ಕರ್ನಾಟಕ

ಬೆಂಗಳೂರು ದಕ್ಷಿಣ ಭಾಗದಲ್ಲಿ ಮಳೆ ಅಬ್ಬರ: ತುಂಬಿ ಹರಿದ 9 ಕೆರೆಗಳು

Pinterest LinkedIn Tumblr


ಬೆಂಗಳೂರು: ಭಾನುವಾರ ರಾತ್ರಿಯಿಂದ ಸೋಮವಾರ ಮುಂಜಾನೆವರೆಗೆ ಹಾಗೂ ಸೋಮವಾರ ರಾತ್ರಿ ಸುರಿದ ಮಳೆ ರಾಜಧಾನಿ ನಿವಾಸಿಗಳನ್ನು ಹೈರಾಣಾಗಿಸಿತು.ಧಾರಾಕಾರ ಮಳೆಗೆ ಹಲವು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದ್ದವು. ಹಲವು ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ತೊಂದರೆ ಅನುಭವಿಸಿದರು.

ಸೋಮವಾರ ರಾತ್ರಿ 9 ಗಂಟೆ ಬಳಿಕ ನಗರದ ಹಲವೆಡೆ ಭಾರಿ ಮಳೆ ಸುರಿಯಿತು. ಯಶವಂತಪುರ, ಮಹಾಲಕ್ಷ್ಮೀ ಲೇಔಟ್‌, ನಂದಿನಿ ಲೇಔಟ್‌, ರಾಜಾಜಿನಗರ, ಮೆಜೆಸ್ಟಿಕ್‌, ಚಾಮರಾಜಪೇಟೆ, ವಿ.ವಿ.ಪುರ, ಕೆ.ಆರ್‌.ಮಾರುಕಟ್ಟೆ™, ಬಸವನಗುಡಿ, ಜಯನಗರ, ಜೆ.ಪಿ.ನಗರ ಮೊದಲಾದೆಡೆ ಭರ್ಜರಿ ಮಳೆ ಸುರಿಯಿತು. ಗೂಡ್‌ಶೆಡ್‌ ರಸ್ತೆ ಸೇರಿದಂತೆ ಕೆ.ಆರ್‌.ಮಾರುಕಟ್ಟೆ ಸುತ್ತಮುತ್ತಲಿನ ರಸ್ತೆಗಳು ಮಳೆನೀರಿನಿಂದ ತುಂಬಿಕೊಂಡು ಸಮಸ್ಯೆ ಸೃಷ್ಟಿಯಾಗಿತ್ತು. ರಸ್ತೆಗಳು ನೀರಿನಿಂದ ಜಲಾವೃತಗೊಂಡಿದ್ದರಿಂದ ವಾಹನ ಸಂಚಾರ ನಿಧಾನಗೊಂಡು ಟ್ರಾಫಿಕ್‌ ಜಾಮ್‌ ಉಂಟಾಗಿ ಸವಾರರು ಪರದಾಡಿದರು.

ಜೆಪಿನಗರ 7ನೇ ಹಂತದ ನವೋದಯನಗರದ 5ನೇ ಮುಖ್ಯ ರಸ್ತೆಯಲ್ಲಿಹಲವು ಮನೆಗಳಿಗೆ ರಾತ್ರಿ ನೀರು ನುಗ್ಗಿ ಜನರು ಇಡೀ ರಾತ್ರಿ ಜಾಗರಣೆ ಮಾಡಿದರು. ಹಿಂದಿನ ದಿನ ಮಳೆಯಿಂದಾಗಿ ಇಲ್ಲಿನ ಮನೆಗಳಿಗೆ ನೀರು ನುಗ್ಗಿತ್ತು. ಮಳೆ ನೀರು ಹೊರ ಹಾಕಿ ಸ್ವಚ್ಛಗೊಳಿಸಿದ್ದರು. ಪುನಃ ಮಳೆ ನೀರು ಮನೆ ಹಾಗೂ ನೀರಿನ ಸಂಪ್‌ ತುಂಬಿಕೊಂಡು ಸಮಸ್ಯೆ ಸೃಷ್ಟಿಸಿತು. ಇದೇ ಪ್ರದೇಶದಲ್ಲಿಮಳೆ ನೀರಿನ ಪ್ರವಾಹದಲ್ಲಿಹಲವು ದ್ವಿಚಕ್ರ ವಾಹನಗಳು ಕೊಚ್ಚಿಕೊಂಡು ಹೋಗಿವೆ ಎಂದು ಸ್ಥಳೀಯ ನಿವಾಸಿಗಳು ಮಾಹಿತಿ ನೀಡಿದ್ದಾರೆ. ಇದೇ ರೀತಿ ನಗರದ ಹಲವು ಪ್ರದೇಶಗಳಲ್ಲಿಮಳೆ ನೀರು ನುಗ್ಗಿದೆ. ಅನುಗ್ರಹ ಲೇಔಟ್‌ನಲ್ಲಿಮನೆಗಳಿಗೆ ನೀರು ನುಗ್ಗಿದೆ.

ದ್ವೀಪಗಳಾದ ಬಡಾವಣೆಗಳು:

ಭಾನುವಾರ ರಾತ್ರಿಯಿಂದ ಮುಂಜಾನೆವರೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ಗೊಟ್ಟಿಗೆರೆ ಸಮೀಪದ ಸುಬ್ಬರಾಯನಕೆರೆ, ಕಾಳೇನಅಗ್ರಹಾರ ಕೆರೆ ಮತ್ತು ಬಸವನಪುರ ಕೆರೆ ಉಕ್ಕಿ ಹರಿದ ಪರಿಣಾಮ ಹಿಮಗಿರಿ ಮೆಡೋಸ್‌ ಅಪಾಟ್‌ರ್‍ಮೆಂಟ್‌, ಕಾಳೇನ ಅಗ್ರಹಾರದ ಎಂಎಲ್‌ಎ ಲೇಔಟ್‌, ಬೋರಾ ಬಡಾವಣೆಯು ಜಲಾವೃತವಾಗಿತ್ತು. ರಾತ್ರಿಯಿಡೀ ಸುರಿದ ಮಳೆಗೆ ಈ ಪ್ರದೇಶಗಳು ಅಕ್ಷರಶಃ ದ್ವೀಪಗಳಾಗಿದ್ದವು. ನೀರಿನ ರಭಸಕ್ಕೆ ಕಾರು, ಬೈಕ್‌ಗಳು ತೇಲಾಡಿದವು. ಒಂದಕ್ಕೊಂದು ಡಿಕ್ಕಿ ಹೊಡೆದು ಜಖಂಗೊಂಡವು.

ಮಹಾ ಮಳೆಗೆ ಬೆಚ್ಚಿದ ನಗರ

ರಸ್ತೆ, ಅಂಡರ್‌ಪಾಸ್‌ಗಳಲ್ಲಿತುಂಬಿದ ನೀರು

*ಓಕಳಿಪುರ ಅಂಡರ್‌ಪಾಸ್‌ನಲ್ಲಿಮಳೆನೀರು ಕಟ್ಟಿಕೊಂಡು ವಾಹನಗಳ ಸಂಚಾರ ಸಾಧ್ಯವಾಗಲಿಲ್ಲ™. ಪರ್ಯಾಯ ರಸ್ತೆ ಬಳಸುವಂತೆ ಟ್ರಾಫಿಕ್‌ ಪೊಲೀಸರು ಚಾಲಕರಿಗೆ ಸೂಚನೆ ನೀಡಿದರು.

*ಜಯನಗರ 4 ನೇ ಬ್ಲಾಕ್‌ನ 4 ನೇ ಮುಖ್ಯರಸ್ತೆಯ 32 ನೇ ಕ್ರಾಸ್‌ನಿಂದ 36 ನೇ ಕ್ರಾಸ್‌ ರಸ್ತೆಯವರೆಗೆ ಮಳೆನೀರು ತುಂಬಿತ್ತು™. ಪಕ್ಕದಲ್ಲಿಮೆಟ್ರೊ ಬ್ಯಾರಿಕೇಡ್‌ ಹಾಕಿದ್ದರಿಂದ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ಸಂಚಾರ ಮಾರ್ಗ ಬದಲಿಸಲಾಯಿತು.

*ಬನ್ನೇರುಘಟ್ಟ ರಸ್ತೆಯ ಕಾರ್ಮೆಲ್‌, ಲೊಯೊಲ ಶಾಲೆ ಮುಂಭಾಗದ ರಸ್ತೆಯಲ್ಲಿಮಳೆನೀರು ತುಂಬಿದ್ದು, ಗಂಟೆಗಟ್ಟಲೆ ಸಂಚಾರ ದಟ್ಟಣೆ ಉಂಟಾಯಿತು.

*ಹೆಬ್ಬಾಳ ಮೇಲುರಸ್ತೆಯ ಕೆಳಗೆ ಸುಮಾರು 100 ಮೀಟರ್‌ನಲ್ಲಿಮಳೆನೀರು ನಿಂತು ಚಾಲಕರು ಪರದಾಡಿದರು.

*ಜೆಜೆ ನಗರದ ಟೆಲಿಕಾಂ ಲೇಔಟ್‌ನ ರಸ್ತೆಯಲ್ಲಿಮಳೆನೀರು ನಿಂತು ಸಮಸ್ಯೆಯಾಯಿತು.

*ಯಶವಂತಪುರ ರೈಲು ನಿಲ್ದಾಣ ಮುಂಭಾಗದ ರಸ್ತೆಯಲ್ಲಿನೀರು ನಿಂತು ಸಂಚಾರ ದಟ್ಟಣೆ ಉಂಟಾಯಿತು.

* ಲೀ ಮೆರಿಡಿಯನ್‌ ಅಂಡರ್‌ ಪಾಸ್‌ನಲ್ಲಿಮತ್ತೆ ನೀರು ತುಂಬಿಕೊಂಡು ವಾಹನ ಸಂಚಾರ ಬಂದ್‌ ಮಾಡಲಾಗಿದೆ. ಬೆಂಗಳೂರು: ಭಾನುವಾರ ಮತ್ತು ಸೋಮವಾರ ಸುರಿದ ಭಾರಿ ಮಳೆಗೆ ನಗರದಲ್ಲಿ 9 ಕೆರೆಗಳು ತುಂಬಿ ಹರಿದು ಸುತ್ತಮುತ್ತಲಿನ ಮನೆಗಳಿಗೆ ಮತ್ತು ಅಪಾರ್ಟ್‌ಮೆಂಟ್ ಬೇಸ್‌ಮೆಂಟ್‌ಗಳಿಗೆ ನೀರು ನುಗ್ಗುತ್ತಿದೆ. ನಗರದ ನೈಋತ್ಯ ಭಾಗದಲ್ಲಿ ಮಳೆಯ ಆರ್ಭಟ ತೀವ್ರವಾಗಿತ್ತು.

ಹುಳಿಮಾವು ಕೆರೆ, ಗೊಟ್ಟಿಗೆರೆ ಕೆರೆ, ಸುಬ್ಬರಾಯನಕೆರೆ, ಕಾಳೇನ ಅಗ್ರಹಾರ ಕೆರೆ, ಬಸವನಪುರ ಕೆರೆ, ದೊರೆಕೆರೆ, ಗುಬ್ಬಲಾಲ ಕೆರೆ, ವಸಂತಪುರ ಕೆರೆ ಮತ್ತು ದೊಡ್ಡಕಲ್ಲಸಂಗ್ರ ಕೆರೆಗಳು ಉಕ್ಕಿ ಹರಿಯುತ್ತಿವೆ.

ಬನ್ನೇರುಘಟ್ಟ ರಸ್ತೆಯ ಹಲವು ವಸತಿ ಸಮುಚ್ಚಯಗಳ ಬೇಸ್‌ಮೆಂಟ್‌ಗಳಿಗೆ ಮತ್ತು ಹುಳಿಮಾವಿನ ಕೋಡಿಚಿಕ್ಕನಹಳ್ಳಿಯ ಹಲವು ಮನೆಗಳು ಪ್ರವಾಹಕ್ಕೆ ನಲುಗಿವೆ.

ಸೋಮವಾರ ಮುಂಜಾನೆ ನಗರದ ಅನೇಕ ಕಡೆ ಅದರಲ್ಲೂ ಮೈಸೂರು ರಸ್ತೆ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಟ್ರಾಫಿಕ್ ಜಾಮ್ ಆಗಿತ್ತು.

ಅಗ್ನಿಶಾಮಕ ದಳ ಮತ್ತು ಸ್ಥಳೀಯರು ಪಂಪ್ ಮೂಲಕ ನೀರನ್ನು ಹೊರಹಾಕಿದ್ದರಿಂದ ಪ್ರವಾಹ ಸ್ವಲ್ಪಮಟ್ಟಿಗೆ ತಗ್ಗುವಂತಾಯಿತು. ಆದರೆ ಸೋಮವಾರ ರಾತ್ರಿ ಕೂಡ ಮತ್ತೆ ಮಳೆಯಾಗಿದ್ದು ನಿವಾಸಿಗಳು ರಾತ್ರಿ ಎಲ್ಲ ಆತಂಕದಿಂದ ಕಳೆಯುವಂತಾಯಿತು.

ಮೈಸೂರು ರಸ್ತೆ ನಾಯಂಡಹಳ್ಳಿಯಲ್ಲಿ ಪ್ರವಾಹದ ನೀರಲ್ಲಿ ಮೈಸೂರು ನಿವಾಸಿಯೊಬ್ಬರ ಕಾರೊಂದು ಮುಳುಗಿತ್ತು. ಅದರಲ್ಲಿದ್ದವರು ಸಕಾಲಕ್ಕೆ ಕಾರಿಂದ ಹೊರಬಂದಿದ್ದರಿಂದ ಅಪಾಯದಿಂದ ಪಾರಾದರು.

Comments are closed.