ಕರ್ನಾಟಕ

ಆರ್​ಬಿಐನಿಂದ ಗಾಂಧೀಜಿ, ರಾಣಿ ಕಿ ವಾವ್​ ಚಿತ್ರವಿರುವ ಹೊಸ 100 ರೂ. ನೋಟು ಮುದ್ರಣ

Pinterest LinkedIn Tumblr


ಬೆಂಗಳೂರು: ನೋಟಿನ ಅಮಾನ್ಯೀಕರಣವಾದ ಬಳಿಕ 2000, 1000, 500, 200, 50, 20, 10 ರೂ.ಗಳ ನೋಟುಗಳನ್ನು ಚಲಾವಣೆಗೆ ತಂದಿದ್ದ ಆರ್​ಬಿಐ ಇದೀಗ 100 ರೂ.ಗಳ ಹೊಸ ನೋಟುಗಳನ್ನು ಸದ್ಯದಲ್ಲೇ ಚಲಾವಣೆಗೆ ತರುತ್ತಿದೆ.

ತಿಳಿ ನೇರಳೆ ಬಣ್ಣದಲ್ಲಿರುವ ಈ 100 ರೂ. ನೋಟುಗಳ ಮುಂಭಾಗದಲ್ಲಿ ಮಹಾತ್ಮ ಗಾಂಧೀಜಿಯ ಭಾವಚಿತ್ರ ಮತ್ತು ಹಿಂಭಾಗದಲ್ಲಿ ರಾಣಿ ಕಿ ವಾವ್​ ಎಂಬ ಕೊಳದ ಚಿತ್ರ ಇರಲಿದೆ. ಗುಜರಾತ್​ನಲ್ಲಿರುವ ರಾಣಿ ಕಿ ವಾವ್​ ಎಂಬ ಮೆಟ್ಟಿಲಿನ ಕೊಳ ಯುನೆಸ್ಕೋದ ಪಾರಂಪರಿಕ ಸ್ಮಾರಕಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಈ ಹೊಸ ನೋಟುಗಳ ವಿನ್ಯಾಸ ಅಂತಿಮಗೊಂಡಿದ್ದು, ಆಗಸ್ಟ್​ ಅಥವಾ ಸೆಪ್ಟೆಂಬರ್​ನಲ್ಲಿ ಚಲಾವಣೆಗೆ ಬರಲಿವೆ. ಈ ನೋಟುಗಳು ಈಗಿರುವ 100 ರೂ.ಗಳ ನೋಟಿಗಿಂತ ಗಾತ್ರದಲ್ಲಿ ಚಿಕ್ಕದಾಗಿರಲಿವೆ, ಈಗ ಹೊಸದಾಗಿ ಚಲಾವಣೆಗೆ ಬಂದಿರುವ 10 ರೂ.ಗಳ ನೋಟಿಗಿಂತ ಕೊಂಚ ದೊಡ್ಡದಾಗಿರಲಿವೆ. ಈ ಹೊಸ ನೋಟುಗಳ ಜೊತೆಗೆ ಹಳೆಯ 100 ರೂ.ಗಳ ನೋಟುಗಳೂ ಚಲಾವಣೆಯಲ್ಲಿರಲಿವೆ.

Comments are closed.