ಕರ್ನಾಟಕ

ಸ್ನೇಹಿತನ ಜತೆ ಸೆಕ್ಸ್’ಗೆ ಪತಿ ಒತ್ತಾಯ; ಪತ್ನಿ ಮಾಡಿದ್ದೇನು…?

Pinterest LinkedIn Tumblr

ಬೆಂಗಳೂರು: ತನ್ನ ಸ್ನೇಹಿತನ ಜತೆ ಮಲಗುವಂತೆ ಒತ್ತಾಯಿಸಿದ್ದರಿಂದ ಮನ ನೊಂದ ಶಿಕ್ಷಕಿಯೊಬ್ಬರು ನಿದ್ದೆ ಮಾತ್ರೆಗಳನ್ನು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೆಂಗೇರಿ ಸ್ಯಾಟ್‌ಲೈಟ್‌ನ ಖಾಸಗಿ ಶಾಲೆಯ ಸುಪ್ರಿಯಾ (24) ಆತ್ಮಹತ್ಯೆ ಮಾಡಿಕೊಂಡವರು. ಸಂತ್ರಸ್ತೆಯ ತಾಯಿ ಅಂಥೋನಮ್ಮ ಆಕೆಯ ಪತಿ ಅಶೋಕ್‌ ವಿರುದ್ಧ ದೂರು ನೀಡಿದ್ದಾರೆ.

ಆರೋಪಿ ಅಶೋಕ್‌ ಚಿಕ್ಕಬಳ್ಳಾಪುರದ ಬಸವನಹಳ್ಳಿ ಗ್ರಾಮದವ. ಮಗಳನ್ನು ಸ್ನೇಹಿತನ ಜತೆ ಲೈಂಗಿಕ ಸಂಪರ್ಕ ನಡೆಸಲು ಒತ್ತಾಯಿಸುತ್ತಿದ್ದ. ಒಪ್ಪದಿದ್ದಾಗ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದ. ಈ ಬಗ್ಗೆ ಆಕೆ ಮಹಿಳಾ ಸಹಾಯವಾಣಿಗೆ ವಿವರವಾದ ದೂರು ಸಲ್ಲಿಸಿದ್ದಳು. ಇದನ್ನು ಓದಿ ನನಗೆ ಶಾಕ್‌ ಆಯಿತು ಎಂದು ತಾಯಿ ಅಂಥೋನಮ್ಮ ಹೇಳಿದ್ದಾರೆ.

ಸಹಾಯವಾಣಿಗೆ ದೂರು ಸಲ್ಲಿಸಿದ ಬಳಿಕ ದಂಪತಿಯನ್ನು ಕರೆದು ಪೊಲೀಸ್‌ ಕಮೀಷನರ್‌ ಕಚೇರಿಯಲ್ಲಿ ಮಾತುಕತೆ ನಡೆಸಿ ಕಳಿಸಿದ್ದಾರೆ. ಹೀಗೆ ದೂರು ಕೊಟ್ಟಿರುವುದಕ್ಕೆ ಆತ ಮತ್ತಷ್ಟು ಸಿಟ್ಟಾಗಿ ಮೊದಲಿಗಿಂತಲೂ ಹೆಚ್ಚಾಗಿ ಹಿಂಸಿಸಲಾರಂಭಿಸಿದ್ದ. ಬಳಿಕ ಹಿಂಸೆ ತಡೆಯಲಾಗದೆ ಸುಪ್ರಿಯಾ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದರು ಎಂದು ತಾಯಿ ತಿಳಿಸಿದ್ದಾರೆ.

ಕೇರಳದಲ್ಲಿ ಧ್ಯಾನ ಶಿಬಿರದಲ್ಲಿ ಪರಿಚಯವಾಗಿ ಒಳ್ಳೆಯ ವ್ಯಕ್ತಿ ಎಂದು ತಿಳಿದು ಸುಪ್ರಿಯಾ ಏಳು ತಿಂಗಳ ಹಿಂದೆ ಆರೋಪಿಯನ್ನು ಮದುವೆಯಾಗಿದ್ದರು. ಆದರೆ ನಿಜವಾಗಿ ಆಕೆ ಅಂದುಕೊಂಡಿದ್ದು ಬಹಳ ದೊಡ್ಡ ತಪ್ಪಾಗಿತ್ತು ಎಂದು ಅಂಥೋನಮ್ಮ ಹೇಳಿದ್ದಾರೆ.

ಆರೋಪಿ ಹಿಂದೆ ವಾಚ್‌ಮನ್‌ ಆಗಿ ಕೆಲಸ ಮಾಡುತ್ತಿದ್ದು, ಈಗ ಕೆಲಸ ಬಿಟ್ಟು ಪತ್ನಿಯನ್ನೇ ಅವಲಂಬಿಸಿದ್ದ. ನಿನ್ನ ತಾಯಿಯಿಂದ ಹಣ ತೆಗೆದುಕೊಡು ಎಂದು ಪತ್ನಿಯನ್ನು ಪೀಡಿಸುತ್ತಿದ್ದ. ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Comments are closed.