ಕರ್ನಾಟಕ

ಶಾಸಕನಾಗಿರುವುದರಲ್ಲೇ ಅದರಲ್ಲೇ ತೃಪ್ತಿ: ಎಂ ಬಿ ಪಾಟೀಲ್​

Pinterest LinkedIn Tumblr


ಬೆಂಗಳೂರು : ಸಚಿವ ಸ್ಥಾನ ಸಿಗದ ಹಿನ್ನಲೆ ಬಂಡಾಯ ಸಾರಿರುವ ಶಾಸಕ ಎಂಬಿ ಪಾಟೀಲ್​ ದೆಹಲಿಯಲ್ಲಿ ರಾಹುಲ್​ ಗಾಂಧಿ ಜೊತೆ ಚರ್ಚೆ ನಡೆಸಿದ ಬಳಿಕ ತಣ್ಣಗಾಗಿದ್ದು, ತನಗೆ ಶಾಸಕ ಸ್ಥಾನದಲ್ಲೇ ತೃಪ್ತಿ ಇದೆ ಎಂದಿದ್ದಾರೆ

ಇಂದು ನಗರದಲ್ಲಿ ಮಾತನಾಡಿದ ಅವರು, ನನಗೆ ವೈಯಕ್ತಿಕವಾಗಿ ಅನ್ಯಾಯವಾಗಿರುವುದು ನಿಜ. ಈ ಬಗ್ಗೆ ಅಸಮಾಧಾನ ಹೊಂದಿದ್ದು, ಎಐಸಿಸಿ ಅಧ್ಯಕ್ಷರೊಂದಿಗೆ ಈ ಕುರಿತು ಮಾತುಕತೆ ನಡೆಸಿದ್ದೇನೆ ಎಂದರು.

ಅಹ್ಮದ್​ ಪಟೇಲ್​ ಆಹ್ವಾನ: ಯಾರ ಬುಲಾವ್​ ಮೇಲೆ ಎಂಬಿ ಪಾಟೀಲ್​ ದೆಹಲಿಗೆ ತೆರಳಿದ್ದರು ಎಂಬ ಅನುಮಾನಕ್ಕೆ ತೆರೆಎಳೆದ ಅವರು ನನಗೆ ಸೋನಿಯಾಗಾಂಧಿಯವರ ಆಪ್ತ ಕಾರ್ಯದರ್ಶಿ ಅಹ್ಮದ್ ಪಟೇಲ್ ದೆಹಲಿಗೆ ಕರೆದಿದ್ದರು. ಅಹ್ಮದ್ ಪಟೇಲ್ ಆಹ್ವಾನದ ಮೇರೆಗೆ ದೆಹಲಿಗೆ ಹೋಗಿ ರಾಹುಲ್ ಗಾಂಧಿ ಜೊತೆ ಚರ್ಚೆ ನಡೆಸಿದೆ ಎಂದರು.

ರಾಹುಲ್ ಜೊತೆ ಚರ್ಚೆ: ನಾನು ರಾಹುಲ್ ಗಾಂಧಿ ಬಳಿ ಯಾವ ಹುದ್ದೆಯನ್ನೂ ಕೇಳಿಲ್ಲ. ನಾನು ಪಕ್ಷಕ್ಕೆ ನಾನು ಮಾಡಿರುವ ಸೇವೆ, ನೀರಾವರಿ ಕೆಲಸಗಳ ಬಗ್ಗೆ ಚರ್ಚೆ ನಡೆಸಿದ್ದೇನೆ. ನಾನು ನನ್ನ ಭಾವನೆಗಳನ್ನು ರಾಹುಲ್ ಗಾಂಧಿ ಜೊತೆ ಹಂಚಿಕೊಂಡಿದ್ದು, ರಾಜ್ಯದ ವಿದ್ಯಮಾನಗಳನ್ನು ರಾಹುಲ್ ಗಾಂಧಿ ಗಮನಕ್ಕೆ ತಂದಿದ್ದೇನೆ ಎಂದರು

ಶಾಸಕ ಸ್ಥಾನವೇ ಸಾಕು: ಮಾಧ್ಯಮಗಳಲ್ಲಿ ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನ, ಡಿಸಿಎಂ ಸ್ಥಾನ ಕೇಳಿದ್ದೇನೆ ಎಂದು ತಪ್ಪು ವರದಿಗಳು ಬಂದಿವೆ. ನಾನು ಪಕ್ಷ ಬಿಟ್ಟು ಹೋಗಲ್ಲ. ಬಿಜೆಪಿಯಿಂದ ನನಗೆ ಯಾರೂ ಸಂಪರ್ಕ ಮಾಡಿಲ್ಲ. ನಾನು ಕಾಂಗ್ರೆಸ್ ನಲ್ಲೇ ಇರುತ್ತೇನೆ. ಶಾಸಕ ಸ್ಥಾನವೇ ನನಗೆ ಸಾಕು. ಶಾಸಕ ಸ್ಥಾನದಲ್ಲೇ ನನಗೆ ತೃಪ್ತಿ ಇದೆ ಎಂದರು

ಜಾಮದಾರ್​ ಉಸ್ತುವಾರಿ: ಲಿಂಗಾಯತ ಧರ್ಮದ ಶಿಫಾರಸು ಕೇಂದ್ರದಿಂದ ವಾಪಸಾಗಿರುವ ಕುರಿತು ಮಾತನಾಡಿದ ಅವರು ಲಿಂಗಾಯತ ಮಹಾಸಭೆ ಪ್ರತ್ಯೇಕ ಧರ್ಮದ ನಿರ್ವಹಣೆಯನ್ನು ನಾನು ಮಾಡುತ್ತಿದೆ. ಇನ್ನು ಪ್ರತ್ಯೇಕ ಧರ್ಮದ ಹೋರಾಟವನ್ನು ಜಾಮದಾರ್​ಗೆ ವಹಿಸಿದ್ದೇವೆ. ಸದ್ಯ ಈ ಎಲ್ಲವನ್ನೂ ಜಾಮದಾರ್ ನೋಡಿಕೊಳ್ಳಲಿದ್ದಾರೆ ಎಂದರು

Comments are closed.