ಕರ್ನಾಟಕ

ಡೇಟಿಂಗ್ ವೆಬ್’ಸೈಟ್ ಮೂಲಕ ಪರಿಚಯಿಸಿಕೊಂಡ ಟೆಕ್ಕಿಗೆ ರೂ.60 ಲಕ್ಷ ವಂಚನೆ; ಕಿರುತೆರೆ ನಟ, ಪತ್ನಿ ಬಂಧನ

Pinterest LinkedIn Tumblr

ಬೆಂಗಳೂರು; ಡೇಟಿಂಗ್ ವೆಬ್’ಸೈಟ್ ಮೂಲಕ ಪರಿಚಯಿಸಿಕೊಂಡು ಸಾಫ್ಟ್’ವೇರ್ ಇಂಜಿನಿಯರ್ ಒಬ್ಬರಿಗೆ ಬರೋಬ್ಬರಿ ರೂ.60 ಲಕ್ಷ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರುತೆರೆ ನಟ ಹಾಗೂ ಆತನ ಪತ್ನಿಯನ್ನು ಸಿಐಡಿ ಸೈಬರ್ ಕ್ರೈಂ ಪೊಲೀಸರು ಮಂಗಳವಾರ ಬಂಧನಕ್ಕೊಳಪಡಿಸಿದ್ದಾರೆ.

ಕೋಲ್ಕತಾ ಮೂಲದ ರೂಪಾಲಿ ಮಜೂಂದಾರ್ (39) ಹಾಗೂ ಈಕೆಯ ಪತಿ ಬೆಂಗಾಲಿ ಭಾಷೆಯ ಕಿರುತೆರೆ ನಟ ಕುಶನ್ ಮಜೂಂದಾರ್ (48) ಬಂಧಿತ ಆರೋಪಿಗಳಾಗಿದ್ದಾರೆ.

ಆರೋಪಿ ರೂಪಾಲಿ ಬೆಂಗಳೂರು ಮೂಲಕ ಸಾಫ್ಟ್ ವೇರ್ ಇಂಜಿನಿಯರ್ ರಮೇಶ್ (ಹೆಸರು ಬದಲಿಸಲಾಗಿದೆ) ಅವರನ್ನು 2017ರಲ್ಲಿ ಟು.ಡಾಟ್’ಕಾಮ್ ಎಂಬ ಡೇಟಿಂಗ್ ವೆಬ್ ಸೈಟ್ ನಲ್ಲಿ ಪರಿಚಯಿಸಿಕೊಂಡಿದ್ದಳು.

ಹೀಗೆ ರಮೇಶ್ ಬಳಿ ನನ್ನ ಹೆಸರು ಅರ್ಪಿತಾ, ಶಿಕ್ಷಕಿಯಾಗಿದ್ದೇನೆ. ಉತ್ತಮ ವೇತನ ಬರುತ್ತಿದ್ದು, ಕುಟುಂಬದ ಜೊತೆಗೆ ಚೆನ್ನಾಗಿದ್ದೇನೆಂದು ಹೇಳಿಕೊಂಡಿದ್ದಳು. ಹೀಗೆ ಇಬ್ಬರೂ ಮೊಬೈಲ್ ನಂಬರ್ ತೆಗೆದುಕೊಂಡು ನಿತ್ಯ ಸಂಪರ್ಕದಲ್ಲಿದ್ದರು.ಸ್ವಲ್ಪ ದಿನಗಳ ಬಳಿಕ ನನ್ನ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದು, ಕೋಲ್ಕತಾದ ಟಾಟಾ ಬಿರ್ಲಾ ಹಾರ್ಟ್ ಸೆಂಟರ್’ನಲ್ಲಿ ದಾಖಲು ಮಾಡಿದ್ದೇನೆ. ಚಿಕಿತ್ಸೆಗಾಗಿ ಲಕ್ಷಾಂತರ ಹಣದ ಅಗತ್ಯವಿದೆಎಂದು ಕೇಳಿದ್ದರು. ಇದನ್ನು ನಂಬಿದ್ದ ವಿಶ್ವನಾಥ್ ಮೊದಲಿಗೆ ರೂ. 30,000 ನೀಡಿದ್ದಾನೆ. ಬಳಿಕ ಸ್ವಲ್ಪ ಸ್ವಲ್ಪವೇ ಎಂಬಂತೆ ಒಟ್ಟು 60 ಲಕ್ಷವನ್ನು ರುಪಾಲಿ ಖಾತೆಗೆ ಜಮೆ ಮಾಡಿದ್ದಾರೆ.

ಹಣ ಜಮೆಯಾದ ಬಳಿಕ ಇದ್ದಕ್ಕಿದ್ದ ಹಾಗೆಯೇ ರೂಪಾಲಿ ತನ್ನ ಮೊಬೈಲ್ ಸಂಪರ್ಕ ಕಡಿತಗೊಳಿಸಿದ್ದರು. ಈ ಬೆಳವಣಿಗೆಗಳ ಬಳಿ ರಮೇಶ್ ಅವರಿಗೆ ತಾವು ವಂಚನೆಗೊಳಗಾಗಿರುವುದು ತಿಳಿದಿದೆ. ಈ ಸಂಬಂಧ ಸೈಬರ್ ಕ್ರೈಂ ಪೊಲೀಸರಿದೆ ದೂರು ನೀಡಿದ್ದಾರೆ.

ಆರೋಪಿಗಳ ಬ್ಯಾಂಕ್ ಖಾತೆ ಪರಿಶೀಲನೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಅಲ್ಲದೆ, ಬ್ಯಾಂಕ್ ನಲ್ಲಿ ಹಣ ಡ್ರಾ ಮಾಡುವ ದೃಶ್ಯಾವಳಿಗಳು ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿಗಳ ಮಾಹಿತಿ ಕಲೆ ಹಾಕಿದ ಸಿಐಡಿ ಸೈಬರ್ ಕ್ರೈಂ ಪೊಲೀಸರು ತಂಡವನ್ನು ರಚಿಸಿ ಕೋಲ್ಕತಾದಲ್ಲಿ ಆರೋಪಿಗಳನ್ನು ಬಂಧನಕ್ಕೊಳಪಡಿಸಿದೆ.

ರೂಪಾಲಿ ಬಿಕಾಂ ಪದವೀಧರೆಯಾಗಿದ್ದು, ಪತಿ ಕುಶನ್ ಆಟೋ ಮೊಬೈಲ್ ಇಂಜಿನಿಯರಿಂದ ಡಿಪ್ಲೋಮಾ ಪದವೀಧರನಾಗಿದ್ದಾನೆ. ಆರೋಪಿ ತನ್ನ ಪತ್ನಿಗೆ ತಾಂತ್ರಿಕವಾಗಿ ನೆರವು ನೀಡುತ್ತಿದ್ದನೆಂದು ತಿಳಿದುಬಂದಿದೆ.

Comments are closed.