ಕರ್ನಾಟಕ

ಬೆಂಗಳೂರಿನಲ್ಲಿ ಪತಿಯ ಎದುರೇ ಪತ್ನಿಗೆ ಲೈಂಗಿಕ ಕಿರುಕುಳ

Pinterest LinkedIn Tumblr

ಬೆಂಗಳೂರು: ಪತಿ ಜತೆಯಲ್ಲಿರುವಂತೆ ಮಹಿಳೆಯೊಬ್ಬರ ಟಿ ಶರ್ಟ್ ಹಿಡಿದೆಳೆದು ಯುವಕನೊಬ್ಬ ಆಕೆಗೆ ಕಿರುಕುಳ ನಿಡಿದ ಘಟನೆ ಬೆಂಗಳೂರಿನ ಜೆಪಿ ನಗರದಲ್ಲಿ ನಡೆದಿದೆ.

ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು ಜೆಪಿ ನಗರದ ಹೋಟೆಲ್ ಒಂದರಲ್ಲಿ ರಾತ್ರಿ ಊಟ ಮುಗಿಸಿ ಹೊರಬರುತ್ತಿದ್ದ ಉತ್ತರ ಭಾರತ ಮೂಲದ ದಂಪತಿಗಳಿಗೆ ಈ ವಿಚಿತ್ರ ಅನುಭವವಾಗಿದೆ.

ಮಹಾರಾಷ್ಟ್ರ ಮೂಲದ ಯುವಕ ಮಹಿಳೆಗೆ ಕಿರುಕುಳ ನೀಡಿದ್ದನೆನ್ನಲಾಗಿದೆ.. “ರಾತ್ರಿ ಊಟ ಮುಗಿಸಿ ಹೋಟೆಲ್ ನಿಂದ ಹೊರಬರುತ್ತಿದ್ದ ದಂಪತಿಗಳ ಬಳಿ ತನ್ನ ಸ್ಪೋರ್ಟ್ಸ್ ಬೈಕ್ ನಲ್ಲಿ ಬಂದ ಯುವಕ ಮಹಿಳೆಯ ಟಿ-ಶರ್ಟ್ ಎಳೆದಿದ್ದಾನೆ ಅಲ್ಲದೆ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ಕುಪಿತಗೊಂಡ ಮಹಿಳೆ ಕಿರುಚಿದ್ದಾರೆ.

ಮಹಿಳೆಯ ಕಿರುಚುವಿಕೆ ಕೇಳಿ ಸಾರ್ವಜನಿಕರು ಗುಂಪು ಸೇರಿದ್ದು ಕಿರುಕುಳ ನೀಡುತ್ತಿದ್ದ ಯುವಕನಿಂದ ಆಕೆಯನ್ನು ಪಾರು ಮಾಡಿದ್ದಾರೆ. ಮತ್ತು ಯುವಕನಿಗೆ ಥಳಿಸಿದ್ದಾರೆ.” ಪೋಲೀಸರು ಮಾಹಿತಿ ನೀಡಿದರು.

ಘಟನೆ ಸಂಬಂಧ ದಕ್ಷಿಣ ವಲಯದ ಯಾವ ಪೋಲೀಸ್ ಠಾಣೆಗೆ ಸಹ ಅವರು ದೂರಿತ್ತಿಲ್ಲ. ಮಹಿಳೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದ ವಿವರಗಳಿಂದ ನಮಗೆ ಮಾಹಿತಿ ದೊರಕಿತು. ನಾವು ಸ್ಥಳಕೆ ತೆರಳುವಾಗ ಅಲ್ಲಿ ಘಟನೆಗೆ ಕಾರಣವಾದ ಯುವಕನಾಗಲಿ, ಬೈಕ್ ಆಗಲಿ ಇರಲಿಲ್ಲ. ಸಧ್ಯ ನಾವು ಸ್ಥಳದಲ್ಲಿನ ಸಿಸಿಸ್ಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದೇವೆ. ಪ್ರತ್ಯಕ್ಷದರ್ಶಿಗಳ ಹೇಳಿಕೆ, ಸಂತ್ರಸ್ಥರ ಹೇಳಿಕೆಗಳನ್ನು ನಾಇವು ಇನ್ನೂ ಪಡೆಯಬೇಕಿದೆ.” ಪೋಲೀಸ್ ಅಧಿಕಾರಿಗಳು ಹೇಳಿದರು.

ಇದೇ ವೇಳೆ ಈ ಘಟನೆ ನೈತಿಕ ಪೋಲೀಸ್ ಗಿರಿಯದಾಗಿದೆಯೆ ಎನ್ನುವ ಕುರಿತೂ ನಾವು ತನಿಖೆ ಕೈಗೊಂಡಿದ್ದೇವೆ. ಯುವಕನನ್ನು ಥಳಿಸಿದ ಗುಂಪು ಅವನ ಬೈಕನ್ನು ಎಲ್ಲಿ ತೆಗೆದುಕೊಂಡು ಹೋಗಿದೆ ಎನ್ನುವುದನ್ನು ಇನ್ನಷ್ಟೇ ತಿಳಿಯಬೇಕಿದೆ. ಆ ಬೈಕ್ ನ ರಿಜಿಸ್ಟರ್ ಸಂಖ್ಯೆ ತಿಳಿದರೆ ಅಪರಾಧಿಯ ಪತ್ತೆಗೆ ಸಹಾಯವಾಗಲಿದೆ ಎನ್ನುವುದಾಗಿ ಪೋಲೀಸರು ಹೇಳಿದ್ದಾರೆ.

Comments are closed.