ಕರ್ನಾಟಕ

ಕರ್ನಾಟಕ ಚುನಾವಣೆ ಪ್ರಚಾರಕ್ಕೆ ಬರುವಂತೆ ಯೋಗಿ ಆದಿತ್ಯನಾಥ್ ಗೆ ಮನವಿ !

Pinterest LinkedIn Tumblr

ನವದೆಹಲಿ: ಉತ್ತರ ಪ್ರದೇಶ ಲೋಕಸಭೆ ಮರುಚುನಾವಣೆಯಲ್ಲಿ ಗೋರಕ್ ಪುರದಲ್ಲಿ ಬಿಜೆಪಿ ಪರಾಭವಗೊಂಡರು ಸಿಎಂ ಯೋಗಿ ಆದಿತ್ಯನಾಥ್ ಅವರ ವರ್ಚಸ್ಸಿಗೆ ಯಾವುದೇ ಧಕ್ಕೆಯಾಗಿಲ್ಲ, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ಮಾಡುವಂತೆ ಬಿಜೆಪಿ ನಾಯಕರು ಯೋಗಿ ಆದಿತ್ಯನಾಥ್ ಅವರಲ್ಲಿ ಮನವಿ ಮಾಡಿದ್ದಾರೆ.

ಆಡಳಿತಾರೂಢ ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರಚಾರ ಮಾಡಲು ರಾಜ್ಯಕ್ಕೆ ಬರುವಂತೆ ಯೋಗಿ ಆದಿತ್ಯನಾಥ್ ಬಳಿ ಕೇಳಿಕೊಂಡಿದ್ದಾರೆ. ಚುನಾವಣಾ ಪ್ರಚಾರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನಂತರ ಸ್ಟಾರ್ ಪ್ರಚಾಕರಕರ ಸ್ಥಾನ ಯೋಗಿಗೆ ಒಲಿದು ಬಂದಿದೆ.

ಲಿಂಗಾಯತ ಸಮುದಾಯದವರು ಸಿಎಂ ವಿರುದ್ಧ ಮುನಿಸಿಕೊಂಡಿದ್ದಾರೆ, ಹೀಗಾಗಿ ಕಾರ್ಯತಂತ್ರ ರೂಪಿಸಲು ಬಿಜೆಪಿ ಯೋಗಿ ಅವರ ಮೊರೆ ಹೋಗಿದೆ, ಕರ್ನಾಟಕದಲ್ಲಿರುವ ಹಲವು ಮಠಗಳಿಗೆ ಗೋರಕ್ ಪುರ ಮಠ ಮತ್ತು ನಾಥ್ ಪಂಥಿ ಗಳ ಜೊತೆ ಸಾಂಪ್ರದಾಯಿಕ ಸಂಬಂಧವಿದೆ. ಹೀಗಾಗಿ ಬಿಜೆಪಿ ಗೆ ಯೋಗಿ ಆದಿತ್ಯನಾಥ್ ಉತ್ತಮ ಚಾಯ್ಸ್ ಅಗಿದ್ದಾರೆ ಎಂದು ಉತ್ತರ ಪ್ರದೇಶ ಸಿಎಂ ಅಪ್ತರೊಬ್ಬರು ತಿಳಿಸಿದ್ದಾರೆ.

ಚುನಾವಣೆ ದಿನಾಂಕ ಘೋಷಣೆಯಾಗುವುದಕ್ಕು ಮೊದಲೇ ಯೋಗಿ ಆದಿತನಾಥ್ ಕರ್ನಾಟಕದಲ್ಲಿ ಎರಡು ಮೂರು ರ್ಯಾಲಿಗಳಲ್ಲಿ ಭಾಗಹವಹಿಸಿದ್ರು. ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ರಾಜ್ಯದಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.

ಪಕ್ಷದ ರಾಷ್ಟ್ರಿಯ ಅಧ್ಯಕ್ಷ ಅಮಿತ್‌ ಶಾ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್‌, ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌, ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌, ಮಾಹಿತಿ ಮತ್ತು ಪ್ರಸಾರ ಸಚಿವೆ ಸ್ಮೃತಿ ಇರಾನಿ , ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಹಾಗೂ ಆಹಾರ ಸಂಸ್ಕರಣಾ ಕೈಗಾರಿಕೆಗಳ ರಾಜ್ಯ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಅವರು ಮತ ಸೆಳೆಯಲು ರಾಜ್ಯದಲ್ಲಿ ಪ್ರವಾಸ ಮಾಡಲಿದ್ದಾರೆ.

ಸಿನಿಮಾ ನಟಿಯರಾದ ಶ್ರುತಿ, ತಾರಾ ಅನೂರಾಧ ಅವರ ವರ್ಚಸ್ಸನ್ನೂ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಲು ಪಕ್ಷವು ನಿರ್ಧರಿಸಿದೆ.

Comments are closed.