ಕರ್ನಾಟಕ

ಬಿಜೆಪಿ ಸೇರಲು ಮುಂದಾದ ಕಾಂಗ್ರೆಸ್ ಶಾಸಕರ ದಂಡು: ಗುಪ್ತಚರ ಇಲಾಖೆ ವರದಿ

Pinterest LinkedIn Tumblr


ಬೆಂಗಳೂರು: ಸಂಪುಟ ರಚನೆ ಕುರಿತಂತೆ ಸಮ್ಮಿಶ್ರ ಸರಕಾರದಲ್ಲಿ ಹಗ್ಗಜಗ್ಗಾಟ ಮುಂದುವರೆದಂತೆ, ಇತ್ತ ರಾಜ್ಯ ಗುಪ್ತಚರ ಇಲಾಖೆಯು ಕೈ ಶಾಸಕರ ದಂಡು ಬಿಜೆಪಿ ಸೇರಲು ಮುಂದಾಗಿದೆ ಎಂದು ವರದಿ ಬಿಡುಗಡೆ ಮಾಡಿದೆ.

ಸಚಿವ ಸ್ಥಾನ ತಪ್ಪಿದರೆ ಬಂಡಾಯವೇಳುವ ಸಾಧ್ಯತೆಯಿದ್ದು, ಗುಪ್ತಚರ ಇಲಾಖೆ ವರದಿ ಕಾಂಗ್ರೆಸ್ ಹೈಕಮಾಂಡ್ ತಲೆನೋವುಂಟು ಮಾಡಿದೆ.

ಜೆಡಿಎಸ್‌ನ ಒಂದಿಬ್ಬರೂ ಶಾಸಕರೂ ಕೂಡ ಬಿಜೆಪಿ ಸಂಪರ್ಕ ಸಾಧ್ಯತೆ ಇದೆ. ಆದ್ದರಿಂದ ಹೆಚ್ಚು ಜಾಣ್ಮೆಯಿಂದ ಸಚಿವ ಸಂಪುಟವನ್ನು ರಚನೆ ಮಾಡುವ ಹೊಣೆ ಇದೀಗ ನಾಯಕರ ಮೇಲಿದೆ.

ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್, ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್, ಶಿವಾನಂದ ಪಾಟೀಲ್, ರಾಜಶೇಖರ್ ಪಾಟೀಲ್ ಹುಮ್ನಾಬಾದ್, ಬಿ.ಸಿ ಪಾಟೀಲ್, ಕಂಪ್ಲಿ ಶಾಸಕ ಗಣೇಶ್, ಆನಂದ ಸಿಂಗ್, ಪ್ರತಾಪ್ ಗೌಡ ಪಾಟೀಲ್ ಸೇರಿದಂತೆ ಕಾಂಗ್ರೆಸ್ ನ 11 ಶಾಸಕರ ಪಟ್ಟಿಯನ್ನು ಸಿಎಂಗೆ ಗುಪ್ತಚರ ಇಲಾಖೆ ಕೊಟ್ಟಿದೆ.

ಅವಕಾಶವಂಚಿತರು ಯಾವುದೇ ಗಳಿಗೆಯಲ್ಲಿ ಬೇಕಾದರೂ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರನ್ನು ಸಂಪರ್ಕಿಸಬಹುದು ಎಂದು ಗುಪ್ತಚರ ಇಲಾಖೆಯು ಹೇಳಿದೆ. ಗುಪ್ತಚರ ಇಲಾಖೆಯು ನೀಡಿದ ಈ ಎಚ್ಚರಿಕೆಯನ್ನು ಸಿಎಂ ಕುಮಾರಸ್ವಾಮಿ ಇದೀಗ ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರ ಗಮನಕ್ಕೆ ತಂದಿದ್ದಾರೆ.

Comments are closed.