ಕರ್ನಾಟಕ

8 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿದವನಿಗೆ 20 ವರ್ಷ ಶಿಕ್ಷೆ!

Pinterest LinkedIn Tumblr


ಬೆಂಗಳೂರು: ಎಂಟು ವರ್ಷದ ಪುತ್ರಿ ಮೇಲೆ ಅತ್ಯಾಚಾರ ಎಸಗಿದ್ದ ಅನ್ವರ್ (30) ಎಂಬಾತನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 50 ಸಾವಿರ ರೂಪಾಯಿ ದಂಡ ವಿಧಿಸಿ ಬೆಂಗಳೂರು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.

2017ರಲ್ಲಿ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿತ್ತು.

ಪತ್ನಿ ಹಾಗೂ ಪುತ್ರಿ ಸಮೇತ ಬಾಡಗಿ ಮನೆಯಲ್ಲಿ ವಾಸವಾಗಿದ್ದ ಅನ್ವರ್ ಅಲಿಯಾಸ್ ಮುನ್ನಾ ಬಿನ್ ಅಸಾದುಲ್ಲಾ ಷರೀಫ್, ತನ್ನ 8 ವರ್ಷದ ಪುತ್ರಿ ಮೇಲೆ ಅತ್ಯಾಚಾರ ಎಸಗಿದ್ದ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಪವಿತ್ರ ಖುರಾನ್ ಮೇಲೆ ಆನೆ ಇದೆ. ನಿನ್ನ ತಾಯಿ ಸತ್ತು ಹೋಗುತ್ತಾಳೆ ಎಂದು ಬೆದರಿಕೆ ಹಾಕಿದ್ದ. ಈ ಬಗ್ಗೆ ಕಾಮುಕ ಪತಿಯ ವಿರುದ್ಧ ಪತ್ನಿಯೇ ದೂರು ದಾಖಸಿದ್ದರು.

ಬೆಂಗಳೂರು ನಗರದ ನ್ಯಾಯಾಲಯದ ನ್ಯಾಯಾಧೀಶರಾದ ಶಾರದಾ ಅವರು ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ ಹಾಗೂ 50 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.

Comments are closed.