ಕರ್ನಾಟಕ

ಇನ್ನು ಮುಂದೆ ವಾಟ್ಸಾಪ್ ಫೇಕ್ ನ್ಯೂಸ್’ಗೆ ಕಡಿವಾಣ

Pinterest LinkedIn Tumblr


ಬೆಂಗಳೂರು : ಫೇಸ್‌ಬುಕ್ ಒಡೆತನದಲ್ಲಿರುವ ವಾಟ್ಸಪ್ ಇಂದು ದೇಶದಲ್ಲಿ 200 ಮಿಲಿಯನ್‌ಗೂ ಅಧಿಕ ಬಳಕೆದಾರರನ್ನು ಹೊಂದಿದೆ. ಜೊತೆಗೆ ಪ್ರಬಲ ಸೋಷಲ್ ಮೀಡಿಯಾವೂ ಆಗಿದೆ. ಇದೇ ವೇಳೆ ಹೆಚ್ಚು ಸುಳ್ಳು ಸುದ್ದಿಗಳು ಹರಡುತ್ತಿರುವುದೂ ಇಲ್ಲಿಂದಲೇ.

ಈ ಬಗ್ಗೆ ಗಂಭೀರವಾಗಿ ಚಿಂತಿಸಿದ ವಾಟ್ಸಪ್ ಸುಳ್ಳು ಸುದ್ದಿ, ವಿಡಿಯೋಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದಾಗಿ ಹೇಳಿಕೊಂಡಿತು. ಹೀಗಿರುವಾಗಲೇ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ‘ವಾಟ್ಸಪ್‌ನಲ್ಲಿ ಕಳೆದ ಐದು ತಿಂಗಳಿನಿಂದ ಸುಳ್ಳು ಸುದ್ದಿ, ವಿಡಿಯೋಗಳು ಸಾಕಷ್ಟು ವೈರಲ್ ಆಗಿ ಸಮಾಜದಲ್ಲಿ ಅನಗತ್ಯ ಗೊಂದಲ ಮೂಡಿಸುತ್ತಿವೆ. ಹೀಗಾಗಿ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಫೇಸ್‌ಬುಕ್ ಕಂಪನಿಗೆ ಪತ್ರವೊಂದನ್ನು ಬರೆದಿದೆ.

ಇದರಿಂದಾಗಿ ವಾಟ್ಸಪ್ ಈ ನಿಟ್ಟಿನಲ್ಲಿ ಮತ್ತಷ್ಟು ವೇಗವಾಗಿ ಕೆಲಸ ಮಾಡಿ ಸುಳ್ಳು ಸುದ್ದಿಗಳ ಹಾವಳಿಯಿಂದ ಮುಕ್ತಿ ನೀಡುವತ್ತ ಗಮನ ಕೇಂದ್ರೀಕರಿಸಿದೆ.

Comments are closed.