ಕರ್ನಾಟಕ

ಪ್ರಥಮ ಬಾರಿಗೆ ಮೈಸೂರಿನಿಂದ ರಾಮಯ್ಯ ಆಸ್ಪತ್ರೆಗೆ ಹೃದಯ ರವಾನೆ

Pinterest LinkedIn Tumblr


ಬೆಂಗಳೂರು: ಕಾರ್ಡಿಯೋ ಮೈಯೋಪತಿ ಖಾಯಿಲೆಯಿಂದ ಬಳಲುತ್ತಿರುವ 19 ವರ್ಷದ ಬೆಂಗಳೂರಿನ ಯುವಕನಿಗೆ ಹೃದಯಕಸಿ ಮಾಡಲು ಮೈಸೂರಿನ ಜೆಎಸ್‌ಎಸ್‌ನಿಂದ ಬೆಂಗಳೂರಿನ ರಾಮಯ್ಯ ಆಸ್ಪತ್ರೆಗೆ ಹೃದಯ ರವಾನೆಯಾಗಿದೆ.

ರಾಮಯ್ಯ ಆಸ್ಪತ್ರೆ ಇತಿಹಾಸದಲ್ಲಿ ಇದು 20ನೇ ಹೃದಯಕಸಿಯಾಗಿದ್ದರೂ, ಇದೇ ಮೊದಲ ಬಾರಿಗೆ ಹೃದಯಕಸಿಗಾಗಿ ಮೈಸೂರಿನಿಂದ ಹೃದಯ ರವಾನೆಯಾಗಿದೆ.

ರಾಮಯ್ಯ ಆಸ್ಪತ್ರೆಯ ಮುಖ್ಯ ಹೃದಯಕಸಿ‌ ತಜ್ಞರಾದ ‘ಡಾ. ನಾಗಮಲ್ಲೇಶ್ ಅವರು ‘ಮೈಸೂರಿನಲ್ಲಿ ಬ್ರೈನ್‌ಡೆಡ್ ಆದ ರೋಗಿಯ ಹೃದಯವನ್ನು ಇಂದು ನಮ್ಮ ಆಸ್ಪತ್ರೆಯ ರೋಗಿಗೆ ಅಳವಡಿಸಲಾಗುತ್ತೆ’ ಎಂದು ತಿಳಿಸಿದ್ದಾರೆ.

Comments are closed.