ಕರ್ನಾಟಕ

86 ಬರಪೀಡಿತ ತಾಲೂಕುಗಳ ಜೊತೆಗೆ 14 ಹೊಸ ತಾಲೂಕುಗಳ ಸೇರ್ಪಡೆ

Pinterest LinkedIn Tumblr


ಬೆಂಗಳೂರು: ಪ್ರಸ್ತುತ ವರ್ಷ ರಾಜ್ಯದಲ್ಲಿ ಮುಂಗಾರು ಮಳೆ ವೈಫಲ್ಯವಾದ ಹಲವು ತಾಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರ್ಕಾರ ಕಳೆದ ಸೆಪ್ಟೆಂಬರ್​ನಲ್ಲಿ ಘೋಷಣೆ ಮಾಡಿತ್ತು. ಸೆಪ್ಟೆಂಬರ್​ 25ರಂದು 26 ಜಿಲ್ಲೆಗಳ 86 ತಾಲೂಕುಗಳನ್ನು ಬರಪೀಡಿತ ಎಂದು ಪ್ರಕಟಿಸಿತ್ತು. ಇದೀಗ ಮತ್ತೆ 14 ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ರಾಜ್ಯ ಸರ್ಕಾರ ಘೋಷಿಸಿದೆ.

2016ರ ಬರ ಕೈಪಿಡಿ ಹಾಗೂ ಪರಿಷ್ಕೃತ ಮಾರ್ಗಸೂಚಿಯ ಮಾನದಂಡಗಳ ಪ್ರಕಾರ ವಾಡಿಕೆಗಿಂತ ಶೇ.60ರಷ್ಟು ಮಳೆ ಕೊರತೆ ಹಾಗೂ ಸತತ ಮೂರು ವಾರ ಅಥವಾ ಅಧಿಕ ಶುಷ್ಕ ವಾತಾವರಣ ಪರಿಗಣಿಸಿ, ಹೊಸ ತಾಲೂಕುಗಳನ್ನು ಬರ ಪಟ್ಟಿಗೆ ಸೇರಿಸಲಾಗಿದೆ ಎಂದು ಕಂದಾಯ ಇಲಾಕೆ ಉಪಕಾರ್ಯದರ್ಶಿ ಟಿ.ನಾರಾಯಣಪ್ಪ ಸರ್ಕಾರದ ಆದೇಶಾನುಸಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೊಸದಾಗಿ ಸೇರ್ಪಡೆಯಾದ ಬರ ತಾಲೂಕುಗಳು

ಬೆಂಗಳೂರು ನಗರದ ಆನೇಕಲ್​, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ತುಮಕೂರು ಜಿಲ್ಲೆಯ ತುರುವೇಕರೆ, ಚಿತ್ರದುರ್ಗದ ಹೊಳಲ್ಕೆರೆ, ಹೊಸದುರ್ಗ, ದಾವಣಗೆರೆ ಜಿಲ್ಲೆಯ ದಾವಣಗೆರೆ, ಜಗಳೂರು, ಮಂಡ್ಯದ ಜಗಳೂರು, ಪಾಂಡವಪುರ, ಬೀದರ್​ನ ಔರಾದ್, ಬಸವಕಲ್ಯಾಣ, ಬೆಳಗಾವಿಯ ಅಥಣಿ ಹಾಗೂ ಬಾಗಲಕೋಟೆ ಜಿಲ್ಲೆಯ ಬೀಳಗಿ ಮತ್ತು ಮುದೋಳ ತಾಲೂಕುಗಳು ಬರ ಪಟ್ಟಿಗೆ ಸೇರ್ಪಡೆಯಾದ ತಾಲೂಕುಗಳಾಗಿವೆ.

Comments are closed.