ಕರ್ನಾಟಕ

ಹೊಗೇನಕಲ್​ ಜಲಪಾತ ಕಾವೇರಿ ಪ್ರವಾಹಕ್ಕೆ ಸಿಲುಕಿ ಮಾಯ!

Pinterest LinkedIn Tumblr


ಚಾಮರಾಜನಗರ: ಕಾವೇರಿ ನದಿಯಲ್ಲಿ ಹರಿದುಬರುತ್ತಿರುವ ಭಾರಿ ಪ್ರಮಾಣದ ನೀರಿನಿಂದಾಗಿ ಹೊಗೇನಕಲ್​ ಜಲಪಾತ ಸಂಪೂರ್ಣ ಮುಳುಗಡೆಯಾಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ.

ಕಾವೇರಿ ನದಿ ಕೊಳ್ಳದ ಎಲ್ಲ ಜಲಾಶಯಗಳೂ ತುಂಬಿರುವ ಹಿನ್ನೆಲೆಯಲ್ಲಿ ಎಲ್ಲ ಡ್ಯಾಂಗಳಿಂದಲೂ ನದಿಗೆ ಭಾರಿ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ. ಇದರ ಜತೆಗೆ ಮಳೆಯಿಂದಾಗಿಯೂ ನದಿಗೆ ಅಪಾರ ಪ್ರಮಾಣದ ನೀರು ಬಂದು ಸೇರುತ್ತಿರುವುದರಿಂದ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ನದಿಯಲ್ಲಿ ಭಾರಿ ಪ್ರಮಾಣದ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಹೊಗೇನಕಲ್​ ಜಲಪಾತ ಮುಳುಗಡೆಗೊಂಡಿದೆ.

ಹೊಗೇನಕಲ್​ನಲ್ಲಿ 200 ಅಡಿ ಆಳದ ಜಲಪಾತವಿದ್ದು, ನಿತ್ಯವೂ ಹರಿದು ಬರುತ್ತಿರುವ 1 ಲಕ್ಷ ಕ್ಯೂಸೆಕ್​ಗಿಂತಲೂ ಅಧಿಕ ಪ್ರಮಾಣದ ನೀರಿನಿಂದಾಗಿ ಜಲಪಾತ ಮುಳುಗಡೆಯಾಗಿದೆ. ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ದೋಣಿ ಮತ್ತು ತೆಪ್ಪ ನಡೆಸುವುದನ್ನು ನಾಲ್ಕು ದಿನಗಳಿಂದ ನಿಷೇಧಿಸಲಾಗಿದೆ.

ಇನ್ನೊಂದೆಡೆ ಹೊಗೇನಕಲ್​ಗೆ ಆಗಮಿಸುವ ಪ್ರವಾಸಿಗರಿಗೆ ನದಿ ಸಮೀಪಕ್ಕೆ ಹೋಗುವುದನ್ನು ಸ್ಥಳೀಯಾಡಳಿತ ನಿಷೇಧಿಸಿದೆ.

Comments are closed.