ಕರ್ನಾಟಕ

ಗೌರಿ ಲಂಕೇಶ್ ಕೊಲೆಗಾರರ ಬಂಧನ: ಭಗವಾನ್ ಹೇಳಿದ್ದೇನು?

Pinterest LinkedIn Tumblr


ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹಂತಕರ ಬಂಧನ ಹಿನ್ನೆಲೆಯಲ್ಲಿ ಪ್ರೋ.ಕೆ.ಎಸ್. ಭಗವಾನ್ ಪ್ರತಿಕ್ರಿಯೆ ನೀಡಿದ್ದು, ಎಸ್.ಐ.ಟಿ ಪೊಲೀಸರನ್ನು ಅಭಿನಂದಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಗವಾನ್, ಕರ್ನಾಟಕ ಪೊಲೀಸ್ ದೇಶದಲ್ಲೇ ಮಾದರಿ ಪೊಲೀಸ್ ವ್ಯವಸ್ಥೆಯಾಗಿದೆ ಎಂದು ಹೊಗಳಿದ್ದಾರೆ.

ಗೌರಿ ಹಂತಕರನ್ನು ಬಂಧಿಸುವ ಕುರಿತು ತಮಗೆ ವಿಶ್ವಾಸವಿತ್ತು. ಅದರಂತೆ ಇದೀಗ ಹಂತಕರ ಬಂಧನವಾಗಿದ್ದು, ಈ ಹಂತಕರ ಬೆನ್ನಿಗಿದ್ದ ಸಂಘಟನೆಗಳನ್ನು ನಾಶ ಮಾಡಿದರೆ ತಮಗೆ ಸಮಾಧಾನ ಸಿಗಲಿದೆ ಎಂದು ಭಗವಾನ್ ಹೇಳಿದ್ದಾರೆ.

ಇದೇ ವೇಳೆ ಗೌರಿ ಹಂತಕರಲ್ಲಿ ಒಬ್ಬನಾದ ಹೊಟ್ಟೆ ಮಂಜ ತಮ್ಮ ಮನೆಯ ಸುತ್ತುಮುತ್ತ ಹೆಚ್ಚು ತಿರುಗಾಡಿದ್ದು, ತಮಗೆ ಭದ್ರತೆ ಹೆಚ್ಚಿದ್ದ ಕಾರಣಕ್ಕೆ ಯಾವುದೇ ತೊಂದರೆಯಾಗಿಲ್ಲ ಎಂದು ಭಗವಾನ್ ಹೇಳಿದ್ದಾರೆ. ತಮಗೆ ಭದ್ರತೆ ಒದಗಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿಯೂ ಭಗವಾನ್ ತಿಳಿಸಿದ್ದಾರೆ.

ಸದ್ಯ ಗೌರಿ ಹಂತಕರ ಬಂಧನವಾಗಿರುವುದರಿಂದ ದಾಬೋಲ್ಕರ್, ಪನ್ಸಾರೆ ಮತ್ತು ಪ್ರೋ.ಎಂ.ಎಂ ಕಲಬುರ್ಗಿ ಅವರ ಹಂತಕರ ಕುರಿತು ಸುಳಿವು ಸಿಗಬಹುದು ಎಂದು ಭಗವಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Comments are closed.