ಕರ್ನಾಟಕ

ರಾಮನಗರ ವಿಧಾನಸಭೆ ಚುನಾವಣೆ: ನಿಖಿಲ್ ಇಲ್ಲವೇ ನಾನು ಸ್ಪರ್ಧೆ: ಅನಿತಾ ಕುಮಾರಸ್ವಾಮಿ

Pinterest LinkedIn Tumblr


ಬೆಂಗಳೂರು: ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿರುವ ರಾಮನಗರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ದೇವೇಗೌಡರ ಕುಟುಂಬದಿಂದಲೇ ಯಾರಾದರೂ ಸ್ಪರ್ಧಿಸುತ್ತಾರೆಯೇ ಅಥವಾ ಬೇರೆ ಯಾರಾದರೂ ಸ್ಪರ್ಧಿಸುವರೇ ಎಂಬ ವಿಚಾರವಾಗಿ ಜಿಜ್ಞಾಸೆ ಎದುರಾಗಿದೆ.

ಹೀಗಿರುವಾಗಲೇ ಇದೇ ವಿಚಾರವಾಗಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿಎಂ ಎಚ್​ಡಿಕೆ ಪತ್ನಿ ಅನಿತಾ ಕುಮಾರಸ್ವಾಮಿ ಅವರು, “ಉಪಚುನಾವಣೆಗೆ ನಿಖಿಲ್​ ಮತ್ತು ನನ್ನ ಹೆಸರು ಸ್ಪರ್ಧೆಯಲ್ಲಿರುವುದು ನಿಜ. ಚುನಾವಣೆ ದಿನಾಂಕ ಘೋಷಣೆಯಾಗಲಿ. ನಂತರ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ,” ಎಂದು ಹೇಳಿದ್ದಾರೆ.

ಈ ಮೂಲಕ ರಾಮನಗರದಲ್ಲಿ ದೇವೇಗೌಡರ ಕುಟುಂಬದವರು, ಅದರಲ್ಲೂ ಸಿಎಂ ಕುಮಾರಸ್ವಾಮಿ ಅವರ ಕುಟುಂಬದವರೇ ಸ್ಪರ್ಧೆ ಮಾಡುವ ಸಾಧ್ಯತೆಗಳು ಗೋಚರಿಸಿವೆ.

Comments are closed.