ಕರ್ನಾಟಕ

ನಿಮ್ಮ ದಮ್ಮಯ್ಯ ಅಂತೀನಿ, ನನ್ನನ್ನು ಏನೂ ಕೇಳ್ಬೇಡಿ: ಸಿದ್ದರಾಮಯ್ಯ

Pinterest LinkedIn Tumblr


ಬಾಗಲಕೋಟ: ಜಿಲ್ಲೆಯ ಬಾದಾಮಿಯಲ್ಲಿ ಪ್ರವಾಸ ಕೈಗೊಂಡಿರುವ ಮಾಜಿ ಸಿಎಂ, ಬಾದಾಮಿ ಶಾಸಕ ಸಿದ್ದರಾಮಯ್ಯ ಶನಿವಾರ ಮಾಧ್ಯಮದವರ ಮೇಲೆ ಸಿಡಿಮಿಡಿಗೊಂಡರು. ಸಚಿವ ಸ್ಥಾನ ದೊರೆಯದವರ ಅಸಮಾಧಾನದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಲು ಸಿದ್ದರಾಮಯ್ಯ ನಿರಾಕರಿಸಿದರು.

ನಿಮ್ಮ ದಮ್ಮಯ್ಯ ಅಂತೀನಿ, ನೋ ರಿಯಾಕ್ಷನ್ ನನ್ನನ್ನು ಏನೂ ಕೇಳ್ಬೇಡಿ. ನನಗೇನು ಗೊತ್ತಿಲ್ಲ, ನಾನು ಇನ್ನೂ ಮೂರು ದಿನ ಬಾದಾಮಿಯಲ್ಲೇ ಇರುತ್ತೇನೆ. ನಂತರ ಉತ್ತರ ಕೊಡುತ್ತೇನೆ ಎಂದು ಮಾಜಿ ಸಿಎಂ ಸಿಡಿಮಿಡಿಗೊಂಡರು.

ಕಾಂಗ್ರೆಸ್ ಭಿನ್ನಮತದ ಕುರಿತು ಮಾತನಾಡಲು ನಿರಾಕರಿಸಿದ ಸಿದ್ದರಾಮಯ್ಯ, ಮಾತನಾಡಬೇಕಾದಾಗ ನಾನೇ ಕರೆಯಿಸಿ ಪ್ರತಿಕ್ರಿಯೆ ಕೊಡುತ್ತೇನೆ.
ನನಗೆ ಯಾರೂ ದಿಲ್ಲಿ ಬರಲು ಹೇಳಿಲ್ಲ, ನಾನೇಕೆ ದಿಲ್ಲಿಗೆ ಹೋಗಲಿ ಎಂದು ಮರು ಪ್ರಶ್ನಿಸಿದರು. ಹೈಕಮಾಂಡ್ ಕರೆದಿರುವ ಬಗ್ಗೆ ನಿಮ್ಮ ಬಳಿ ಪತ್ರ ಇದ್ದರೆ ಕೊಡಿ ಎಂದು ಮಾಧ್ಯಮದವರನ್ನೇ ಕೇಳಿದರು.

ರಾಜ್ಯ ರಾಜಕೀಯ ಕುರಿತು ಕೇಳಿದ ಪ್ರಶ್ನೆಗೆ ಕೂಡ ಉತ್ತರ ಕೊಡಲು ಸಿದ್ದರಾಮಯ್ಯ ನಿರಾಕರಿಸಿದರು. ನಂತರ ಪತ್ರಕರ್ತರ ಯಾವುದೇ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ಬಾದಾಮಿ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಸಿದ್ದರಾಮಯ್ಯ ಐದು ದಿನಗಳ ಪ್ರವಾಸ ಕೈಗೊಂಡಿದ್ದಾರೆ.

Comments are closed.