ಕರ್ನಾಟಕ

ರಾಜ್ಯದ ಹಲವು ಕಡೆ ಐಟಿ ದಾಳಿ; ಮೊಳಕಾಲ್ಮೂರಿನಲ್ಲಿ 2 ಕೋಟಿ ವಶ!

Pinterest LinkedIn Tumblr


ಬೆಂಗಳೂರು: ಚುನಾವಣೆಗೆ ಮುನ್ನಾದಿನವೂ ಐಟಿ ಅಧಿಕಾರಿಗಳು ದಾಳಿ ಮುಂದುವರಿಸಿದ್ದು, ರಾಜ್ಯದ ವಿವಿಧೆಡೆ ಅಭ್ಯರ್ಥಿಗಳು ಮತ್ತು ಆಪ್ತರಿಗೆ ಶಾಕ್‌ ನೀಡಿದ್ದಾರೆ.

ಮೊಳಕಾಲ್ಮೂರಿನ ಹೆತ್ತಲ ಬೊಮ್ಮನಹಟ್ಟಿ ಗ್ರಾಮದ ಬಳಿ ಬೆಳಗಿನ ಜಾವ 4 ಗಂಟೆ ವೇಳೆ ಐಟಿ ಅಧಿಕಾರಿಗಳು ಮಿಂಚಿನ ದಾಳಿ ನಡೆಸಿ 2.17 ಕೋಟಿ ರೂಪಾಯಿ ಹಣ ಜಪ್ತಿ ಮಾಡಿ, ಕಾರಿನ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ಆಂಧ್ರ ಪ್ರದೇಶದಿಂದ ಬಂದಿದ್ದ ಕಾರು ಬಳ್ಳಾರಿ ಮೂಲದ್ದು ಎಂದು ವರದಿಯಾಗಿದೆ.

ದೇವನಹಳ್ಳಿಯಲ್ಲಿ 17 ಲಕ್ಷ ರೂ ಜಪ್ತಿ
ಬೆಂಗಳೂರು ಗ್ರಾಮಾಂತರ ದ ದೇವನಹಳ್ಳಿ ಯ ನವಯುಗ ಚೆಕ್‌ ಪೋಸ್ಟ್‌ ಬಳಿ ಇನ್ನೋವಾ ಕಾರಿನಲ್ಲಿ ದಾಖಲೆಯಿಲ್ಲದೆ ಸಾಗಿಸುತ್ತಿದ್ದ 17 ಲಕ್ಷ ರೂಪಾಯಿ ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಚಾಲಕ ನವೀನ್‌ ಕುಮಾರ್‌ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕಾರವಾರದಲ್ಲಿ ಸೈಲ್‌ಗೆ ಶಾಕ್‌

ಕಾರವಾರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ಶಾಸಕ ಸತೀಶ್‌ ಸೈಲ್‌ ಅವರ ಆಪ್ತ ಮಂಗಲದಾಸ್‌ ಕಾಮತ್‌ ಅವರ ಅಂಕೋಲದ ಆವರ್ಸಾ ಗ್ರಾಮದ ನಿವಾಸದ ಮೇಲೆ ಐಟಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಮಂಗಳೂರಿನಲ್ಲೂ ದಾಳಿ ನಡೆಸಿದ ಬಗ್ಗೆ ವರದಿಯಾಗಿದೆ.

Comments are closed.