
ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ ಸಚಿವಗಿರಿಗಾಗಿ ಲಾಬಿ ನಡೆಸುತ್ತಿರುವ ನಡುವೆಯೇ ಸೋಮವಾರ 11 ಮಂದಿ ಮೇಲ್ಮನೆ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ಘೋಷಿಸಿದ್ದಾರೆ.
ವಿಧಾನಪರಿಷತ್ ನ 11 ಸ್ಥಾನಗಳಿಗೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಆದರೆ ಈ ಸ್ಥಾನಗಳಿಗೆ ಬೇರೆ ಯಾರೂ ನಾಮಪತ್ರ ಸಲ್ಲಿಸದೇ ಇದ್ದ ನಿಟ್ಟಿನಲ್ಲಿ ಅವಿರೋಧವಾಗಿ ಆಯ್ಕೆ ಮಾಡಿರುವುದಾಗಿ ಆಯೋಗ ತಿಳಿಸಿದೆ.
ಇತ್ತೀಚೆಗಷ್ಟೇ ತನ್ನ ಸೋಲಿಗೆ(ಧರ್ಮೇಗೌಡ) ಕಾರಣರಾದವರಿಗೆ ಟಿಕೆಟ್ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಜೆಡಿಎಸ್ ಮಾಜಿ ಶಾಸಕ, ದೇವೇಗೌಡರ ಪರಮಾಪ್ತ ವೈಎಸ್ ವಿ ದತ್ತಾ ಅಸಮಾಧಾನ ವ್ಯಕ್ತಪಡಿಸಿದ್ದರು.
11 ಮಂದಿ ಅವಿರೋಧ ಆಯ್ಕೆ:
ಬಿಜೆಪಿ: ರುದ್ರೇಗೌಡ, ರಘುನಾಥ ಮಲ್ಕಾಪುರೆ, ತೇಜಸ್ವಿನಿ ಗೌಡ, ಎನ್.ರವಿಕುಮಾರ್ ಹಾಗೂ ಕೆಪಿ ನಂಜುಂಡಿ.
ಕಾಂಗ್ರೆಸ್: ಕೆ.ಗೋವಿಂದರಾಜ್, ಸಿಎಂ ಇಬ್ರಾಹಿಂ, ಅರವಿಂದ ಕುಮಾರ ಅರಳಿ ಹಾಗೂ ಹರೀಶ್ ಕುಮಾರ್.
ಜೆಡಿಎಸ್ : ಬಿಎಂ ಫಾರೂಕ್, ಎಸ್.ಎಲ್.ಧರ್ಮೇಗೌಡ
Comments are closed.