ಕರ್ನಾಟಕ

ಮೆಟ್ರೊ ರೈಲಿನಲ್ಲಿ ಹುಡುಗಿಯ ಫೋಟೋ ತೆಗೆದವನ ಬಂಧನ

Pinterest LinkedIn Tumblr


ಬೆಂಗಳೂರು: ಮೆಟ್ರೋ ರೈಲಿನಲ್ಲಿ ಯುವತಿಯ ಫೋಟೋ ತೆಗೆದ ಯುವಕನನ್ನು ಪ್ರಯಾಣಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಬಾಗಲಗುಂಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಈ ಸಂಬಂಧ ನಾಗಸಂದ್ರದ ರಾಮಚಂದ್ರ (35) ಎಂಬಾತನನ್ನು ಬಂಧಿಸಲಾಗಿದೆ. ಜು.17ರಂದು ಸಂಜೆ 6 ಗಂಟೆಗೆ ಹೆಸರುಘಟ್ಟದ 24 ವರ್ಷದ ಯುವತಿ ನಾಗಸಂದ್ರದಿಂದ ಮೆಜೆಸ್ಟಿಕ್‌ ಕಡೆ ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿದ್ದರು. ಇದೇ ರೈಲಿನಲ್ಲಿದ್ದ ಖಾಸಗಿ ಸಂಸ್ಥೆ ಸೆಕ್ಯೂರಿಟಿ ಗಾರ್ಡ್‌ ರಾಮಚಂದ್ರ, ತನ್ನ ಮೊಬೈಲ್‌ನಲ್ಲಿ ಯುವತಿಯ ಫೋಟೋ ಸೆರೆ ಹಿಡಿದಿದ್ದಾನೆ.

ಮೊಬೈಲ್‌ನ ಫ್ಲ್ಯಾಶ್‌ ಲೈಟ್‌ ಬಂದಿದ್ದರಿಂದ ಅನುಮಾನಗೊಂಡ ಯುವತಿ, ಮೊಬೈಲ್‌ ಕಸಿದುಕೊಂಡು ಪರಿಶೀಲಿಸಿದಾಗ ತನ್ನ ಫೋಟೋ ತೆಗೆದಿರುವುದು ಪತ್ತೆಯಾಗಿದೆ. ಈ ವೇಳೆ ಸಹ ಪ್ರಯಾಣಿಕರು ರಾಮಚಂದ್ರಗೆ ಥಳಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Comments are closed.