
ಬೆಂಗಳೂರು: ಫೇಸ್ ಬುಕ್ ವಿಚಾರದಲ್ಲಿ ಶರಂಪರ ಕಿತ್ತಾಡಿಕೊಂಡ ಪತಿ ಮತ್ತು ಪತ್ನಿ ಆತ್ಮಹತ್ಯೆಗೆ ಶರಣಾದ ಘಟನೆ ಸೋಮವಾರ ದಾಸರಹಳ್ಳಿ ಸಮೀಪದ 8ನೇ ಮೈಲಿ ಪ್ರದೇಶದಲ್ಲಿ ನಡೆದಿದೆ.
ಪತ್ನಿ ಸದಾ ಫೇಸ್ ಬುಕ್ ನಲ್ಲಿ ಚಾಟಿಂಗ್ ಮಾಡುತ್ತಿದ್ದು, ಇದಕ್ಕೆ ಪತಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ನಿನ್ನೆ ರಾತ್ರಿಯೂ ಪತ್ನಿ ಸೌಮ್ಯ(23) ಹಾಗೂ ಪತಿ ಅನೂಪ್ (32) ನಡುವೆ ಫೇಸ್ ಬುಕ್ ಚಾಟಿಂಗ್ ವಿಚಾರದಲ್ಲಿ ಜಗಳವಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇಬ್ಬರ ಜಗಳ ಕೊನೆಗೆ ನೇಣಿಗೆ ಶರಣಾಗುವ ಮೂಲಕ ಅಂತ್ಯಗೊಂಡಿದೆ. ಸೌಮ್ಯ ಹಾಗೂ ಅನೂಪ್ ಸೋಮವಾರಪೇಟೆ ಮೂಲದವರು. ಇಬ್ಬರೂ ಉದ್ಯೋಗ ನಿಮಿತ್ತ ಬೆಂಗಳೂರಿನ 8ನೇ ಮೈಲಿ ಸಮೀಪ ವಾಸಿಸುತ್ತಿದ್ದರು. ಬಾಗಲಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Comments are closed.