ಕರ್ನಾಟಕ

ಇಂದು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಲಿರುವ ಕುಮಾರಸ್ವಾಮಿ

Pinterest LinkedIn Tumblr


ಬೆಂಗಳೂರು: ಕಾಂಗ್ರೆಸ್‌ -ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಾಳೆ ಸೋಮವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ.

ದೆಹಲಿಯ 7 ಲೋಕ್‌ ಕಲ್ಯಾಣ್‌ ಮಾರ್ಗ್‌ನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ಸೌಜನ್ಯದ ಭೇಟಿ ನಡೆಯಲಿದೆ. ಬೆಳಗ್ಗೆ 11.30 ರ ವೇಳೆಗೆ ಭೇಟಿಗೆ ಸಮಯ ನಿಗದಿಯಾಗಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ ನಾನು ಪ್ರಧಾನಿ ಅವರ ಸೌಜನ್ಯದ ಭೇಟಿ ಮಾಡುತ್ತಿದ್ದೇನೆ. ದೊಡ್ಡ ಮಟ್ಟದ ಚರ್ಚೆ ಏನಿಲ್ಲ. ಕೇಂದ್ರ ದಿಂದ ಕೆಲ ಯೋಜನೆಗಳಿಗೆ ತುರ್ತು ಅನುಮತಿಗಳು ಬೇಕಿದ್ದು , ಅದರ ಬಗ್ಗೆ ಚರ್ಚಿಸುತ್ತೇನೆ. ಸರ್ಕಾರಕ್ಕೆ ಕೇಂದ್ರ ಸರ್ಕಾರದ ನೆರವು ಕೋರುತ್ತೇನೆ. ರಾಜ್ಯ ಸರ್ಕಾರದ ಯಶಸ್ಸಿಗೆ ಕೇಂದ್ರದ ನೆರವು ಅಗತ್ಯವಾಗಿದೆ ಎಂದರು.

ಕೇಂದ್ರ ಗೃಹ ಮತ್ತು ಇಂಧನ ಸಚಿವ ಪಿಯೂಷ್‌ ಗೋಯಲ್‌ ಅವರನ್ನೂ ಬಳಿಕ ಭೇಟಿಯಾಗಿ ಕಲ್ಲಿದ್ದಿಲಿನ ಪೂರೈಕೆ ಕುರಿತು ಚರ್ಚೆ ನಡೆಸುವುದಾಗಿ ತಿಳಿಸಿದರು.

Comments are closed.