಲಾಕ್ಷಿದೇವಿ ಅವರಿಗೆ ಪ್ರಾಣಿಗಳನ್ನು ಕಂಡರೆ ಅಚ್ಚುಮೆಚ್ಚು. ಈ ಹಿಂದೆ ಅವರೇ ಚಿರತೆ ಮರಿಯೊಂದನ್ನು ಸಾಕಿದ್ದರು. ಬಳಿಕ ಅದು ದೊಡ್ಡದಾಗಿ ತನ್ನ ಭೇಟೆಯನ್ನು ತಾನೇ ಹುಡುಕಲು ಶಕ್ತವಾದ ಬಳಿಕ ಬಂಡೀಪುರ ಅರಣ್ಯಕ್ಕೆ ಬಿಟ್ಟಿದ್ದರು. ಆ ನಂತರದ ದಿನಗಳಲ್ಲಿ ಈ ಚಿರತೆ ವಿಶಲಾಕ್ಷಿ ದೇವಿ ಅವರನ್ನು ಎಷ್ಟು ಹಚ್ಚಿಕೊಂಡಿತ್ತು ಅಂದ್ರೆ, ಅವರು ಅರಣ್ಯಕ್ಕೆ ಬಂದು ನಿರ್ಧಿಷ್ಠ ಸ್ಥಳದಲ್ಲಿ ಅದನ್ನು ಕೂಗಿ ಕರೆದರೆ, ಆ ಚಿರತೆ ಅಲ್ಲಿಗೆ ಬರುತ್ತಿತ್ತು. ಅಷ್ಟರಮಟ್ಟಿಗೆ ಇಬ್ಬರ ನಡುವೆ ಬಾಂಧವ್ಯ ಮೂಡಿತ್ತು.

ರಾಜಮಾತೆ ಅವರ ತಾಯಿ ಪುಟ್ಟಚಿನ್ನಮ್ಮಣ್ಣಿ ಅವರಿಗೆ 98 ವರ್ಷ ವಯಸ್ಸಾಗಿತ್ತು.. ವಯೋಸಹಜ ಖಾಯಿಲೆಯಿಂದ ಇಂದು ಮೃತ ಪಟ್ಟಿದ್ದಾರೆ.. ರಾಜಮಾತೆಯವರ ಸ್ವಂತ ತಾಯಿ ಮೃತಪಟ್ಟಿರುವುದರಿಂದ ಅರಮನೆಯಲ್ಲಿ ನಡೆಬೇಕಿದ್ದ ಸಾಂಪ್ರದಾಯಿಕ ದಸರಾಗೆ ತಡೆಯಾಗಿದೆ.

ಇನ್ನು ಈ ನಡುವೇ ದಸರಾ ವೀಕ್ಷಿಸಲು ಮೈಸೂರಿಗೆ ಆಗಮಿಸಿರುವ ಮುಖ್ಯಮಂತ್ರಿ ಸಿಎಂ ಕುಮಾರಸ್ವಾಮಿ ಅವರು ಮೃತ ರಾಜವಂಶಸ್ಥರಿಗೆ ಸಂತಾಪ ಸೂಚಿಸಿದ್ಧಾರೆ. ಅಲ್ಲದೇ ನಾಡಿನ ದಸರಾ ಹಬ್ಬದ ಸಂದರ್ಭದಲ್ಲಿ ಈ ರೀತಿ ಅಮಾನುಷ ಘಟನೆ ನಡೆಯಬಾರದಿತ್ತು ಎಂದು ವಿಷಾದ ವ್ಯಕ್ತಪಡಿಸಿದ್ಧಾರೆ.

Comments are closed.