ಕರ್ನಾಟಕ

ಪ್ರತ್ಯೇಕ ರಾಜ್ಯ ಕೂಗು ಸಮಸ್ಯೆಗೆ ಪರಿಹಾರವಲ್ಲ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ

Pinterest LinkedIn Tumblr

ಶಿವಮೊಗ್ಗ: ಪ್ರತ್ಯೇಕ ರಾಜ್ಯದ ಬಗ್ಗೆ ಯಾರೂ ಮಾತನಾಡಬಾರದು. ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ ಎಂದರೆ ಹೋರಾಟ ಮಾಡಿ ಅಭಿವೃದ್ಧಿ ಕೆಲಸ ಮಾಡಿಸಿಕೊಳ್ಳಬೇಕೇ ವಿನಃ ಪ್ರತ್ಯೇಕ ರಾಜ್ಯ ಕೂಗು ಸಮಸ್ಯೆಗೆ ಪರಿಹಾರವಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ಹೇಳಿದ್ದಾರೆ.

ಶಿವಮೊಗ್ಗದ ಬಿಜೆಪಿ ಕಚೇರಿಯಲ್ಲಿ ನಡೆದ ಪ್ರಮುಖ ಕಾರ್ಯಕರ್ತರ ಸಭೆ ಬಳಿಕ ಮಾತನಾಡಿರುವ ಅವರು, ಪ್ರತ್ಯೇಕ ರಾಜ್ಯ ಕುರಿತು ಯಾರೂ ಮಾತನಾಡಬಾರದು. ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ ಎಂದರೆ, ಹೋರಾಟ ಮಾಡಿ ಕೆಲಸ ಮಾಡಿಸಿಕೊಳ್ಳಲಿ. ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಮಾಡುವಂತೆ ಆಗ್ರಹಿಸಲಿ. ಸಮಸ್ಯೆಗಳಿಗೆ ಪ್ರತ್ಯೇಕ ರಾಜ್ಯ ಕೂಗು ಪರಿಹಾರವಲ್ಲ. ಯಾವುದೇ ಪಕ್ಷವಾದರೂ ಹೀಗೆ ಹೇಳಿದರೂ ಅದು ತಪ್ಪು ಎಂದು ಹೇಳಿದ್ದಾರೆ.

ಬಳಿಕ ಕಾಂಗ್ರೆಸ್ ನಾಯಕರ ಐಫೋನ್ ಉಡುಗೊರೆ ವಿವಾದ ಕುರಿತ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿರುವ ಅವರು, ನಮ್ಮ ಸಂಸದರು ಉಡುಗೊರೆಗಳನ್ನು ಪಡೆಯುವುದಿಲ್ಲ ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ರಾಜ್ಯದ ಆಂತರಿಕ ಸ್ಥಿತಿ ಬಗ್ಗೆ ಶ್ವೇತ ಪತ್ರ ಹೊರಡಿಸಲಿ. ಇದರಿಂದ ಜನರಿಗೆ ರಾಜ್ಯದ ವಾಸ್ತವ ಸ್ಥಿತಿ ತಿಳಿಯಲಿದೆ. ಅಲ್ಲದೆ, ಕಳೆದ ಸರ್ಕಾರದ ಅವಧಿಯ ಆಡಳಿತ ಕೂಡ ತಿಳಿಯುತ್ತದೆ ಎಂದಿದ್ದಾರೆ.

Comments are closed.