ಕರ್ನಾಟಕ

ಬಾಗಲಕೋಟೆ ಸಮೀಪ ಪೊಲೀಸ್ ಜೀಪ್-ಲಾರಿ ಡಿಕ್ಕಿ; ಡಿವೈಎಸ್ಪಿ ಸೇರಿದಂತೆ ಮೂವರು ಪೊಲೀಸರ ದುರ್ಮರಣ

Pinterest LinkedIn Tumblr

ಬಾಗಲಕೋಟೆ: ಲಾರಿ ಮತ್ತು ಪೊಲೀಸ್​ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಪೊಲೀಸರು ಮೃತಪಟ್ಟಿದ್ದಾರೆ.

ಕೂಡಲ ಸಂಗಮ ಕ್ರಾಸ್ ಬಳಿ ಲಾರಿ ಹಾಗೂ ಪೊಲೀಸ್ ಜೀಪ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೆಂಗಳೂರಿನ ಸಿಐಡಿ ಡಿವೈಎಸ್‌ಪಿ ಬಾಳೇಗೌಡ(55), ಸಿಐಡಿ ಪಿಎಸ್‌ಐ ಕೆ.ಎಚ್.ಶಿವಸ್ವಾಮಿ(55) ಹಾಗೂ ಚಾಲಕ ವೇಣು ಗೋಪಾಲ(25) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆ ನಿಮಿತ್ತ ಕರ್ತವ್ಯಕ್ಕಾಗಿ ಬೆಂಗಳೂರಿನಿಂದ ಬಾಗಲಕೋಟೆಗೆ ಬರುವಾಗ ಮಾರ್ಗಮಧ್ಯೆ ಮಧ್ಯರಾತ್ರಿ 12.30ಕ್ಕೆ ಅಪಘಾತ ಸಂಭವಿಸಿದೆ.

ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಹಾಗೂ ಡಿವೈಎಸ್‌ಪಿ ಗಿರೀಶ ಸೇರಿದಂತೆ ಇತರೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಡಿವೈಎಸ್‌ಪಿ ಬಾಳೇಗೌಡ ಬೆಂಗಳೂರಿನ ಕೊಟ್ಟಿಗೆಪಾಳ್ಯಾ ನಿವಾಸಿ, ಸಿಪಿಐ ಕೆ.ಎಚ್‌.ಶಿವಸ್ವಾಮಿ ಚಾಮರಾಜನಗರ ಜಿಲ್ಲೆಯವರು ಎಂದು ತಿಳಿದು ಬಂದಿದೆ. ಚಾಲಕ ಸಹ ಬೆಂಗಳೂರು ಮೂಲದವರು ಎನ್ನಲಾಗಿದೆ.

ಬಡ್ತಿ ನೀಡಿ ಸಿಐಡಿಗೆ: ತುಮಕೂರು, ಕುಣಿಗಲ್‌ನಲ್ಲಿ ವೃತ್ತನೀರಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದ ಬಾಳೇಗೌಡ ಅವರಿಗೆ ಇತ್ತೀಚೆಗಷ್ಟೇ ಡಿವೈಎಸ್‌ಪಿ ಆಗಿ ಬಡ್ತಿ ನೀಡಿ ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು.

Comments are closed.