ಕರ್ನಾಟಕ

ನಂದಿನಿ ಹಾಲಿನ ಪ್ಯಾಕೆಟ್‌ನಲ್ಲೂ ಮತದಾನದ ಜಾಗೃತಿ

Pinterest LinkedIn Tumblr


ಬೆಂಗಳೂರು: ಮೇ 12ರಂದು ಮತದಾನ ಮಾಡಲು ನಂದಿನಿ ಹಾಲಿನ ಪ್ಯಾಕೆಟ್‌ ಸಹ ನೆನಪಿಸುತ್ತದೆ!

ಹೆಚ್ಚಿನ ಸಂಖ್ಯೆಯಲ್ಲಿ ಮತದಾನವಾಗುವಂತೆ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಕೈಕೊಂಡಿರುವ ಚುನಾವಣಾ ಆಯೋಗ, ಕೆಎಂಎಫ್‌ನ ನಂದಿನಿ ಹಾಲಿನ ಪ್ಯಾಕೆಟ್‌ನಲ್ಲೂ ಮತದಾನ ಮಾಡುವಂತೆ ಉತ್ತೇಜಿಸುತ್ತಿದೆ.

ದೃಶ್ಯ, ಶ್ರವ್ಯ ಹಾಗೂ ಮುದ್ರಣ ಮಾಧ್ಯಮಗಳಲ್ಲಿ ಮತದಾನ ಮಾಡುವಂತೆ ಜಾಗೃತಿ ಸಂದೇಶಗಳನ್ನು ಬಿತ್ತರಿಸುವ ಜತೆಗೆ, ದೈನಂದಿನ ಬಳಕೆಗೆ ಖರೀದಿಸುವ ವಸ್ತುಗಳ ಮೇಲೆಯೂ ಸಾರ್ವಜನಿಕರನ್ನು ಎಚ್ಚರಿಸುವ ಕೆಲಸಕ್ಕೆ ಆಯೋಗ ಕ್ರಮ ಕೈಗೊಂಡಿದೆ. ನಂದಿನಿ ಹಾಲಿನ ಪ್ಯಾಕೆಟ್‌ ಸೇರಿದಂತೆ ಅನೇಕ ಉತ್ಪನ್ನಗಳ ಮೇಲೆ ಮೇ 12ರಂದು ತಪ್ಪದೇ ಮತ ಚಲಾಯಿಸಿ ಎಂಬ ಸಂದೇಶಗಳನ್ನು ಮುದ್ರಿಸಲಾಗಿದೆ.

ರಾಜ್ಯಾದ್ಯಂತ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಜಾಗೃತಿ ಜಾಥಾ, ಸೈಕಲ್‌ ಜಾಥಾ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಈ ಬಾರಿ ಚುನಾವಣಾ ಆಯೋಗ ಏರ್ಪಡಿಸಿತ್ತು.

Comments are closed.