ಕರ್ನಾಟಕ

ರಾಜಧಾನಿಯಲ್ಲಿ ಭಾರಿ ಮಳೆ; ವಾಹನ ಸವಾರರ ಪರದಾಟ

Pinterest LinkedIn Tumblr


ಬೆಂಗಳೂರು: ಬಿಸಿಲಿನ ಝಳದಿಂದ ತತ್ತರಿಸಿದ ಬೆಂಗಳೂರು ನಾಗರಿಕರಿಗೆ ಸೋಮವಾರ ಸಂಜೆ ತುಸು ತಂಪು ಬೀಸಿದೆ.

ಸೋಮವಾರ ಸಂಜೆ ಇದ್ದಕ್ಕಿದ್ದಂತೆ ಭಾರಿ ಮಳೆಯಾಗಿದೆ. ಇದರಿಂದ ವಾಹನ ಸವಾರರು ತೀವ್ರ ಪರದಾಡಿದರು.

ಬೆಂಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಿದೆ.

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಸೋಮವಾರ ಸಂಜೆ ಭಾರಿ ಮಳೆಯಾಗಿದೆ.

ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆ ಬಿದ್ದ ಪರಿಣಾಮ ವಾಹನ ಸವಾರರು ತೀವ್ರ ಪರದಾಡಿದರು. ಮೆಜೆಸ್ಟಿಕ್‌, ಶಾಂತಿನಗರ, ಹಲಸೂರು, ಎಂಜಿ ರಸ್ತೆ ಸೇರಿದಂತೆ ಹಲವೆಡೆ ಮಳೆ ಸುರಿಯಿತು.

ದಿಢೀರ್ ಶುರುವಾದ ಜೋರು ಗಾಳಿ ಮತ್ತು ಮಳೆಯಿಂದ ರಾಮನಗರದಲ್ಲಿ ತಂಪು ಅನುಭವವಾಗಿದೆ.

ಮಂಡ್ಯ, ರಾಮನಗರ, ಬಳ್ಳಾರಿ, ಹರಪನಹಳ್ಳಿ ಸೇರಿದಂತೆ ಇನ್ನೂ ಕೆಲವೆಡೆ ಮಳೆಯಾಗಿದೆ.

Comments are closed.