ಕರ್ನಾಟಕ

ಪತ್ನಿ ವಿರುದ್ಧವೇ ವಧುದಕ್ಷಿಣೆ ದೂರು ನೀಡಿದ ಪತಿ ! ಕಾರಣ ಏನು ಗೊತ್ತೇ..?

Pinterest LinkedIn Tumblr

ಬೆಂಗಳೂರು: 30 ಲ್ಷ ರೂ. ಮೌಲ್ಯದ ವಜ್ರದ ಡಾಬು ಕೊಡಿಸಿ ಎಂದು ಪೀಡಿಸಿದ್ದಕ್ಕೆ ಪತಿಯೊಬ್ಬ ಪತ್ನಿಯ ವಿರುದ್ಧ ವಧುದಕ್ಷಿಣೆ ಕಿರುಕುಳದ ದೂರು ನೀಡಿದ್ದಾರೆ.

ಆಂಧ್ರ ಮೂಲದ ಧೀರಜ್ ರೆಡ್ಡಿ ಚಿಂತಾಲ ಎಂಬುವವರು ಪತ್ನಿ ಜಯಶ್ರುತಿ ವಿರುದ್ಧ ದೂರು ನೀಡಿದ್ದು, ತನ್ನ ಪತ್ನಿ ಕಳೆದ ತಿಂಗಳು 2 ಕೋಟಿ ರೂ. ನೀಡುವಂತೆ ಸ್ನೇಹಿತರ ಮೂಲಕ ಬೆದರಿಕೆ ಒಡ್ಡಿ, ಕಿರುಕುಳ ನೀಡುತ್ತಿದ್ದಳು ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಐಷಾರಾಮಿ ಜೀವನ ನಡೆಸಲು ಗಂಡನಿಗೆ ಹಣ ಹಾಗೂ ಆಭರಣಗಳಿಗಾಗಿ ಪೀಡಿಸುತ್ತಿದ್ದ ಪತ್ನಿ, ಸೋದರಿಯ ಮದುವೆಗೆ 40 ಲಕ್ಷ ಮೌಲ್ಯದ ಆಭರಣಕ್ಕೆ ಬೇಡಿಕೆ ಇಟ್ಟಿದ್ದಳು. ಕಳೆದ ವರ್ಷ 30 ಲಕ್ಷ ರೂ. ಡೈಮಂಡ್ ಡಾಬು ಕೊಡಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೀಡಿಸಿದ್ದಳು. ಪತ್ನಿ ವರ್ತನೆ ಬಗ್ಗೆ ಆಕೆಯ ಪೋಷಕರ ಬಳಿ ಹೇಳಿಕೊಂಡಿದ್ದರೂ ಅವರು ಅವರ ಮಗಳ ಪರವಾಗಿಯೇ ಮಾತನಾಡಿದ್ದರು ಎಂದು ಧೀರಜ್​ ದೂರಿದ್ದಾರೆ.

ಪತ್ನಿ ಕಿರುಕುಳದಿಂದ ನೊಂದ ಪತಿ ಜಯಶ್ರುತಿ ಹಾಗೂ ಪೋಷಕರ ವಿರುದ್ಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ‌ ದೂರು ದಾಖಲಿಸಿದ್ದಾರೆ. 2016ರಲ್ಲಿ ಧೀರಜ್​ ಹಾಗೂ ಜಯಶ್ರುತಿ ವಿವಾಹವಾಗಿದ್ದು, ಇಬ್ಬರೂ ಸಾಫ್ಟ್​ವೇರ್​ ಇಂಜಿನಿಯರ್​ಗಳಾಗಿದ್ದಾರೆ.

Comments are closed.