ಕರ್ನಾಟಕ

RSS ಕಚೇರಿಗೆ ಪ್ರೇಮ ಕುಮಾರಿ!; ಸ್ವಯಂ ಸೇವಕರಿಗೆ ಮುಜುಗರ

Pinterest LinkedIn Tumblr


ಮೈಸೂರು: ಮಾಜಿ ಸಚಿವ ಎಸ್‌.ಎ.ರಾಮದಾಸ್‌ರಿಂದ ಅನ್ಯಾಯ ಆಗಿದೆ ಎಂದು ಕೃಷ್ಣ ರಾಜ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪ್ರೇಮಕುಮಾರಿ ಅವರು ಮೈಸೂರಿನ ಆರ್‌ಎಸ್‌ಎಸ್‌ ಕಚೇರಿಗೆ ತೆರಳಿ ಬೆಂಬಲ ಯಾಚಿಸಿದ್ದಾರೆ.

ಜೆಎಲ್‌ಬಿ ರಸ್ತೆಯಲ್ಲಿರುವ ಸಂಘದ ಕಚೇರಿಗೆ ಆಗಮಿಸಿದ ಪ್ರೇಮಾ ಕುಮಾರಿ ಅವರು ಅಲ್ಲಿದ್ದ ಕಾರ್ಯಕರ್ತರ ಬಳಿ ‘ನಾನು ನಿಮ್ಮ ಸಹೋದರಿ ನನಗೆ ಬೆಂಬಲ ನೀಡಿ’ ಎಂದು ಮನವಿ ಮಾಡಿದರು. ಇದರಿಂದಾಗಿ ಕಾರ್ಯಕರ್ತರು ತೀವ್ರ ಮುಜುಗರ ಅನುಭವಿಸುವಂತಾಯಿತು.

‘ರಾಮ್‌ ದಾಸ್‌ ಅವರಿಗೆ ಟಿಕೆಟ್‌ ಸಿಗದಿರಲು ನಾನು ಕಾರಣಳಲ್ಲ. ಅವರಿಂದ ನನಗೆ ಅನ್ಯಾಯವಾಗಿದೆಎಂದು ಕಾರ್ಯಕರ್ತರ ಬಳಿ ಹೇಳಿಕೊಂಡಿದ್ದಾರೆ’ ಎಂದು ವರದಿಯಾಗಿದೆ.

-ಉದಯವಾಣಿ

Comments are closed.